ಶೇವಿಂಗ್‌ ಮಾಡುವುದು ಗಡ್ಡ ತೆಗೆಯುವುದು ನಿಲ್ಲಿಸಿ: ಕ್ಷೌರಿಕರಿಗೆ ಆದೇಶಿಸಿದ ತಾಲಿಬಾನ್..!

ಬಿಬಿಸಿ ವರದಿ ಹೇಳುವಂತೆ ಹೆಲ್ಮಂಡ್ ಪ್ರಾಂತ್ಯದಾದ್ಯಂತ ಕ್ಷೌರಿಕರು ಶೇವಿಂಗ್ ಮತ್ತು ಗಡ್ಡವನ್ನು ಕತ್ತರಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ, ಇಲ್ಲದಿದ್ದರೆ ಶಿಕ್ಷೆಗೆ ಗುರಿಪಡಿಸುವಂತೆ ಆದೇಶಿಸಿದೆ.
ಏತನ್ಮಧ್ಯೆ, ಕಾಬೂಲ್‌ನ ಅನೇಕ ಕ್ಷೌರಿಕರು ತಾಲಿಬಾನ್‌ನಿಂದ ಇದೇ ರೀತಿಯ ಸೂಚನೆಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆಯೆಂದು ಎಂದು ವರದಿ ಹೇಳಿದೆ. ತಾಲಿಬಾನ್‌ಗಳು ತಮ್ಮನ್ನು ಅಫ್ಘಾನಿಸ್ತಾನದ ಸುಧಾರಣೆ ಮಾಡುವ ಆಡಳಿತಗಾರರೆಂದು ಹೇಳೊಕೊಂಡಿದ್ದರ ಹೊರತಾಗಿಯೂ ಮತ್ತು ಹಿಂದಿನ ಆಡಳಿತಕ್ಕಿಂತಲೂ ಉತ್ತಮ ಆಡಳಿತದ ಭರವಸೆ ನೀಡಿದ್ದ ನಂತರವೂ ಅದು ತನ್ನ ಹಳೆಯ ರೀತಿಯ ಆಡಳಿತವನ್ನೇ ಮುಂದುವರಿಸುತ್ತಿದೆ ಎಂಬುದಕ್ಕೆ ಮತ್ತೊಂದು ನಿದರ್ಶನವಾಗಿದೆ.
ತಾಲಿಬಾನ್ ಕಾನೂನು ಆಡಳಿತ ಹೆಲ್ಮಂಡ್ ನಲ್ಲಿ ಕ್ಷೌರಿಕರ ವಿರುದ್ಧ “ಯಾರಿಗೂ ದೂರು ನೀಡುವ ಹಕ್ಕಿಲ್ಲ” ಎಂದು ನೋಟಿಸ್ ಹಾಕಿದ್ದಾರೆ. ಕ್ಷೌರಿಕರು ತಮ್ಮ ಕ್ಷೌರದ ಸೇವೆಗಳನ್ನು ನಿಲ್ಲಿಸುವಂತೆ ತಾಲಿಬಾನ್ ಹೋರಾಟಗಾರರು ಪದೇ ಪದೇ ಕೇಳುತ್ತಿದ್ದಾರೆ ಮತ್ತು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ರಹಸ್ಯವಾಗಿ ಜನರನ್ನು ಕಳುಹಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ಕ್ಷೌರಿಕರು ಹೇಳಿದ್ದಾರೆ.
ಬಿಬಿಸಿ ವರದಿಯು ಕಾಬೂಲ್‌ನ ಮತ್ತೊಬ್ಬ ಜನಪ್ರಿಯ ಸಲೂನ್ ಮಾಲೀಕರನ್ನು ಉಲ್ಲೇಖಿಸಿದ್ದು, ತಾಲಿಬಾನ್ ಸರ್ಕಾರದಿಂದ ಯಾರೋ ಕರೆ ಮಾಡಿದ್ದಾರೆ ಮತ್ತು “ಅಮೆರಿಕನ್‌ ಶೈಲಿಗಳನ್ನು ಅನುಸರಿಸುವುದನ್ನು ನಿಲ್ಲಿಸಿ” ಎಂದು ಹೇಳಿದ್ದಾರೆ.
ಹಿಂದಿನ ತಾಲಿಬಾನ್ ಆಡಳಿತದ ಪತನ ಮತ್ತು ವಿದೇಶಿ ಪಡೆಗಳು ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ, ಸ್ಥಳೀಯರು ಫ್ಯಾಶನ್ ಹೇರ್ಕಟ್ಸ್ ಮತ್ತು ಗಡ್ಡಗಳನ್ನು ತೆಗೆಸಲು ಸಲೂನ್ ಮತ್ತು ಪಾರ್ಲರ್‌ಗಳಿಗೆ ಮರಳಿದ್ದರು. ಈಗ ತಾಲಿಬಾನ್ ಇವುಗಳನ್ನು ಹತ್ತಿಕ್ಕಲು ಆರಂಭಿಸಿದಂತಿದೆ ಎಂದು ವರದಿ ಹೇಳಿದೆ.
ಎರಡು ದಿನಗಳ ಹಿಂದೆ, ಹೆರಾತ್ ನಗರದಲ್ಲಿ ತಾಲಿಬಾನ್‌ಗಳು ನಾಲ್ವರು ಅಪಹರಣಕಾರರ ಶವಗಳನ್ನು ಕ್ರೇನ್‌ಗಳಿಗೆ ನೇತುಹಾಕಿದರು. ಅವರಿಗೆ ಮೊದಲು ಗುಂಡು ಹಾರಿಸಲಾಯಿತು ಮತ್ತು ನಂತರ ತಾಲಿಬಾನ್ ಆಳ್ವಿಕೆಯಲ್ಲಿ ಅಪಹರಣವನ್ನು ಸಹಿಸಲಾಗುವುದಿಲ್ಲ ಎಂಬ ಪಾಠವನ್ನು ಕಲಿಸಲು ಕ್ರೇನ್‌ಗಳಿಗೆ ಅವರನ್ನು ನೇತುಹಾಕಲಾಯಿತು.
ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ, ಇಸ್ಲಾಮಿಕ್ ಕಾನೂನಿನ ಕಠಿಣ ವ್ಯಾಖ್ಯಾನವನ್ನು ಜಾರಿಗೊಳಿಸಿದವರಲ್ಲಿ ಒಬ್ಬರಾಗಿದ್ದ ಮುಲ್ಲಾ ನೂರುದ್ದೀನ್ ತುರಾಬಿ, ಕಾನೂನುಗಳನ್ನು ಅನುಸರಿಸಬೇಕಾಗಿರುವುದರಿಂದ ಮರಣದಂಡನೆಗಳು ಮತ್ತು ಅಂಗಚ್ಛೇದನಗಳು ಶೀಘ್ರದಲ್ಲೇ ಹಿಂತಿರುಗುತ್ತವೆ ಎಂದು ಹೇಳಿದ್ದಾರೆ.
ಭದ್ರತೆಗೆ ಕೈಗಳನ್ನು ಕತ್ತರಿಸುವುದು ಬಹಳ ಅಗತ್ಯ” ಎಂದು ಪ್ರತಪಾದಿಸಿರುವ ಅವರು, ಮತ್ತು ಅಂತಹ ಶಿಕ್ಷೆಗಳು ಅಪರಾಧನಗಳನ್ನು ತಡೆಯುವ ಪರಿಣಾಮವನ್ನು ಹೊಂದಿವೆ ಎಂದು ಹೇಳಿದ್ದಾರೆ. ಅಲ್ಲದೆ, ಕ್ಯಾಬಿನೆಟ್ ಸಾರ್ವಜನಿಕವಾಗಿ ಶಿಕ್ಷೆಗಳನ್ನು ಮಾಡಬೇಕೇ ಮತ್ತು “ನೀತಿಯನ್ನು ಅಭಿವೃದ್ಧಿಪಡಿಸಬೇಕೆ” ಎಂದು ಅಧ್ಯಯನ ಮಾಡುತ್ತಿದೆ ಎಂದು ಸಹ ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement