ಕುಮಟಾ : ಹೊಲನಗದ್ದೆ ಕಡ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೇಬರ ಪತ್ತೆ..!

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಕಡ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೇಬರ ಪತ್ತೆಯಾಗಿದೆ. ಸುಮಾರು 3 ಮೀಟರುಗಳಷ್ಟು ಉದ್ದವಿರುವ ಡಾಲ್ಫಿನ್ ಯಾವಕಾರಣದಿಂದ ಮೃತಪಟ್ಟಿದೆ ಎನ್ನುವುದು ತಿಳಿದು ಬಂದಿಲ್ಲ.
ಇದು ಗಂಡು ಡಾಲ್ಪಿನ್ ಆಗಿದ್ದು ಕಳೇಬರದ ಮೇಲೆ ಮೇಲ್ನೋಟಕ್ಕೆ ಯಾವುದೇ ಗಾಯದ ಗುರುತು ಕಂಡು ಬರುತ್ತಿಲ್ಲ. ಮೀನುಗಾರರು ಇದನ್ನು ಹಂದಿ ಮೀನು ಎಂದು ಕರೆಯುತ್ತಾರೆ. ಈ ಮೀನನ್ನು ಯಾರೂ ತಿನ್ನುವುದಿಲ್ಲ ಹಾಗೂ ಹಿಡಿಯುವುದೂ ಇಲ್ಲ. ಸಾಮಾನ್ಯವಾಗಿ 100ರಿಂದ 150 ನಾಟಿಕಲ್ ಮೈಲು ಸಮುದ್ರದ ಒಳಗೆ ವಾಸಿಸುವ ಅತ್ಯಂತ ಮೃದು ಸ್ವಭಾವದ ಈ ಮೀನು ಸಮುದ್ರದಲ್ಲಿ ಇದರ ಹಅರುತ್ತ ಜಿಗಿಯುತ್ತ ಸಾಗುವಾಗ ಪ್ರವಾಸಿಗರನ್ನು ಸಮ್ಮೋಹನ ಗೊಳಿಸುತ್ತದೆ.
ಆದರೆ ಇತ್ತೀಚಿನ ದಿನದಲ್ಲಿ ಉತ್ತ ರ ಕನ್ನಡದ ಕರಾವಳಿಯಲ್ಲಿ ಡಾಲ್ಫಿನ್ ಸಾವು ಹೆಚ್ಚುತ್ತಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಕುಮಟಾಸುತ್ತಮುತ್ತಲಿನ ಸಮುದ್ರ ತೀರದಲ್ಲಿಯೇ 8 ಕ್ಕೂ ಹೆಚ್ಚು ಡಾಲ್ಫಿನ್ ಕಳೇಬರ ಪತ್ತೆಯಾಗಿದೆ. ಮುರ್ಡೇಶ್ವರದಿಂದ ಕಾರವಾರದ ತನಕ ಡಾಲ್ಫಿನ್ ಕಳೇಬರ ಪತ್ತೆಯಾಗುತ್ತಿದೆ. ಡಾಲ್ಫಿನ್ ಸಾವಿಗೆ ಕಾರಣ ಕಂಡು ಹಿಡಿಯದಿದ್ದಲ್ಲಿ ಮುಂದಿನ ದಿನದಲ್ಲಿ ಅರಬ್ಬಿ ತೀರದ ಮೆರುಗು ಮರೆಯಾಗಬಹುದು ಎಂದು ಪರಿಸರ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕುಮಟಾ ವಲಯ ಅರಣ್ಯಾಧಿಕಾರಿ ಪ್ರವೀಣ್ ನಾಯಕ ಇದನ್ನು ಡಾಲ್ಫಿನ್ ಕಳೆಬರ ಎಂದು ಹೇಳಿದ್ದು, ಅದು ಸಾಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸತ್ತ ಡಾಲ್ಫಿನ್ ಕಳೇಬರ ವನ್ನು ತಜ್ಞರಿಗೆ ಕಳಿಸಿದ್ದಾರೆ. ಅದರ ವರದಿಯ ಆಧಾರದಲ್ಲಿ ಡಾಲ್ಫಿನ್ ರಕ್ಷಣೆ ಗೆ ಯೋಜನೆ ರೋಪಿಸಬೇಕಾಗಿದೆ ಎನ್ನುತ್ತಾರೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement