ಬಾಂಗ್ಲಾದೇಶದಲ್ಲಿ ಸಂಚಲನ ಮೂಡಿಸಿದ ಅಕ್ನಿ-ಹೈ ಸೆಲೆಬ್ರಿಟಿ ಹಸು ಮರಣದ ಕೆಲವೇ ವಾರಗಳ ನಂತರ ವಿಶ್ವದ ಅತಿ ಕಡಿಮೆ ಎತ್ತರದ (ಅತಿ ಗಿಡ್ಡ) ಹಸು ಎಂದು ಮರಣೋತ್ತರ ಮನ್ನಣೆ ಗಳಿಸಿದೆ.
ಹಸು ರಾಣಿ, ಕೇವಲ 50.8 ಸೆಂಟಿಮೀಟರ್ (20 ಇಂಚು) ಎತ್ತರವಿತ್ತು. ಇದು ತತಕ್ಷಣದ ಇಂಟರ್ನೆಟ್ ಸೆಲೆಬ್ರಿಟಿಯಾಯಿತು. ಢಾಕಾದ ಹೊರ ವಲಯದಲ್ಲಿದ್ದ ಇದು ಇದ್ದ ಜಮೀನಿಗೆ ಈ ಅತಿಗಿಡ್ಡ ಹಸುವನ್ನು ನೋಡಲು ದಿನ ನೂರಾರು ಜನರು ಧಾವಿಸುತ್ತಿದ್ದರು.
ಅದರ ಮಾಲೀಕರು ಅತ್ಯಂತ ಸಣ್ಣ ಹಸು ಎಂಬುದಕ್ಕೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸಿಗೆ ಅರ್ಜಿ ಸಲ್ಲಿಸಿದ ನಂತರ, ಆಗಸ್ಟ್ 19ರಂದು ಪ್ರೀತಿಯ ಗೋವು ಇದ್ದಕ್ಕಿದ್ದಂತೆ ಮೃತಪಟ್ಟಿತು.
ಗೋವಿನ ನಿಧನದ ನಂತರ ಇದು ಈ ಭುಮಿಯ ಮೇಲಿನ ಅತ್ಯಂತ ಗಿಡ್ಡ ಹಸು ಎಂಬ ಅರ್ಜಿಯನ್ನು ಸ್ವೀಕರಿಸಲಾಗಿದೆ ಎಂದು ಗಿನ್ನೆಸ್ ವಿಶ್ವ ದಾಖಲೆಗಳಿಂದ ಸೋಮವಾರ ಇ ಮೇಲ್ ಬಂದಿರುವುದಾಗಿ ಹಸುವಿನ ಮಾಲೀಕ ಕಾಜಿ ಮೊಹಮ್ಮದ್ ಅಬು ಸುಫಿಯಾನ್ ತಿಳಿಸಿದ್ದಾರೆ.
ಗಿನ್ನೆಸ್ ವೆಬ್ಸೈಟ್ನಲ್ಲಿನ ಹೇಳಿಕೆಯು ವಿಶ್ವ ದಾಖಲೆಯ ಬಗ್ಗೆ ದೃಢಪಡಿಸಿತು, ಇದು ಹಿಂದಿನ ಗಿಡ್ಡ ಹಸುವಿನ ದಾಖಲೆಯನ್ನು ಮುರಿದಿದೆ. ಮಾಣಿಕ್ಯಂ ಎಂಬ ಭಾರತೀಯ ಹಸುವು 61 ಸೆಂಟಿ ಮೀಟರ್ಗಳಷ್ಟು ಎತ್ತರದ್ದಾಗಿತ್ತು.
ನಾವು ರಾಣಿ (ಹಸುವಿನ) ಹಲವಾರು ವಿಡಿಯೋಗಳನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಿಸ್ಕ್ರಿಪ್ಷನ್ ಗೆ ಅನುಗುಣವಾಗಿ ಕಳುಹಿಸಿದ್ದೇವೆ. ಈ ಹಸುವಿನ ಮರಣದಲ್ಲಿ ಅಸಾಮಾನ್ಯವಾದದ್ದು ಏನೂ ಇಲ್ಲ ಎಂದು ನೋಡಲು ನಾವು ಗಿನ್ನಿಸ್ ಅಧಿಕಾರಿಗಳಿಗೆ ಮರಣೋತ್ತರ ಪರೀಕ್ಷೆಯ ವರದಿಯನ್ನು ಕಳುಹಿಸಿದ್ದೇವೆ” ಎಂದು ಸುಫಿಯಾನ್ ಎಎಫ್ಪಿಗೆ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ