ಭಾರತದ ಅತ್ಯುತ್ತಮ ಸಿಐಒ ಆಗಿ ಸಂಪೂರ್ಣ ಹೆಗಡೆ ಆಯ್ಕೆ

posted in: ರಾಜ್ಯ | 1

ಸಂಪೂರ್ಣ ಹೆಗಡೆ ಅವರು ಸಿಇಒ ಇನ್-ಸೈಟ್ (CEO Insight) ನಿಯತಕಾಲಿಕ ನಡೆಸಿದ ಭಾರತದ ಹತ್ತು ಅತ್ಯುತ್ತಮ ಚೀಫ಼್ ಇನ್ನೊವೇಶನ್ ಆಫ಼ೀಸರ್ (CIO) ಗಳಲ್ಲಿ ಒಬ್ಬರಾಗಿ ಆಯ್ಕೆ ಆಗಿದ್ದಾರೆ. ಸುಮಾರು ೨೫ ವರ್ಷಗಳ ಅನುಭವ ಇರುವ ಇವರು ಈ ಹಿಂದೆ ಮೈಕ್ರೊಸಾಫ಼್ಟ್ ಮತ್ತು ಐ ಬಿ ಎಮ್ ನಂತಹ ದಿಗ್ಗಜ ಕಂಪನಿಗಳಲ್ಲಿ ಕೆಲಸ ಮಾಡಿ, ಸದ್ಯ ಬ್ಲೂಮ್ ವಾಲ್ಯೂ ಎಂಬ ಭಾರತ ಮೂಲದ ಬಹು ರಾಷ್ಟ್ರೀಯ ಸ್ಟಾರ್ಟ್-ಅಪ್ ಕಂಪನಿಯ ಕೊ-ಫ಼ೌಂಡರ್ ಮತ್ತು ಚೀಫ಼್ ಇನ್ನೊವೇಶನ್ ಆಫ಼ೀಸರ್ ಆಗಿ ಕಾರ್ಯ್ ನಿರ್ವಹಿಸುತ್ತಿದ್ದಾರೆ. ಮೂಲತ: ಇವರು ಸಿದ್ದಾಪುರ ತಾಲ್ಲೂಕಿನ ಕಲಗಾರು ದತ್ತಿ ಕುಟುಂಬದವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ