ತನ್ನ ಉದ್ದದ ಕಿವಿಗಳಿಂದಲೇ ಗಿನ್ನೆಸ್‌ ದಾಖಲೆ ಬರೆದ ಈ ನಾಯಿ.. ಕಿವಿಗಳ ಉದ್ದವೆಷ್ಟು ಗೊತ್ತಾ..?

ತನ್ನ ಕಿವಿಗಳ ಮೂಲಕವೇ ಶ್ವಾನವೊಂದು ಗಿನ್ನೆಸ್‌ ವಲ್ಡ್‌ ರೆಕಾರ್ಡ್ಸ್‌ ((Guinness Records) ಬುಕ್‌ನಲ್ಲಿ ತನ್ನ ಹೆಸರನ್ನು ಬರೆಯಿಸಿಕೊಂಡಿದೆ.
ಅಮೆರಿಕದ ಮಹಿಳೆಯೋರ್ವರು ಸಾಕಿರುವ ಕಪ್ಪು ಹಾಗೂ ಕಂದು ಬಣ್ಣದ ಈ ಶ್ವಾನ ತನ್ನ ಉದ್ದದ ಕಿವಿಗಳಿಂದಾಗಿಯೇ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ತನ್ನ ಕಿವಿಗಳಿಂದಲೇ ಇದೀಗ ಗಿನ್ನೆಸ್ ವಿಶ್ವ ದಾಖಲೆಗೆ ಸೇರಿದೆ.
ಮೂರು ವರ್ಷದ ಲೌ ಅನ್ನೋ ಶ್ವಾನ, ಪೈಗ್ ಒಸ್ಲೆನ್‌ ಎಂಬ ಪಶುತಜ್ಞೆಯ ಬಳಿಯಲ್ಲಿದೆ. ಈ ಶ್ವಾನದ ಕಿವಿಗಳು ಬರೋಬ್ಬರಿ 12.38 ಇಂಚುಗಳಷ್ಟು ಉದ್ದವಿದೆ. ಅಂದರೆ ಒಂದು ಅಡಿಗಳಿಗಿಂತಲೂ ಹೆಚ್ಚು ಉದ್ದವಿದೆ. ಜೀವಂತ ಇರುವ ನಾಯಿಗಳ ಪೈಕಿ ಲೌ ಅತ್ಯಂತ ಉದ್ದನೆಯ ಕಿವಿಯನ್ನು ಹೊಂದಿರುವ ಖ್ಯಾತಿಗೆ ಪಾತ್ರವಾಗಿದೆ.
ಒಸ್ಲೆನ್‌ ಸಾಕಿರುವ ನಾಯಿಯ ಕಿವಿಗಳು ಉದ್ದವಿದೆ ಎನ್ನುವುದು ಗೊತ್ತಿದ್ದರೂ ಎಷ್ಟು ಉದ್ದವಿದೆ ಅಂತಾ ಅಳೆದು ನೋಡಿರಲಿಲ್ಲ ಎಂದು ಹೇಳಿದ್ದಾರೆ. ಆದರರೆ ಕೋವಿಡ್‌-19 ಹಿನ್ನೆಲೆಯಲ್ಲಿ ಮೆನೆಯಲ್ಲಿದ್ದ ಒಸ್ಲೆನ್‌ ಒಮ್ಮೆ ನಾಯಿಯ ಕಿವಿಯನ್ನು ಅಳೆದು ನೋಡಿದ್ದಾರೆ. ನಂತರದಲ್ಲಿ ಗಿನ್ನೆಸ್‌ ವಲ್ಡ್‌ ರೆಕಾರ್ಡ್‌ನ ಹಿಂದಿನ ದಾಖಲೆಗಳನ್ನು ಹುಡುಕಿದ್ದಾರೆ. ಆಗ ಅವರಿಗೆ ಲೌ ಉದ್ದದ ಕಿವಿಗಳನ್ನು ಹೊಂದಿರುವುದು ಗೊತ್ತಾಗಿದೆ. ಈಗ ತನ್ನ ಉದ್ದದ ಕಿವಿಯಿಂದಾಗಿಯೇ ಈ ನಾಯಿ ಗಿನ್ನೆಸ್‌ ವಲ್ಡ್‌ ರೆಕಾರ್ಡ್ಸ್‌ ಮಾಡಿದೆ.
ಉದ್ದದ ಕಿವಿಯನ್ನು ಹೊಂದಿರುವ ಲೌ ಫ್ಯಾಷನ್‌ ಶೋ ನಲ್ಲಿ ಲೌ ಭಾರೀ ಜನಪ್ರಿಯತೆ ಗಳಿಸಿಕೊಂಡಿದೆ. ಮಾತ್ರವಲ್ಲ ಅಪಾರ ಅಭಿಮಾನಿಗಳನ್ನು ಹೊಂದಿದೆ. ಉದ್ದದ ಕಿವಿಗಳನ್ನು ಮುಟ್ಟಿನೋಡಲು ಆತುರ ಪಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ದುಬೈನಲ್ಲಿ 1.5 ವರ್ಷಕ್ಕೆ ಬೀಳುವಷ್ಟು ಮಳೆ ಒಂದೇ ದಿನ ಸುರಿಯಿತು...! ಜನಜೀವನ ಅಸ್ತವ್ಯಸ್ತ; ರಸ್ತೆಗಳು ಜಲಾವೃತ, ವಿಮಾನಗಳ ಹಾರಾಟ ರದ್ದು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement