ಸೆಪ್ಟೆಂಬರ್‌ 17: ದೇಶದಲ್ಲೇ ಅತಿ ಹೆಚ್ಚು ಲಸಿಕೆ ನೀಡಿದ ಎರಡನೇ ರಾಜ್ಯ ಕರ್ನಾಟಕ..!

ಬೆಂಗಳೂರು: ಶುಕ್ರವಾರ ನಡೆದ ಕೊವಿಡ್ ಲಸಿಕೆ ಅಭಿಯಾನದ ಮೂಲಕ ಕರ್ನಾಟಕ ಇಡೀ ದೇಶದಲ್ಲಿ ಅತಿ ಹೆಚ್ಚು ಲಸಿಕೆ ನಿರ್ವಹಿಸಿದ  ಎರಡನೇ  ರಾಜ್ಯ ಎಂಬ ಹಿರಿಮೆಗೆ ಪಾತ್ರವಾಗಿದೆ.
ಮೆಗಾ ವ್ಯಾಕ್ಸಿನೇಷನ್ ಅಭಿಯಾನದ ಸಮಯದಲ್ಲಿ 27,80,032 ಕೋವಿಡ್ -19 ಲಸಿಕೆ ಪ್ರಮಾಣವನ್ನು  ನೀಡುವ ಮೂಲಕ ಕರ್ನಾಟಕ ಶುಕ್ರವಾರ ಲಸಿಕೆ ಹಾಕುವಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಬಿಹಾರದಲ್ಲಿ 29,38,653 ಡೋಸ್​ ಕೊರೊನಾ ಲಸಿಕೆ ನೀಡಿ ಪ್ರಥಮ ಸ್ಥಾನದಲ್ಲಿದ್ದು, 27,80,032 ಡೋಸ್​ ಲಸಿಕೆ ನೀಡಿರುವ ಕರ್ನಾಟಕ ಎರಡನೇ ಸ್ಥಾನ ಪಡೆದುಕೊಂಡಿದೆ. ಕರ್ನಾಟಕದಲ್ಲೊಂದೇ ಶುಕ್ರವಾರ 12,000 ಕೊವಿಡ್ ಲಸಿಕೆ ವಿತರಣಾ ಬೂತ್​ಗಳನ್ನು ತೆರೆಯಲಾಗಿತ್ತು.
ಕೊವಿಡ್ ಲಸಿಕೆ ವಿತರಣೆಯಲ್ಲಿ ಈ ಸಾಧನೆಗೆ ಕಾರಣೀಕರ್ತರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ಸಿಬ್ಬಂದಿಗೂ ಆರೋಗ್ಯ ಸಚಿವ ಡಾ.ಸುಧಾಕರ್ ಧನ್ಯವಾದ ಅರ್ಪಿಸಿದ್ದಾರೆ.
ಬೆಂಗಳೂರಲ್ಲಿ ಸತಿ ಹೆಚ್ಚು, ನಂತರ ಬೆಳಗಾವಿ..:
ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 3.98 ಲಕ್ಷ ಡೋಸ್, ಬೆಳಗಾವಿಯಲ್ಲಿ 2.39 ಡೋಸ್, ದಕ್ಷಿಣ ಕನ್ನಡದಲ್ಲಿ 1.33 ಡೋಸ್, ಬಳ್ಳಾರಿಯಲ್ಲಿ 1.33 ಲಕ್ಷ ಡೋಸ್, ತುಮಕೂರು ಜಿಲ್ಲೆಯಲ್ಲಿ 1.24 ಲಕ್ಷ ಡೋಸ್ ಮತ್ತು ಮಂಡ್ಯ ಜಿಲ್ಲೆಯಲ್ಲಿ 1.15 ಲಕ್ಷ ಡೋಸ್ ಕೊವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಶುಕ್ರವಾರ ವಿತರಿಸಲಾದ ಕೊವಿಡ್ ಲಸಿಕೆ ಸೇರಿ ರಾಜ್ಯದಲ್ಲಿ ಸೆಪ್ಟೆಂಬರ್ ತಿಂಗಳೊಂದರಲ್ಲೇ ಒಟ್ಟು 87 ಲಕ್ಷ ಡೋಸ್ ಕೊವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಈ ತಿಂಗಳಾಂತ್ಯಕ್ಕೆ 1.5 ಕೋಟಿ ಡೋಸ್ ಕೊವಿಡ್ ಲಸಿಕೆಯನ್ನು ವಿತರಿಸುವ ವಿಶ್ವಾಸ ಆರೋಗ್ಯ ಇಲಾಖೆಗಿದೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ ; 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸೇರಿ ಮೂವರು ಅರೆಸ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement