ಮುಲ್ಲಾ ಬರಾದಾರ್ ಸಾವಿನ ಸುದ್ದಿ ಅಲ್ಲಗಳೆದ ತಾಲಿಬಾನ್; ಪುರಾವೆಗೆ ಆಡಿಯೋ ಬಿಡುಗಡೆ

ಕಾಬೂಲ್: ವಿರೋಧಿಗಳ ಜೊತೆಗಿನ ಶೂಟೌಟ್​ನಲ್ಲಿ ತಾಲಿಬಾನ್ ಪ್ರಮುಖ ನಾಯಕನೊಬ್ಬ ಮೃತಪಟ್ಟಿದ್ದಾನೆ ಎಂಬ ಸುದ್ದಿಯನ್ನು ತಾಲಿಬಾನ್ ಅಲ್ಲಗಳೆದಿದೆ.
ಅಫ್ಘಾನಿಸ್ತಾನದ ಕಾಬೂಲ್​ನಿಂದ ಅಮೆರಿಕಾ ಹಿಂತೆರಳಿದ ಬಳಿಕ, ಒಂದು ತಿಂಗಳ ಅವಧಿಯಲ್ಲಿ ತಾಲಿಬಾನ್​ನಲ್ಲಿ ಆಂತರಿಕ ಬಿರುಕು ಮೂಡಿದೆ ಎಂಬ ವದಂತಿಗಳು ಕೇಳಿಬಂದಿತ್ತು. ಈ ಬಗ್ಗೆ ತಾಲಿಬಾನ್ ವಕ್ತಾರ ಸುಲೈಲ್ ಶಹೀನ್ ಸ್ಪಷ್ಟೀಕರಣ ನೀಡಿದ್ದಾರೆ.
ತಾಲಿಬಾನ್​ನ ಮಾಜಿ ರಾಜಕೀಯ ಮುಖ್ಯಸ್ಥ ಹಾಗೂ ಕಳೆದ ವಾರ ತಾಲಿಬಾನ್ ಸರ್ಕಾರದ ಉಪ ಪ್ರಧಾನಿ ಎಂದು ನೇಮಕ ಆಗಿರುವ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಮೃತಪಟ್ಟಿದ್ದಾರೆ ಎಂಬ ಸುದ್ದಿಯನ್ನು ಸುಲೈಲ್ ಶಹೀನ್ ತಳ್ಳಿ ಹಾಕಿದ್ದಾನೆ. ಘನಿ ಬರಾದಾರ್ ವಾಯ್ಸ್ ಮೆಸೇಜ್ ಒಂದನ್ನು ಇದಕ್ಕೆ ಪುರಾವೆ ಎಂಬಂತೆ ನೀಡಿದ್ದಾರೆ.
ಕಂದಹಾರ್​ನ ದಕ್ಷಿಣದ ನಗರದಲ್ಲಿ ಮುಲ್ಲಾ ಬರಾದಾರ್ ಸಭೆಯಲ್ಲಿ ಭಾಗವಹಿಸುತ್ತಿರುವ ವಿಡಿಯೋ ಫೂಟೇಜ್ ಒಂದನ್ನು ಕೂಡ ತಾಲೀಬಾನ್ ಬಿಡುಗಡೆಗೊಳಿಸಿದೆ.
ಹಕ್ಕಾನಿ ನೆಟ್​ವರ್ಕ್​ನ ಮುಖ್ಯಸ್ಥ ಸಿರಾಜುದೀನ್ ಹಕ್ಕಾನಿ ಜೊತೆಗೆ ಮುಲ್ಲಾ ಬರಾದಾರ್​ಗೆ ಬಿರುಕು ಮೂಡಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಕಳೆದ ಕೆಲವು ದಿನಗಳಿಂದ ವದಂತಿಗಳು ಹಬ್ಬಿದ್ದವು. ಆ ಬಳಿಕ ಮುಲ್ಲಾ ಬರಾದಾರ್ ಮರಣಿಸಿರುವ ಬಗ್ಗೆಯೂ ಮಾಹಿತಿ ಹರಿದಾಡಿತ್ತು. ಅದನ್ನು ತಾಲಿಬಾನ್ ಸುಳ್ಳು ಎಂದು ಅಲ್ಲಗಳೆದಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement