ರಾಜಕೀಯ ಮೈಲೇಜ್‌ಗಾಗಿ ತನ್ನ ಹೆಸರು ಬಳಸಿದ್ದಕ್ಕೆ ತಂದೆ-ತಾಯಿ ವಿರುದ್ಧವೇ ಕೋರ್ಟ್‌ ಮೆಟ್ಟಿಲೇರಿದ ತಮಿಳಿನ ಸೂಪರ್‌ ಸ್ಟಾರ್‌ ವಿಜಯ..!

ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರು ತಮ್ಮ ತಂದೆ ತಾಯಿ ವಿರುದ್ಧವೇ ಕೋರ್ಟ್‌ ಮೆಟ್ಟಿಲೇರಿದ್ದಾರೆ.
ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ತಮ್ಮ ತಂದೆ-ತಾಯಿ ಸೇರಿದಂತೆ ಸೇರಿದಂತೆ 11 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು,ಅವರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ತನ್ನ ಹೆಸರು ಬಳಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ನನ್ನ ಹೆಸರಿನಲ್ಲಿ ಪಕ್ಷ ಸ್ಥಾಪಿಸಲಾಗಿದೆ. ಇದ್ಯಾವುದು ನನಗೆ ಸಂಬಂಧವಿಲ್ಲ. ಹಾಗಾಗಿ ನನ್ನ ಹೆಸರನ್ನು ಬಳಸಿಕೊಳ್ಳದಂತೆ ತಂದೆ ,ತಾಯಿ ಹಾಗೂ ಪಕ್ಷದ ಇತರ ಪದಾಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ವಿಜಯ್ ಅವರುನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಚೈನೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಅರ್ಜಿ ಸೆ.27 ರಂದು ರಂದು ವಿಚಾರಣೆಗೆ ಬರಲಿದೆ.ನಟ ವಿಜಯ್ ತಂದೆ ಹಾಗೂ ನಿರ್ದೇಶಕ ಎಸ್.ಎ.ಚಂದ್ರಶೇಖರ್ ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಳಮ್ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಸಿದ್ದರು.
ಅವರು ಅಕ್ಟೋಬರ್ 6 ಮತ್ತು 9 ರಂದು ಒಂಬತ್ತು ತಮಿಳುನಾಡು ಜಿಲ್ಲೆಗಳಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ವಿಜಯ್ ಮಕ್ಕಳ್ ಇಯಕ್ಕಂ ಘೋಷಿಸಿತು. ಇದರ ನಂತರ ಈ ಬೆಳವಣಿಗೆ ನಡೆದಿದೆ ಎಂದು ವರದಿಯಾಗಿದೆ.
2020 ರಲ್ಲಿ ನಟ ವಿಜಯ್ ಅವರ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ಅವರ ತಂದೆ ಎಸ್‌.ಎ. ಚಂದ್ರಶೇಖರ್ ನೋಂದಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹಿರಿಯ ನಿರ್ದೇಶಕರು ತಮ್ಮ ಮಗನ ಅಭಿಮಾನಿಗಳ ಸಂಘ ವಿಜಯ್ ಮಕ್ಕಲ್ ಇಯಕ್ಕಂ ಅನ್ನು ಅಖಿಲ ಭಾರತ ತಲಪತಿ ವಿಜಯ್ ಮಕ್ಕಲ್ ಇಯಕ್ಕಂ ಎಂಬ ರಾಜಕೀಯ ಪಕ್ಷವಾಗಿ ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ತಮಿಳು ಸೂಪರ್‌ ಸ್ಟಾರ್‌ ನಟ ವಿಜಯ್‌ ಅವರು ರಾಜಕೀಯಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಪಕ್ಷ ಸ್ಥಾಪನೆಯಾದಾಗಲೇ ಈ ಪಕ್ಷದ ಹಿಂದೆ ವಿಜಯ್ ಇದ್ದಾರೆ. ಅವರು ಪಕ್ಷವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿತ್ತು. ಆದಾಗ್ಯೂ, ತನ್ನ ತಂದೆ ಸ್ಥಾಪಿಸಿದ ಅಖಿಲ ಭಾರತ ತಲಪತಿ ವಿಜಯ್ ಮಕ್ಕಳ ಇಯಕ್ಕಂನೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದರು. ಅವರು ತಮ್ಮ ಅಭಿಮಾನಿಗಳನ್ನು ಪಕ್ಷಕ್ಕೆ ಸೇರದಂತೆ ಕೋರಿದರು.
ಈ ವೇಳೆಯೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ನಟ ವಿಜಯ್, ನನಗೂ ನನ್ನ ತಂದೆ ಚಂದ್ರಶೇಖರನ್ ಸ್ಥಾಪಿಸಿರುವ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದರು.
ಮಾತ್ರವಲ್ಲ ಈ ಪಕ್ಷದೊಂದಿಗೆ ನೇರ ಅಥವಾ ಪರೋಕ್ಷ ಸಂಬಂಧವನ್ನು ನಾನು ಹೊಂದಿಲ್ಲ. ಯಾರದ್ದೋ ರಾಜಕೀಯ ಆಸಕ್ತಿಗಳನ್ನು ಪೊರೈಸಲು ನಾನು ಸಿದ್ಧನಿಲ್ಲ, ಅಲ್ಲದೇ ಈ ಪಕ್ಷವೂ ನನ್ನ ಹೆಸರು,ಭಾವಚಿತ್ರ ಫ್ಯಾನ್ಸ್ ಕ್ಲಬ್ ಹೆಸರು ಬಳಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು.
ವೆಬ್ ಪ್ಲಾಟ್‌ಫಾರ್ಮ್‌ನ ವರದಿಯ ಪ್ರಕಾರ, ತಲಪತಿ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಮತ್ತು ತಂದೆ ಎಸ್‌.ಎ. ಚಂದ್ರಶೇಖರ್ ಸೇರಿದಂತೆ 11 ಪ್ರತಿವಾದಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಂದು ವರದಿಯು ವಿಜಯ್ ತನ್ನ ತಂದೆ ಅಥವಾ ತಾಯಿ ಮತ್ತು ಅವರ ವಿಎಂಐ ತಂಡದ ಕಾರ್ಯನಿರ್ವಾಹಕರಿಂದ ರಾಜಕೀಯದಲ್ಲಿ ಅವರ ಹೆಸರು ಅಥವಾ ಅವರ ಅಭಿಮಾನಿ ಸಂಘಗಳ ಹೆಸರನ್ನು ಬಳಸಿಕೊಂಡು ನಡೆಸುವ ಸಭೆಗಳನ್ನು ನಿಷೇಧಿಸುವಂತೆ ಕೋರಿ ದೂರು ದಾಖಲಿಸಿದ್ದಾರೆ.
ಆದರೆ ಇದು ನನ್ನ ಮಗನ ಮಾತಲ್ಲ. ನನ್ನ ಹಾಗೂ ನನ್ನ ಮಗನನ್ನು ದೂರ ಮಾಡುವ ಪ್ರಯತ್ನ ನಡೆದಿದೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement