500 ರೂ.ಗಳಿಗೆ ಪತ್ನಿಯನ್ನೇ ಮಾರಾಟ ಮಾಡಿದ ಭಂಡ ಪತಿ..!: ಖರೀದಿಸಿದವನಿಂದ ಅತ್ಯಾಚಾರ

ಅಹಮದಾಬಾದ್: ಗುಜರಾತಿನಲ್ಲಿ ತನ್ನ ಪತ್ನಿಯನ್ನು 500 ರೂ.ಗಳಿಗೆ ಮಾರಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಗೆ ಹಣ ನೀಡಿದ ಪುರುಷರು ಏಕಾಂತ ಸ್ಥಳಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಶುಕ್ರವಾರ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ದೂರಿನ ಮೇಲೆ ತಕ್ಷಣ ಕ್ರಮ ಕೈಗೊಂಡರು ಮತ್ತು 24 ಗಂಟೆಗಳಲ್ಲಿ ಘಟನೆಯಲ್ಲಿ ಪಾಲ್ಗೊಂಡವರನ್ನು ಬಂಧಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬನನ್ನು ಸೋನು ಶರ್ಮಾ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಠಾಣೆಯ ಪ್ರಭಾರಿ ಮದನಲಾಲ್ ಕದ್ವಸ್ರಾ ತಿಳಿಸಿದ್ದಾರೆ. 21 ವರ್ಷದ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮೌ ನಿವಾಸಿಯನ್ನು ಮದುವೆಯಾಗಿದ್ದ ಮಹಿಳೆ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಲಕ್ಕಿ ಹೋಟೆಲ್‌ಗೆ ಹೋಗಿದ್ದಳು.. ಈ ಸಮಯದಲ್ಲಿ, ಸೋನು ಶರ್ಮಾ ಆ ಮಹಿಳೆಯ ಗಂಡನನ್ನು ಸಂಪರ್ಕಿಸಿದ್ದಾನೆ ಮತ್ತು ಆಗ ಆಕೆಯ ಪತಿಯು ಅವಳನ್ನು 500 ರೂ. ಮಾರಿದ್ದಾನೆ. ಆರೋಪಿಯು ಹಣವನ್ನು ಸ್ವೀಕರಿಸಿ ತನ್ನ ಪತ್ನಿಯನ್ನು ಒಪ್ಪಸಿದ್ದಾನೆ. ಶರ್ಮಾ ಮಹಿಳೆಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ.
ಪ್ರಕರಣದ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಆರೋಪಿಯ ವಿರುದ್ಧ ಕ್ರಮ ಕೈಗೊಂಡು ಆತನನ್ನು ಬಂಧಿಸಿದ್ದಾರೆ. ಮಹಿಳೆಯನ್ನು ಸಿಕಾರಿನಲ್ಲಿರುವ ಸಖಿ ಕೇಂದ್ರಕ್ಕೆ ಕಳುಹಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement