ಪಂಡೋರಾ ಪೇಪರ್‌ ಲೀಕ್: ಕಡಲಾಚೆಯ ಮಾಹಿತಿಯ ಅತಿದೊಡ್ಡ ಸೋರಿಕೆ ಶ್ರೀಮಂತ-ಗಣ್ಯ ವ್ಯಕ್ತಿಗಳ ಆರ್ಥಿಕ ರಹಸ್ಯಗಳು ಬಹಿರಂಗ..! ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಅನಿಲ್‌ ಅಂಬಾನಿ ಐವರು ಭಾರತೀಯರ ಹೆಸರು ..!

ನವದೆಹಲಿ: 91 ದೇಶದ 35 ಮಂದಿ ಪ್ರಭಾವಿ ವಿಶ್ವ ನಾಯಕರು, 330 ರಾಜಕಾರಣಿಗಳು ಮತ್ತು ಸಾರ್ವಜನಿಕ ಅಧಿಕಾರಿಗಳ ರಹಸ್ಯ ಸಂಪತ್ತಿನ ಮಾಹಿತಿಯನ್ನೊಳಗೊಂಡ ಲಕ್ಷಾಂತರ ದಾಖಲೆಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿವೆ.
117 ದೇಶಗಳ 600 ಪತ್ರಕರ್ತದ ಸಹಯೋಗದಲ್ಲಿ ನಡೆದ ಈ ಕಾರ್ಯಚರಣೆಗೆ ಪ್ಯಾಂಡೋರಾ ಪೇಪರ್ಸ್ ಎಂದು ಹೆಸರಿಡಲಾಗಿದೆ. ಪ್ರಭಾವಿ ವ್ಯಕ್ತಿಗಳು ವಿದೇಶದಲ್ಲಿ ನಡೆಸಿರುವ ಹೂಡಿಕೆ ಮಾಹಿತಿಯನ್ನು ಈ ದಾಖಲೆಗಳು ಒಳಗೊಂಡಿವೆ. ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಮಂಡಳಿ ಈ ತನಿಖೆ ನಡೆಸಿತ್ತು. ಬಿಬಿಸಿ, ದಿ ಗಾರ್ಡಿಯನ್, ದಿ ಇಂಡಿಯನ್ ಎಕ್ಸ್‍ಪ್ರೆಸ್ ಸೇರಿದಂತೆ 150 ಮಾಧ್ಯಮ ಸಂಸ್ಥೆಗಳು ಒಳಗೊಂಡಿರುವ ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟ ನಡೆಸಿದ ತನಿಖೆಯಲ್ಲಿ ಹಲವಾರು ಅಗರ್ಭ ಶ್ರೀಮಂತರ ರಹಸ್ಯ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ 1.19 ಕೋಟಿಗೂ ಅಧಿಕ ಗೌಪ್ಯ ದಾಖಲೆಗಳು ದೊರಕಿವೆ ಎನ್ನಲಾಗಿದೆ. ಈ ಪ್ಯಾಂಡೋರಾ ಪೇಪರ್ಸ್ ಮೂಲಕ ಜಗತ್ತಿನ ಸೆಲೆಬ್ರಿಟಿಗಳು ಹೊರದೇಶಗಳಲ್ಲಿ ಮಾಡಿರುವ ರಹಸ್ಯ ಹೂಡಿಕೆಗಳೂ ಬಯಲುಗೊಂಡಿವೆ.

*ರಿಲಯನ್ಸ್ ಎಡಿಎಜಿ ಬಾಸ್ ಅನಿಲ್ ಅಂಬಾನಿ: ದಿ ಇಂಡಿಯನ್ ಎಕ್ಸ್‌ಪ್ರೆಸ್ ತನಿಖೆ ನಡೆಸಿದ ಪಂಡೋರಾ ಪೇಪರ್ಸ್ ರಿಲಯನ್ಸ್ ಎಡಿಜಿಎ ಗ್ರೂಪ್‌ನ ಅಧ್ಯಕ್ಷರು ಮತ್ತು ಅವರ ಪ್ರತಿನಿಧಿಗಳು ಜೆರ್ಸಿ, ಬ್ರಿಟಿಷ್ ವರ್ಜಿನ್ ದ್ವೀಪಗಳು (ಬಿವಿಐ) ಮತ್ತು ಸೈಪ್ರಸ್‌ನಲ್ಲಿ ಕನಿಷ್ಠ 18 ಕಡಲಾಚೆಯ ಕಂಪನಿಗಳನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದೆ. ಫೆಬ್ರವರಿ 2020 ರಲ್ಲಿ, ಮೂರು ಚೀನೀ ರಾಜ್ಯ-ನಿಯಂತ್ರಿತ ಬ್ಯಾಂಕುಗಳೊಂದಿಗಿನ ವಿವಾದದ ನಂತರ, ಅಂಬಾನಿ ‌ ಬ್ರಿಟನ್ ನ್ಯಾಯಾಲಯದಲ್ಲಿ ದಿವಾಳಿತನವನ್ನು ಘೋಷಿಸಿದರು ಮತ್ತು ಅವರ ನಿವ್ವಳ ಮೌಲ್ಯ ಶೂನ್ಯ ಎಂದು ಹೇಳಿದರು. ನ್ಯಾಯಾಲಯವು “ಅಂಬಾನಿಗೆ ಯಾವ ಪ್ರಮಾಣದ ಕಡಲಾಚೆಯ ಆಸಕ್ತಿಗಳಿವೆ ಎಂಬ ಬಗ್ಗೆ ಪ್ರಶ್ನೆಗಳಿವೆ, ಏಕೆಂದರೆ ಅವುಗಳನ್ನು ಘೋಷಿಸಲಾಗಿಲ್ಲ” ಎಂದು ನ್ಯಾಯಾಲಯವು ಗಮನಿಸಿತು. ಮತ್ತು, ಮೂರು ತಿಂಗಳ ನಂತರ, ಅನಿಲ್ ಅಂಬಾನಿಗೆ 716 ಮಿಲಿಯನ್ ಡಾಲರ್‌ಗಳನ್ನು ಬ್ಯಾಂಕ್‌ಗಳಿಗೆ ಪಾವತಿಸಲು ಆದೇಶಿಸಲಾಯಿತು, ಆದರೆ ಅವರು ಅದನ್ನು ಮಾಡಲಿಲ್ಲ ಮತ್ತು ಜಗತ್ತಿನ ಯಾವುದೇ ಘಟಕದಲ್ಲಿ ಯಾವುದೇ ಆಸ್ತಿಯನ್ನು ಹೊಂದಿರುವುದನ್ನು ನಿರಾಕರಿಸಿದರು.

ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಪಾಪ್ ತಾರೆ ಶಕೀರಾ, ಅನಿಲ್‌ ಅಂಬಾನಿ, ಕಿರಣ್‌ ಮುಜುಮ್ದಾರ್‌ ಶಾ ಅವರ ಪತಿ, ನೀರವ್‌ ಮೋದಿ ಅವರ ಸಹೋದರಿ, ಸೂಪರ್ ಮಾಡೆಲ್ ಕ್ಲಾಡಿಯಾ ಸ್ಚಿಫರ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳ ಹೆಸರುಗಳು ಭಾನುವಾರ ಸೋರಿಕೆಯಾದ ಪ್ಯಾಂಡೋರಾ ಪೇಪರ್ಸಿನ ಕಾರ್ಯಾಚರಣೆ ರಹಸ್ಯ ದಾಖಲೆಗಳಲ್ಲಿ ಉಲ್ಲೇಖವಾಗಿವೆ ಎಂದು ವರದಿಗಳು ತಿಳಿಸಿವೆ.
ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ ಪುತಿನ್, ಜೋರ್ಡಾನ್ ರಾಜ ಸೇರಿದಂತೆ ಭಾರತ ಪಾಕಿಸ್ತಾನದ ರಾಜಕಾರಣಿಗಳು, ಸೆಲಬ್ರಿಟಿಗಳ ದಾಖಲೆಯೂ ಇದರಲ್ಲಿದೆ ಎನ್ನಲಾಗುತ್ತಿದೆ.
ಸಚಿನ್ ತೆಂಡೂಲ್ಕರ್ ಅಟಾರ್ನಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಚಿನ್ ಅವರು ವಿದೇಶದಲ್ಲಿ ನಡೆಸಿರುವ ಹೂಡಿಕೆಗಳು ಕಾನೂನುಬದ್ಧವಾಗಿರುವುದಾಗಿ ತಿಳಿಸಿದ್ದಾರೆ.
ಶಕೀರಾ ಮತ್ತು ಶಿಫರ್ ಅವರ ವಕೀಲರುಗಳೂ ಅಂತಹುದೇ ಮಾತುಗಳನ್ನಾಡಿದ್ದಾರೆ ಹಾಗೂ ಅವರು ತಮ್ಮ ತೆರಿಗೆಗಳನ್ನು ಸರಿಯಾಗಿ ಪಾವತಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸಾಗರೋತ್ತರ ಹಣಕಾಸು ವ್ಯವಹಾರ ಹೊಂದಿರುವ ರಾಜಕಾರಣಿಗಳ ಪೈಕಿ ಪ್ಯಾಂಡೋರಾ ಪೇಪರ್ಸ್‍ನಲ್ಲಿ ಭಾರತದ ಆರು ಮಂದಿಯ ಹೆಸರಿದ್ದರೆ ಪಾಕಿಸ್ತಾನದ ಏಳು ಮಂದಿಯ ಹೆಸರುಗಳಿವೆ.
ಯುಕ್ರೇನ್, ಕೆನ್ಯಾ, ಈಕ್ವೆಡಾರ್ ಅಧ್ಯಕ್ಷ, ಜೆಕ್ ಪ್ರಧಾನಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹತ್ತಿರದವರ ಸಾಗರೋತ್ತರ ಹೂಡಿಕೆಗಳು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಅನಧಿಕೃತ ಪ್ರಚಾರ ಸಚಿವರ ಆರ್ಥಿಕ ಚಟುವಟಿಕೆಗಳು ಹಾಗೂ ರಷ್ಯಾ, ಅಮೆರಿಕಾ, ಟರ್ಕಿ ಮತ್ತಿರ ದೇಶಗಳ 130 ಶತಕೋಟ್ಯಧಿಪತಿಗಳ ಹೂಡಿಕೆಗಳ ಮಾಹಿತಿ ಸೋರಿಕೆಯಾಗಿದೆ.
2016ರಲ್ಲಿ ಇದೇ ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಮಂಡಳಿ ಪನಾಮ ಪೇಪರ್ಸ್ ಎನ್ನುವ ಪ್ರಾಜೆಕ್ಟ್ ಅಡಿ ರಹಸ್ಯ ದಾಖಲೆಗಳನ್ನು ಬಿಡುಗಡೆಗೊಳಿಸಿತ್ತು. ಅಮಿತಾಭ್ ಬಚ್ಚನ್ ಸೇರಿದಂತೆ ವಿಶ್ವದ ಹಲವು ನಾಯಕರ ಹೂಡಿಕೆ ದಾಖಲೆಗಳನ್ನು ಆ ಸಮಯದಲ್ಲಿ ಬಹಿರಂಗಗೊಳಿಸಲಾಗಿತ್ತು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement