ಹೈದರಾಬಾದ್‌ನಲ್ಲಿ ಬಾಲಕಿ ಅತ್ಯಾಚಾರ-ಕೊಲೆ: ಆರೋಪಿ ಮಾಹಿತಿ ನೀಡಿದರೆ ಪೊಲೀಸರಿಂದ 10 ಲಕ್ಷ ರೂ ಬಹುಮಾನ

ಹೈದರಾಬಾದ್‌: 6 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಬಗ್ಗೆ ಮಾಹಿತಿ ನೀಡಿದವರಿಗೆ ಹೈದರಾಬಾದ್ ಪೊಲೀಸರು 10 ಲಕ್ಷ ರೂ.ಗಳ ಬಹುಮಾನ ಘೋಷಿಸಿದ್ದಾರೆ.
ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಮಂಗಳವಾರ ಹೇಳಿದ್ದು, ಆರೋಪಿ ಪಲ್ಲಕೊಂಡ ರಾಜು (30) ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿ ಅಥವಾ ಸುಳಿವು ನೀಡುವ ವ್ಯಕ್ತಿಗೆ 10 ಲಕ್ಷ ರೂ.ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಹೈದರಾಬಾದ್ ನಗರದ ಸೈದಾಬಾದ್ ಪೊಲೀಸ್ ಠಾಣೆ (ಪೂರ್ವ ವಲಯ) ವ್ಯಾಪ್ತಿಯಲ್ಲಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಪಲ್ಲಕೊಂಡ ರಾಜು (30)  ಗಂಭೀರ ಪ್ರಯತ್ನಗಳ ಹೊರತಾಗಿಯೂ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕೃತ ಪತ್ರಿಕಾ ಟಿಪ್ಪಣಿ ಹೇಳಿದೆ.
ಡಿಸಿಪಿ ಪೂರ್ವ ವಲಯಕ್ಕೆ 9490616366 ಮತ್ತು ಡಿಸಿಪಿ ಟಾಸ್ಕ್ ಫೋರ್ಸ್ 9490616627 ಗೆ ಮಾಹಿತಿ ರವಾನಿಸಬಹುದು ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಹೈದರಾಬಾದ್ ಸಿಟಿ ಪೋಲಿಸ್ ಬಿಡುಗಡೆ ಮಾಡಿರುವ ಪೋಸ್ಟರ್ ನಲ್ಲಿ ಆರೋಪಿಗಳ ವಿವರಣಾತ್ಮಕ ವಿವರಗಳನ್ನೂ ಉಲ್ಲೇಖಿಸಲಾಗಿದೆ.
ಸೆಪ್ಟೆಂಬರ್ 9 ರಂದು ತೆಲಂಗಾಣದ ಹೈದರಾಬಾದ್ ನ ಸಿಂಗರೇಣಿ ಕಾಲೋನಿಯಲ್ಲಿ 6 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ.
ಹೈದರಾಬಾದ್ ನ ಸೈದಾಬಾದ್ ಪೊಲೀಸ್ ವ್ಯಾಪ್ತಿಯ ಪ್ರದೇಶದಲ್ಲಿ ಅಪ್ರಾಪ್ತೆಯ ಸಾವು ಆಕ್ರೋಶಕ್ಕೆ ಕಾರಣವಾಗಿದೆ. ಸಂತ್ರಸ್ತೆಯ ಪೋಷಕರು, ನೂರಾರು ಸ್ಥಳೀಯರೊಂದಿಗೆ ಸೇರಿಕೊಂಡು ಸೆಪ್ಟೆಂಬರ್ 10 ರಂದು ಚಂಪಾಪೇಟ್ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು.
ಹೈದರಾಬಾದ್ ಕಲೆಕ್ಟರ್ ಎಲ್. ಶ್ರಮನ್ ಅವರು ಸಂತ್ರಸ್ತೆಯ ಕುಟುಂಬ ಮತ್ತು ಸ್ಥಳೀಯರನ್ನು ಭೇಟಿಯಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮಗಳ ಭರವಸೆ ನೀಡಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ