ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷೆ ಪರಿಚಯಸಲಿರುವ ವಿಟಿಯು

posted in: ರಾಜ್ಯ | 0

ತೆರೆದ ಪುಸ್ತಕ ಪರೀಕ್ಷೆ ಪರಿಚಯಿಸಲಿರುವ ವಿಟಿಯು..

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ತೆರೆದ ಪುಸ್ತಕ ಪರೀಕ್ಷೆ’ಯನ್ನು ಪರಿಚಯಿಸಲು ಹೊರಟಿದೆ.
ರಾಜ್ಯದಲ್ಲಿ ಆಯ್ದ ಎಂಜಿನಿಯರಿಂಗ್ ಕೋರ್ಸ್‌ಗಳ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಿಂದ (2021-22) ತೆರೆದ ಪುಸ್ತಕ ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತಿಳಿಸಿದೆ.
ವಿಟಿಯು ಉಪಕುಲಪತಿ (VC) ಡಾ. ಕರಿಸಿದ್ದಪ್ಪ, ‘ವಿನ್ಯಾಸ ಆಧಾರಿತ ವಿಷಯಗಳ ಪರೀಕ್ಷೆಗಳಿಗೆ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ‘ ಎಂದು ಹೇಳಿದ್ದಾರೆ ಪಠ್ಯಪುಸ್ತಕಗಳಿಂದ ವಿಷಯವನ್ನು ನೆನಪಿಟ್ಟುಕೊಳ್ಳುವ ಮತ್ತು ಪುನರುತ್ಪಾದಿಸುವ ಸಾಮರ್ಥ್ಯಕ್ಕಿಂತ ವಿದ್ಯಾರ್ಥಿಗಳ ಸಮಸ್ಯೆ-ಪರಿಹರಿಸುವಿಕೆ, ಉನ್ನತ ಮಟ್ಟದ ಚಿಂತನೆ ಮತ್ತು ಅಪ್ಲಿಕೇಶನ್ ಸಾಮರ್ಥ್ಯಗಳಿಗೆ ಆದ್ಯತೆ ನೀಡಲು ಈ ಪರೀಕ್ಷೆಗಳಿಗೆ ಪ್ರಶ್ನೆಗಳನ್ನು ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ತೆರೆದ ಪುಸ್ತಕ ಪರೀಕ್ಷೆ ಹಿಂದಿನಿಂದಲೂ ಚರ್ಚೆಯಲ್ಲಿರುವ ಸುದ್ದಿ.‌ ಪ್ರಸಕ್ತ ವರ್ಷದಿಂದ ಕೆಲವು ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ತೆರೆದ ಪುಸ್ತಕ ಪರೀಕ್ಷೆಗಳನ್ನು ಪರಿಚಯಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಯೋಜನೆ ರೂಪಿಸಿದೆ.
ಪ್ರಸ್ತುತ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಮತ್ತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು ತೆರೆದ ಪುಸ್ತಕ ಪರೀಕ್ಷಾ ವ್ಯವಸ್ಥೆ ಅನುಸರಿಸುತ್ತಿವೆ. ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಸರ್ಕಾರಿ ವಿಟಿಯು ಇದನ್ನು ಪರಿಚಯಿಸುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿನ್ಯಾಸ ಆಧಾರಿತ ವಿಷಯಗಳನ್ನು ಹೊಂದಿರುವ ಕೋರ್ಸ್ ಗಳಲ್ಲಿ ಅದರಲ್ಲೂ ಪ್ರಮುಖವಾಗಿ ಸಿವಿಲ್, ಮೆಕಾನಿಕಲ್, ಎಲೆಕ್ಟ್ರಿಕಲ್ ಮತ್ತು ಆರ್ಕಿಟೆಕ್ಚರ್‌ನಂತಹ ಸ್ಟ್ರೀಮ್‌ಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ವಿಶ್ವವಿದ್ಯಾಲಯದ ಅಧಿಕಾರಿಗಳ ಪ್ರಕಾರ, ಅಧ್ಯಯನ ಮಂಡಳಿಯು ತನ್ನ ಶಿಫಾರಸುಗಳನ್ನು ಸಲ್ಲಿಸಿದ ನಂತರ ಅಧಿಕೃತ ಮಾಹಿತಿ ಪ್ರಕಟಿಸಲಿದೆ.
ಓಪನ್‌ ಪುಸ್ತಕ ಪರೀಕ್ಷೆ ಹಾಗೆಂದರೇನು..?

ಓಪನ್ ಪುಸ್ತಕ ಪರೀಕ್ಷೆ ಎಂದರೆ ಇದರಲ್ಲಿ ವಿದ್ಯಾರ್ಥಿಗಳು ತಮ್ಮ ತರಗತಿಯ ಟಿಪ್ಪಣಿಗಳು, ಪ್ರೊಫೆಸರ್ ಪೂರೈಸಿರುವ ವಸ್ತುವಿಷಯ, ಪಠ್ಯಪುಸ್ತಕಗಳು ಮತ್ತು ಸಂಬಂಧಿತ ಸಂಸ್ಥೆ ಪೂರೈಸಿರುವ ಯಾವುದೇ ಇತರ ಅಧಿಕೃತ ವಸ್ತು ವಿಷಯಗಳನ್ನು ಪರಾಮರ್ಶಿಸಿ ಬರೆಯಲು ಅವಕಾಶ ಮಾಡಿಕೊಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಮತ್ತು ಪರೀಕ್ಷೆಗೆ ಉತ್ತರಿಸಲು ವಸ್ತು ವಿಷಯವನ್ನು ಪೂರೈಸಲಾಗುತ್ತದೆ.
ಓಪನ್ ಬುಕ್ ಪರೀಕ್ಷೆ ಸಾಂಪ್ರದಾಯಿಕ ಬೋಧನಾ ರೀತಿಗಿಂತ ವಿಭಿನ್ನವಾಗಿ ಇರಲಿದೆ. ಇದರಲ್ಲಿ ಪ್ರತ್ಯೇಕವಾದ ಮತ್ತು ನಿರ್ದಿಷ್ಟ ಮೌಲ್ಯೀಕರಣದ ಅಳತೆ ಇರುತ್ತದೆ. ಅವುಗಳಲ್ಲಿ ಪ್ರಕರಣದ ಅಧ್ಯಯನಗಳು, ವಿಡಿಯೋಗಳು, ಪಠ್ಯಕ್ರಮ ವಸ್ತುವಿಷಯ ಮುಂತಾದವುಗಳು ಸೇರಿರುತ್ತವೆ.
ಈ ವ್ಯವಸ್ಥೆಗಾಗಿ ಪ್ರತ್ಯೇಕ ಕೌಶಲ್ಯಗಳನ್ನು ಹೊಂದುವ ಅಗತ್ಯ ಇರುವ ಕ್ರಮಗಳ ಅನುಷ್ಠಾನದ ಜೊತೆಗೆ ಭಾರತದಲ್ಲಿ ಈ ರೀತಿಯ ತೆರೆದ ಪುಸ್ತಕದ ಪರೀಕ್ಷೆಗಳನ್ನು ಅನುಷ್ಠಾನಗೊಳಿಸಬಹುದಾಗಿದೆ.
ತೆರೆದ ಪುಸ್ತಕದ ಪರೀಕ್ಷೆಯನ್ನು ಯಾವುದೇ ಕಾರ್ಯಕ್ರಮಗಳಲ್ಲಿ ಅನುಷ್ಠಾನಗೊಳಿಸಬಹುದು. ಇದರಲ್ಲಿ ಪರೀಕ್ಷೆಗೆ ಪ್ರತ್ಯೇಕ ರೀತಿಯ ಪ್ರಶ್ನೆಪತ್ರಿಕೆ ಹಾಗೂ ವಿದ್ಯಾರ್ಥಿಗಳ ವಿಶ್ಲೇಷಣಾ ಕೌಶಲ್ಯದ ಅಗತ್ಯವಿರುತ್ತದೆ. ಅಮೆರಿಕದಲ್ಲಿ ಅನೇಕ ವಿದ್ಯಾಸಂಸ್ಥೆಗಳು ಈ ರೀತಿಯ ಪುಸ್ತಕ ತೆರೆದು ನೋಡಿ ಬರೆಯುವ ಪರೀಕ್ಷೆಗಳನ್ನು ಹೊಂದಿವೆ.
ಭಾರತದಲ್ಲಿ ದೆಹಲಿ ವಿಶ್ವವಿದ್ಯಾಲಯ, ಸಾವಿತ್ರಿ ಬಾ ಫುಲೆ ಪುಣೆ ವಿಶ್ವವಿದ್ಯಾಲಯ, ರಾಯಪುರದ ಕಳಿಂಗ ವಿಶ್ವವಿದ್ಯಾಲಯ, ಪಂಜಾಬ್‌, ಚಂಡೀಗಢ ವಿಶ್ವವಿದ್ಯಾಲಯ ಮುಂತಾದವುಗಳು ಈ ರೀತಿಯ ಪುಸ್ತಕ ತೆರೆದು ನೋಡಿ ಬರೆಯುವ ಪರೀಕ್ಷೆ ನಡೆಸುತ್ತವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ