ಬರೋಬ್ಬರಿ 2,700 ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಪತ್ತೆ..!

ಇಸ್ರೇಲ್​ನ ಜೆರುಸಲೇಂನಲ್ಲಿ ಎರಡು ಸಾವಿರ ವರ್ಷಗಳಗಿಂತಲೂ ಹಿಂದಿನ ಐಷಾರಾಮಿ ಟಾಯ್ಲೆಟ್ ಒಂದು ಪತ್ತೆಯಾಗಿದೆ…!
ಇಸ್ರೇಲ್​ನ ಹಳೆಯ ನಗರವೊಂದರಲ್ಲಿ ಸುಮಾರು 2,700 ವರ್ಷಗಳ ಹಿಂದಿನ ಕಲ್ಲಿನ ಅಪರೂಪದ ಟಾಯ್ಲೆಟ್ ಪತ್ತೆಯಾಗಿದ್ದು, ಕುಳಿತುಕೊಳ್ಳಲು ಆರಾಮದಾಯಕವಾಗುವ ರೀತಿಯಲ್ಲಿ ಕಲ್ಲನ್ನು ವಿನ್ಯಾಸಗೊಳಿಸಲಾಗಿದೆ. ಇಸ್ರೇಲಿ ಪುರಾತನ ಪ್ರಾಧಿಕಾರವು ನಯವಾದ, ಕೆತ್ತಿದ ಸುಣ್ಣದ ಕಲ್ಲಿನ ಶೌಚಾಲಯ ಪತ್ತೆಯಾಗಿದೆ ಎಂದು ತಿಳಿಸಿದೆ. ವಿಶಾಲವಾದ ಮಹಲಿನಲ್ಲಿ ಇದು ಪತ್ತೆಯಾಗಿದೆ.
ಆರಾಮವಾಗಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಟಾಯ್ಲೆಟ್​ನ ಕಲ್ಲಿನ ಕೆಳಗೆ ಆಳವಾದ ಸೆಪ್ಟಿಕ್ ಟ್ಯಾಂಕ್ ಸಹ ನಿರ್ಮಿಸಲಾಗಿದೆ. ಪುರಾತನ ಕಾಲದಲ್ಲಿ ಈ ರೀತಿಯ ಖಾಸಗಿ ಟಾಯ್ಲೆಟ್ ನಿರ್ಮಿಸಿಕೊಳ್ಳುವುದು ಬಹಳ ಅಪರೂಪವಾಗಿತ್ತು. ಆಗೆಲ್ಲ ಬಯಲು ಶೌಚಾಲಯ ಇರುತ್ತಿತ್ತು ಅಥವಾ ಸಾರ್ವಜನಿಕ ಶೌಚಾಲಯ ಇರುತ್ತಿತ್ತು. ಪ್ರಾಚೀನ ಕಾಲದಲ್ಲಿ ಕೆಲವೇ ಕೆಲವು ಟಾಯ್ಲೆಟ್​ಗಳು ಪತ್ತೆಯಾಗಿವೆ. ಆದರೆ, ಇಷ್ಟು ಪುರಾತನವಾದ ಟಾಯ್ಲೆಟ್ ಪತ್ತೆಯಾಗಿರಲಿಲ್ಲ.
ಶ್ರೀಮಂತರು ಮಾತ್ರ ಆಗ ಟಾಯ್ಲೆಟ್​ಗಳನ್ನು ಕಟ್ಟಿಸಿಕೊಳ್ಳುತ್ತಿದ್ದರು. ಈ ಟಾಯ್ಲೆಟ್ ಕಟ್ಟಿಸಿದವರು ಕೂಡ ಶ್ರೀಮಂತರಾಗಿರಬಹುದು. ಅಲ್ಲದೆ, ಈ ಶೌಚಾಲಯವನ್ನು ಬೆಡ್ ರೂಂ ಮತ್ತು ರೀಡಿಂಗ್ ಟೇಬಲ್ ಬಳಿಯಲ್ಲಿಯೇ ನಿರ್ಮಿಸಲಾಗಿತ್ತು. ಒಟ್ಟಾರೆ ಈ ಟಾಯ್ಲೆಟ್ ಈ ಭಾರೀ ಸುದ್ದಿಯಲ್ಲಿದೆ.
ಕೆಲವು ತಿಂಗಳ ಹಿಂದೆ, ಯುಕೆ ನಲ್ಲಿನ ಪುರಾತತ್ತ್ವಜ್ಞರು ಅಸ್ಥಿಪಂಜರದ ಕಾಲುಗಳ ನಡುವೆ ನಿಗೂಢದ್ರವ ತುಂಬಿದ ಬಾಟಲಿಯನ್ನು ಪತ್ತೆ ಮಾಡಿದ್ದರು.
ನೀಲಿ ಗಾಜಿನ ಬಾಟಲಿಯು ಕಂದು ಬಣ್ಣದ ದ್ರವವನ್ನು ಹೊಂದಿತ್ತು ಮತ್ತು ಇದನ್ನು ‘ಹಲ್ ಆಸ್ಪತ್ರೆ’ ಎಂದು ಗುರುತಿಸಲಾಗಿದೆ. ಇದನ್ನು ತನ್ನ 60 ನೇ ವಯಸ್ಸಿನಲ್ಲಿ ಮೃತಪಟ್ಟ ಮಹಿಳೆಯ ಕಾಲಿನ ಮೂಳೆಗಳ ನಡುವೆ ಇರಿಸಲಾಗಿತ್ತು.
ಶೌಚಾಲಯದ ಕೆಳಗಿರುವ ಸೆಪ್ಟಿಕ್ ಟ್ಯಾಂಕ್ ಪ್ರಾಣಿಗಳ ಮೂಳೆಗಳು ಮತ್ತು ಮಡಿಕೆಗಳನ್ನು ಒಳಗೊಂಡಿತ್ತು. ಪುರಾತನ ಪ್ರಾಧಿಕಾರದ ಪ್ರಕಾರ, ಆ ಸಮಯದಲ್ಲಿ ವಾಸಿಸುವ ಜನರ ಜೀವನಶೈಲಿ ಮತ್ತು ಸಾವುಗಳ ಮೇಲೆ ಬೆಳಕು ಚೆಲ್ಲಲು ವಸ್ತುಗಳು ಸಹಾಯ ಮಾಡುತ್ತವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ