ರೋಗಿಯ ಹೊಟ್ಟೆಯಿಂದ 1 ಕೆಜಿಗಿಂತ ಹೆಚ್ಚು ಕಬ್ಬಿಣದ ತುಂಡು-ಉಗುರು ಹೊರತೆಗೆದ ವೈದ್ಯರು..!

ಹೊಟ್ಟೆ ನೋವಿನಿಂದ ಬಳಲುತ್ತಿರುವ ರೋಗಿಯ ಹೊಟ್ಟೆಯಲ್ಲಿ 1 ಕೆಜಿಗಿಂತಲೂ ಹೆಚ್ಚಿನ ಉಗುರು ಮತ್ತು ಕಬ್ಬಿಣದ ತುಂಡುಗಳು ಇರುವುದು ಪತ್ತಯಾಗಿದೆ.
ಇದು ಲಿಥುವೇನಿಯಾದ ಕ್ಲೈಪೆಡಾ ನಗರದಲ್ಲಿ ವರದಿಯಾಗಿದೆ. ವ್ಯಕ್ತಿಯನ್ನು ಹೊಟ್ಟೆ ನೋವಿನಿಂದ ಬಾಲ್ಟಿಕ್ ಬಂದರು ನಗರ ಕ್ಲೈಪೆಡಾ ಆಸ್ಪತ್ರೆಗೆ ದಾಖಲಾಗಿದ್ದ.
ಆತ ಕುಡಿಯುವುದನ್ನು ನಿಲ್ಲಿಸಿದ ನಂತರ ಲೋಹದ ತುಂಡುಗಳನ್ನು ನುಂಗಲು ಪ್ರಾರಂಭಿಸಿದನೆಂದು ಆ ವ್ಯಕ್ತಿ ಒಪ್ಪಿಕೊಂಡಿದ್ದಾನೆ.
ತೀವ್ರವಾದ ಹೊಟ್ಟೆ ನೋವು ಎಂದು ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಹೊಟ್ಟೆಯಲ್ಲಿ ಕಬ್ಬಿಣದ ಚೂರುಗಳಿವೆ ಎಂಬುದು ಸ್ಕ್ಯಾನಿಂಗ್​ ಮೂಲಕ ತಿಳಿದು ಬಂದಿದೆ. ಚಿಕಿತ್ಸೆಯ ಬಳಿಕ ಎಲ್ಲಾ ಲೋಹದ ತುಂಡುಗಳನ್ನು ವ್ಯಕ್ತಿಯ ದೇಹದಿಂದ 1 ಕೆಜಿಗಿಂತಲೂ ಹೆಚ್ಚಿನ ಉಗುರು ಮತ್ತು ಕಬ್ಬಿಣದ ತುಂಡುಗಳನ್ನು ಹೊರತೆಗೆಯಲಾಗಿದೆ.ಸುಮಾರು ಎಂದು ವೈದ್ಯರು ತಿಳಿಸಿದ್ದಾರೆ.
ವ್ಯಕ್ತಿಯನ್ನು ಕ್ಲೈಪೆಡಾ ಆಸ್ಪತ್ರೆಗೆ ಸೇರಿಸಲಾಯಿತು. ಎಕ್ಸ್-ರೇ ಬಳಿಕ ವ್ಯಕ್ತಿಯ ಹೊಟ್ಟೆಯಲ್ಲಿ ಕಬ್ಬಿಣದ ತುಂಡುಗಳು ಜತೆಗೆ ಉಗುರಿನ ಚೂರುಗಳು ಇರುವುದು ಕಂಡು ಬಂದಿದೆ.
ವರದಿಗಳ ಪ್ರಕಾರ, ವೈದ್ಯರು ಮೂರು ಗಂಟೆಗಳ ಸುದೀರ್ಘ ಶಸ್ತ್ರ ಚಿಕಿತ್ಸೆಯ ನಂತರ ಎಲ್ಲಾ ಲೋಹದ ವಸ್ತುಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ರೀತಿಯ ಘಟನೆಯನ್ನು ನಾನು ಈ ಹಿಂದೆ ನೋಡಿರಲಿಲ್ಲ. ಆತನ ಹೊಟ್ಟೆಯಲ್ಲಿ ಉಗುರುಗಳು ಮತ್ತು ಸ್ಕ್ರೂಗಳಿದ್ದವು ಎಂದು ಕ್ಲೈಪಡಾ ಯೂನಿವರ್ಸಿಟಿ ಆಸ್ಪತ್ರೆಯ ಸರ್ಜನ್ ಅಲ್ಗಿರ್ದಾಸ್ ಸ್ಲೇಪಾವೀಸಿಯಸ್ ಅವರು ಸ್ಥಳೀಯ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಇದೇ ರೀತಿಯ ಮತ್ತೊಂದು ಘಟನೆ ನಡೆದಿತ್ತು. ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ಇಡೀ ಮೊಬೈಲ್ಅನ್ನೇ ವ್ಯಕ್ತಿ ನುಂಗಿಬಿಟ್ಟಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ವ್ಯಕ್ತಿಯ ಹೊಟ್ಟೆಯಿಂದ ನೋಕಿಯಾ ಮೊಬೈಲ್ ಹೊರತೆಗೆಯಲಾಗಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು, ವ್ಯಕ್ತಿಯ ಹೊಟ್ಟೆಯಿಂದ ಮೊಬೈಲ್ ಫೋನ್ಅನ್ನು ಹೊರತೆಗೆಯಲಾಗಿದೆ ಎಂದು ಡಾ. ಸ್ಕೆಂದರ್ ತಿಳಿಸಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement