ಅರೇಬಿಯನ್ ಸಮುದ್ರ ದಾಟುವ ಗುಲಾಬ್ ಚಂಡಮಾರುತ ಶಾಹೀನ್ ಚಂಡಮಾರುತವಾಗಿ ಮರುಜನ್ಮ ಪಡೆಯಲಿದೆ: ಐಎಂಡಿ

ನವದೆಹಲಿ: ಸೋಮವಾರ ರಾತ್ರಿಯಿಂದ ತೆಲಂಗಾಣ, ದಕ್ಷಿಣ ಛತ್ತೀಸಗಡ ಮತ್ತು ವಿದರ್ಭ ಪ್ರದೇಶದಲ್ಲಿ ದುರ್ಬಲಗೊಂಡ ಗುಲಾಬ್ ಚಂಡಮಾರುತವು ಅರೇಬಿಯನ್ ಸಮುದ್ರಕ್ಕೆ ತೆರಳಿ ಶಾಹೀನ್ ಚಂಡಮಾರುತವಾಗಿ ಮತ್ತೆ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೊಸ ಬುಲೆಟಿನ್ ನಲ್ಲಿ, “ಪ್ರಸ್ತುತ ಗುಲಾಬ್‌ ಚಂಡಮಾರುತದ ದುರ್ನಲಗೊಂಡ ನಂತರ ಈಶಾನ್ಯ ಅರಬ್ಬಿ ಸಮುದ್ರ ಮತ್ತು ಪಕ್ಕದ ಗುಜರಾತ್ ಕರಾವಳಿಯಲ್ಲಿ ಸೆಪ್ಟೆಂಬರ್ 30 ರ ವೇಳೆಗೆ ಮತ್ತೆ ಚಂಡಮಾರುತವಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮುಂದಿನ 24 ಗಂಟೆಗಳಲ್ಲಿ ಈಶಾನ್ಯ ಅರಬ್ಬಿ ಸಮುದ್ರದಲ್ಲಿ ಇದು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮತ್ತಷ್ಟು ಎಚ್ಚರಿಕೆ ನೀಡಿದೆ.

ಅಪರೂಪದ ವಿದ್ಯಮಾನ
ಮುಂದಿನ 96-120 ಗಂಟೆಗಳಲ್ಲಿ ಅರಬ್ಬಿ ಸಮುದ್ರದ ಮೇಲೆ ವಾಯುಭಾರ ರೂಪುಗೊಳ್ಳುವ ಸಾಧ್ಯತೆ “ಮಧ್ಯಮ” ಎಂದು ಐಎಂಡಿ ಹೇಳಿದೆ. ಗುಲಾಬ್ ಚಂಡಮಾರುತವು ದುರ್ಬಲಗೊಂಡ ನಂತರ, ಈಗ ದಕ್ಷಿಣ ಚತ್ತೀಸ್‌ಗಡ ಮತ್ತು ವಿದರ್ಭ ಪ್ರದೇಶಕ್ಕೆ ಹೊಂದಿಕೊಂಡಂತೆ ಉತ್ತರ ತೆಲಂಗಾಣದ ಮೇಲೆ ಚಲಿಸುತ್ತಿದೆ.
ಮುಂದಿನ 24 ಗಂಟೆಗಳಲ್ಲಿ, ಅರಬ್ಬಿ ಸಮುದ್ರವನ್ನು ಪ್ರವೇಶಿಸಿದ ನಂತರ ಒಮಾನ್ ಕಡೆಗೆ ಚಲಿಸಿ ಶಾಹೀನ್ ಚಂಡಮಾರುತವಾಗಿ ರೂಪುಗೊಳ್ಳಬಹುದು ಎಂದು ವರದಿಗಳು ಹೇಳಿವೆ.
2018 ರಲ್ಲಿ ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿ ವರೆಗೆ ಇದೇ ರೀತಿಯ ಅಪರೂಪದ ಗಜ ಚಂಡಮಾರುತವು ತಮಿಳುನಾಡು-ಪಾಂಡಿಚೇರಿ ಕರಾವಳಿಯನ್ನು ನವೆಂಬರ್‌ನಲ್ಲಿ ದಾಟಿ ದುರ್ಬಲಗೊಂಡಾಗ, ಅರಬ್ಬಿ ಸಮುದ್ರದ ಮೇಲೆ ಮರುದಿನ ಹೊಸ ಚಂಡಮಾರುತವಾಗಿ ಮತ್ತೆ ಹೊರಹೊಮ್ಮಿತ್ತು.
ಗುಲಾಬ್ ಚಂಡಮಾರುತದ ಪ್ರಭಾವ
ಏತನ್ಮಧ್ಯೆ, ಗುಲಾಬ್ ಚಂಡಮಾರುತವು ತೀವ್ರತೆ ದುರ್ಬಲಗೊಂಡಾಗಲೂ ತೆಲಂಗಾಣದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಮಂಗಳವಾರವೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ರಾಜ್ಯದ ಪೀಡಿತ ಪ್ರದೇಶಗಳಲ್ಲಿ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರೊಂದಿಗೆ ಪರಿಸ್ಥಿತಿ ಅವಲೋಕಿಸಿದರು.
ಭಾರೀ ಮಳೆಯಿಂದಾಗಿ ಮಂಗಳವಾರವೂ ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ತೆಲಂಗಾಣ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ ಎಂದು ಮುಖ್ಯಮಂತ್ರಿ ಹೇಳಿದರು.
ತೆಲಂಗಾಣದ 14 ಜಿಲ್ಲೆಗಳಿಗೆ ಐಎಂಡಿ ರೆಡ್ ಅಲರ್ಟ್ ಘೋಷಿಸಿದ್ದು, ಮಂಗಳವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಪ್ರತ್ಯೇಕ ಸ್ಥಳಗಳಾದ ನಿರ್ಮಲ್, ನಿಜಾಮಾಬಾದ್, ಜಗತ್ಯಾಲ್, ರಾಜಣ್ಣ ಸಿರ್ಸಿಲ್ಲಾ, ಕರೀಂನಗರ, ಪೆದ್ದಪಲ್ಲಿ, ಭದ್ರಾದ್ರಿ ಕೋತಗುಡೆಮ್, ಖಮ್ಮಂ, ಮಹಬೂಬಬಾದ್, ವಾರಂಗಲ್ (ಗ್ರಾಮೀಣ), ವಾರಂಗಲ್ (ನಗರ), ಜನಗಾಂವ್, ಸಿದ್ದಿಪೇಟೆ, ಕಾಮರೆಡ್ಡಿ ಮಂಗಳವಾರ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement