ಶಾಹೀನ್‌ ಚಂಡ ಮಾರುತ: ಒಮನ್‌ನಲ್ಲಿ ವಿಮಾನ ಹಾರಾಟ ಬಂದ್‌, ಯುಎಇನಲ್ಲಿ ಹೈ ಅಲರ್ಟ್‌ ಘೋಷಣೆ

ಯುಎಇ : ಶಾಹೀನ್‌ ಚಂಡಮಾರುತದ ಕಾರಣದಿಂದ ಯುಎಇನಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಒಮನ್‌ನಲ್ಲಿ ಒಳಬರುವ ಹಾಗೂ ಹೊರ ಹೋಗುವ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.
ಶಾಹೀನ್ ಚಂಡಮಾರುತವು ಭಾನುವಾರ ಓಮನ್ ರಾಜಧಾನಿ ಮಸ್ಕತ್ ಅನ್ನು 116 ಕಿಲೋಮೀಟರ್ (72 ಮೈಲಿಗಳು) ವೇಗದಲ್ಲಿ ತಲುಪುತ್ತಿದೆ. ಇದು ವರ್ಗ 1 ರ ಉಷ್ಣವಲಯದ ಚಂಡಮಾರುತವಾಗಿ ಬಲಗೊಳ್ಳುವ ನಿರೀಕ್ಷೆಯಿದೆ ಎಂದು ಯುಎಇಯ ನಾಗರಿಕ ವಿಮಾನಯಾನ ಪ್ರಾಧಿಕಾರವು ತಿಳಿಸಿದೆ.
ಈಗಾಗಲೇ ಶಾಹಿನ್‌ ಚಂಡಮಾರುತದ ಆರ್ಭಟದ ಹಿನ್ನೆಲೆಯಲ್ಲಿ ಉಂಟಾದ ಪ್ರವಾಹದಲ್ಲಿ ಮಗು ಮೃತಪಟ್ಟಿದ್ದು, ವ್ಯಕ್ತಿಯೋರ್ವರು ನಾಪತ್ತೆಯಾಗಿದ್ದಾರೆ ಎಂದು ಸರ್ಕಾರಿ ಒಮನ್ ಸುದ್ದಿ ಸಂಸ್ಥೆ ಹೇಳಿದೆ,
ಚಂಡಮಾರುತದಿಂದಾಗಿ ಯುಎಇಯ ಪ್ರಮುಖ ತೈಲ-ರಫ್ತು ಮತ್ತು ಫುಜೈರಾದ ಶೇಖರಣಾ ಕೇಂದ್ರದಲ್ಲಿ ಸುಮಾರು 30 ಗಂಟುಗಳಷ್ಟು (ಗಂಟೆಗೆ 35 ಮೈಲಿಗಳು) ಗಾಳಿಯ ವೇಗದಲ್ಲಿ ಬೀಸಲಿದೆ. ಅಮೆರಿಕ ಕೊಲ್ಲಿ ಆಫ್ ಮೆಕ್ಸಿಕೋ ಕರಾವಳಿಯು ಆಗಸ್ಟ್ ಅಂತ್ಯದಲ್ಲಿ ಪ್ರಬಲ ವರ್ಗ 4 ರ ಚಂಡಮಾರುತವಾದ ಐಡಾ ಚಂಡಮಾರುತಕ್ಕೆ ತುತ್ತಾಗಿದೆ. ಇದರಿಂದಾಗಿ ಕಚ್ಚಾ ಉತ್ಪಾದನೆಯ ದಿನಕ್ಕೆ ಸುಮಾರು 2 ಮಿಲಿಯನ್ ಬ್ಯಾರೆಲ್‌ಗಳ ಸ್ಥಗಿತವಾಗಿದೆ.
ಒಮಾನಿ ಸರ್ಕಾರವು ಭಾನುವಾರ ಮತ್ತು ಸೋಮವಾರ “ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ” ಸಾರ್ವಜನಿಕ ರಜೆಯನ್ನು ಘೋಷಿಸಿದೆ. ಅಲ್ಲದೆ, ವಿಮಾನ ನಿಲ್ದಾಣಗಳ ಪ್ರಾಧಿಕಾರವು ಮಸ್ಕತ್‌ಗೆ ಬರುವ ಮತ್ತು ಹೊರಹೋಗುವ ವಿಮಾನ ಸೇವೆ ಸ್ಥಗಿತಗೊಳಿಸುವುದಾಗಿ ಹೇಳಿದೆ. ಅರಬ್ಬೀ ಸಮುದ್ರದ ಕರಾವಳಿಯಲ್ಲಿರುವ ಯುಎಇಯ ಕೆಲವು ಪ್ರದೇಶಗಳ ಮೇಳೆ ಶಾಹೀನ್‌ ಚಂಡಮಾರುತವು ಭಾನುವಾರದಿಂದ ಮಂಗಳವಾರದ ವರೆಗೆ ಪರಿಣಾಮ ಬೀರುವ ಎಚ್ಚರಿಕೆ ನೀಡಲಾಗುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

1 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ