ಕೊರೊನಾ 3ನೇ ಅಲೆಯಿಂದ ಮಕ್ಕಳಿಗೆ ಇಲ್ಲ ತೀವ್ರ ಅಪಾಯ, ಮಾರಣಾಂತಿಕದ ಸಾಧ್ಯತೆ ಕಡಿಮೆ

ಚಂಡೀಗಢ್​: ದೇಶವೀಗ ಕೊರೊನಾ ಮೂರನೇ ಅಲೆ (Covid 3rd Wave) ಪ್ರಾರಂಭದಲ್ಲಿದೆ. ಇದು ಮಕ್ಕಳ ಮೇಲೆ ಯಾವುದೇ ದೊಡ್ಡ ಪರಿಣಾಮ ಸಾಧ್ಯತೆ ಬಹಳ ಕಡಿಮೆ ಎಂದು ಚಂಡಿಗಢ್​​ನ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆಯ(PGIMER) ನಿರ್ದೇಶಕ ಡಾ. ಜಗತ್​ ರಾಮ್​ ಹೇಳಿದ್ದಾರೆ.
ಅನೇಕ ಮಕ್ಕಳಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗಿವೆ. ಹಾಗಾಗಿ ಮೂರನೇ ಅಲೆ ಮಕ್ಕಳಿಗೆ ಮಾರಣಾಂತಿಕವಾಗಿ ಪರಿಣಮಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಪಿಜಿಐಎಂಇಆರ್ (PGIMER)​​ನಿಂದ ಸರ್ವೆ ನಡೆಸಲಾಗಿತ್ತು. ಚಂಡಿಗಢ್​​ನಲ್ಲಿ ಸುಮಾರು 2700 ಮಕ್ಕಳನ್ನು ಇದರಲ್ಲಿ ಒಳಗೊಳ್ಳಲಾಗಿತ್ತು. ಈ ವೇಳೆ ಶೇ.71ರಷ್ಟು ಮಕ್ಕಳಲ್ಲಿ ಪ್ರತಿಕಾಯಗಳು ಅಭಿವೃದ್ಧಿಯಾಗಿದ್ದು ಕಂಡುಬಂದಿದೆ. ಹಾಗಾಗಿ ಮಕ್ಕಳು ಮೂರನೇ ಅಲೆಯಿಂದ ತೀವ್ರವಾಗಿ ಬಾಧಿತರಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಜಗತ್​ ರಾಮ್​ ತಿಳಿಸಿದ್ದಾರೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲೂ ನಡೆಸಿದ ಸರ್ವೆಯಲ್ಲಿಯೂ ಸಹ ಶೇ.50-75ರಷ್ಟು ಮಕ್ಕಳಲ್ಲಿ ಪ್ರತಿಕಾಯ ಉತ್ಪತ್ತಿಯಾಗಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯಕ್ಕಂತೂ ಮಕ್ಕಳಿಗೆ ಒಂದೂ ಕೊರೊನಾ ಲಸಿಕೆ ಇಲ್ಲ. ಹಾಗಿದ್ದಾಗ್ಯೂ ಕೊವಿಡ್​ 19 ವಿರೋಧಿ ಪ್ರತಿಕಾಯ ಉತ್ಪತ್ತಿಯಾಗಿದೆ. ಈ ಹಿಂದೆ ಕೊರೊನಾ ವೈರಸ್​ ಮೂರನೇ ಅಲೆ ಬಂದರೆ ಅದು ಮಕ್ಕಳಿಗೇ ಹೆಚ್ಚು ಬಾಧಿಸುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ಬೆಳವಣಿಗೆ ನೋಡಿದರೆ ನನಗಂತೂ ಹಾಗೆ ಅನ್ನಿಸುವುದಿಲ್ಲ ಎಂದಿದ್ದಾರೆ. ಕೊರೊನಾ ಮೂರನೇ ಅಲೆ ಬೇಗ ಉತ್ತುಂಗಕ್ಕೆ ಏರುವ ಸಾಧ್ಯತೆ ಕಡಿಮೆ. ಆದರೆ ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಮಾಸ್ಕ್​ಗಳನ್ನು ಕಡ್ಡಾಯವಾಗಿ ಧರಿಸಬೇಕು. ಎಲ್ಲ ಶಿಷ್ಟಾಚಾರಗಳನ್ನೂ ಸರಿಯಾಗಿ ಪಾಲಿಸಬೇಕು ಎಂದು ನಿರ್ದೇಶಕ ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮೈಸೂರು ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ : ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌ ; ದಶಕಗಳ ಸಮಸ್ಯೆಗೆ ತೆರೆ

3ನೇ ಅಲೆ ಮಾರಣಾಂತಿಕವಲ್ಲ
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಏಜೆನೆಟಿಸ್ಟ್, ಪ್ರೊಫೆಸರ್ ಜ್ಞಾನೇಶ್ವರ್ ಚೌಬೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೋವಿಡ್‌ ಮೂರನೇ ಅಲೆ ಮಾರಣಾಂತಿಕವಲ್ಲ ಎಂದು ಅವರು ಹೇಳಿದ್ದಾರೆ. ಕೊರೊನಾ ಲಸಿಕೆ ಪಡೆದವರು ಮತ್ತು ಈಗಾಗಲೇ ಒಮ್ಮೆ ಕೊವಿಡ್​ ಸೋಂಕಿಗೆ ಒಳಗಾಗಿ ಗುಣಮುಖರಾದವರು ಮೂರನೇ ಅಲೆಯಿಂದ ಬಾಧಿತರಾಗುವ ಸಾಧ್ಯತೆ ಕಡಿಮೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಕಾಯಗಳು ಮೂರು ತಿಂಗಳ ನಂತರ ಕಡಿಮೆ ಆಗುತ್ತವೆ. ಹೀಗಾಗಿ ಇನ್ನು ಮೂರು ತಿಂಗಳ ನಂತರ ಕೊವಿಡ್​ 19 ಮೂರನೇ ಅಲೆ ಏಳಬಹುದು. ಆದರೂ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿರುವುದರಿಂದ ಕೊವಿಡ್​ 19 3ನೇ ಅಲೆ ಮಾರಣಾಂತಿಕವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement