ಮಗುವಿನ ಶವ ಬೋರ್​ವೆಲ್​ನಲ್ಲಿ ಪತ್ತೆ: ಕುಟುಂಬಸ್ಥರಿಗೆ ತಂದೆಯೇ ಕೊಲೆ ಮಾಡಿದ ಅನುಮಾನ..?

ಬೆಳಗಾವಿ: ಪ್ರಾರ್ಥನೆ ಫಲಿಸಿಲ್ಲ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರು ಗ್ರಾಮದಲ್ಲಿ ಬೋರ್​ವೆಲ್​ಗೆ ಬಿದ್ದಿದ್ದ ಎರಡು ವರ್ಷದ ಮಗು ಮೃತಪಟ್ಟಿದೆ.ಈ ಸಾವಿನ ಕುರಿತು ಬಾಲಕನ ತಂದೆಯ ವಿರುದ್ಧವೇ ಕೊಲೆ ಆರೋಪ ಕೇಳಿಬಂದಿದೆ.

ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರಿಂದ ಪೊಲೀಸರು ಸಿದ್ದಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಕನ ಶವವನ್ನು ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರು ಗ್ರಾಮದಲ್ಲಿ ನಿನ್ನೆ ಸಂಜೆಯಿಂದಲೇ ನಾಪತ್ತೆಯಾಗಿದ್ದ ಶರತ್ ಹಸಿರೆ ಎಂಬ ಎರಡು ವರ್ಷದ ಮಗು ಇಂದು ಸಂಜೆ ಬೋರ್​ವೆಲ್​ ಬಿದ್ದಿದ್ದು ಬೆಳಕಿಗೆ ಬಂದಿತ್ತು. ತೋಟದ ಮನೆಯಲ್ಲಿ ಇದ್ದ ಬಾಲಕನ ಕುಟುಂಬದ ಮನೆಯಿಂದ 200 ಮೀಟರ್ ದೂರದಲ್ಲಿದ್ದ ಬೋರ್​ವೆಲ್​ ಬಿದ್ದು ಮಗು ಮೃತಪಟ್ಟಿದೆ.
ತನಿಖೆಗೆ ಆಗಮಿಸಿದ್ದ ಪೊಲೀಸರನ್ನು ಮಗುವಿನ ತಂದೆ ಸಿದ್ದಪ್ಪ ಬೋರ್ವೆಲ್ ಬಳಿ ಕರೆದೊಯ್ದಿದ್ದ. ಬೋರ್​ವೆಲ್​ನಲ್ಲಿ ನೋಡಿದಾಗ ಮಗು ಇರುವುದು ಗೊತ್ತಾಗಿದೆ. ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಕಾರ್ಯಾಚರಣೆ ಆರಂಭಿಸಿ ನಂತರ ಬೋರ್​ವೆಲ್​ನಿಂದ ಮಗುವನ್ನು ಹೊರತೆಗೆದು ಮಗುವಿನ ತಂದೆ ಸಿದ್ದಪ್ಪನನ್ನು ಹಾರೂಗೇರಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಬೆಂಗಳೂರಲ್ಲಿ 'ಸಿಮ್ ಬಾಕ್ಸ್' ಜಾಲ ಪತ್ತೆ ; ನಾಲ್ವರ ಬಂಧನ, 320 ಸಿಮ್‌ ಕನೆಕ್ಷನ್‌ ಸಾಮರ್ಥ್ಯದ 10 ಸಾಧನ ವಶ

ಮಗುವಿನ ಸಾವಿನ ಕುರಿತು ಅಜ್ಜಿ ಗಂಭೀರ ಆರೋಪವನ್ನು ಮಾಡಿದ್ದರು. ಮಗುವಿನ ತಂದೆ ಸಿದ್ದಪ್ಪ ಕೊಲೆ ಮಾಡಿರುವುದಾಗಿ ಅಜ್ಜಿ ಸರಸ್ವತಿ ದೂರಿದ್ದರು. ಈ ಹಿನ್ನೆಲೆಯಲ್ಲಿ ಮಗುವಿನ ತಂದೆ ಸಿದ್ದಪ್ಪ ಹಸರೆ ಮೇಲೆ ಅನುಮಾನವನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದರು. ಪೊಲೀಸರು ಈ ವಿಚಾರವಾಗಿ ತನಿಖೆ ಮಾಡುತ್ತಿದ್ದಾರೆ. , ಸದ್ಯ ಆರೋಪಿ ತಂದೆ ಹಾರೂಗೇರಿ ಪೊಲೀಸರ ವಶದಲ್ಲಿದ್ದಾನೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement