ತಂದೆಯ ಗನ್‌ನಿಂದಲೇ ಹಾರಿದ ಗುಂಡು ತಾಗಿ ಮೆದುಳು ನಿಷ್ಕ್ರೀಯವಾಗಿದ್ದ ಮಗ ಸಾವು, ತಂದೆ ಅರೆಸ್ಟ್‌

posted in: ರಾಜ್ಯ | 0

ಮಂಗಳೂರು : ವೇತನ ಕೇಳಲು ಬಂದಿದ್ದ ನೌಕರನ ಜಗಳದ ವೇಳೆಯಲ್ಲಿ ಆಕಸ್ಮಿಕವಾಗಿ ತಂದೆಯ ಗನ್‌ನಿಂದಲೇ ಗುಂಡು ಸಿಡಿದು ಮೆದುಳು ನಿಷ್ಕ್ರೀಯವಾಗಿದ್ದ ಸುಧೀಂದ್ರ ಪ್ರಭು ( 16 ವರ್ಷ) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಮಾರ್ಗನ್ಸ್‌ ಗೇಟ್‌ನಲ್ಲಿ ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೊ ಸಂಸ್ಥೆಯಲ್ಲಿ ಅಶ್ರಫ್, ಚಂದ್ರಹಾಸ ಎಂಬ ಇಬ್ಬರು ಕೆಲಸಕ್ಕೆ ಸೇರಿದ್ದರು. ಇಬ್ಬರೂ ಗೂಡ್ಸ್‌ ಕಂಟೈನರ್‌ ವಾಹನದಲ್ಲಿ ಮುಂಬೈಗೆ ತೆರಳಿ ಅ.3 ರಂದು ಹಿಂತಿರುಗಿದ್ದರು. 4,000 ರೂಪಾಯಿ ವೇತನ ನೀಡುವ ವಿಚಾರಕ್ಕೆ ಮಾಲಕ ರಾಜೇಶ್‌ ಪ್ರಭು ಅವರ ನಡುವೆ ಜಗಳ ನಡೆದಿದೆ. ಈ ವೇಳೆಯಲ್ಲಿ ರಾಜೇಶ್‌ ಪ್ರಭು ತನ್ನ ಕೈಯಲ್ಲಿದ್ದ ಬಂದೂಕಿನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ ಈ ಗುಂಡು ಸುಧೀಂದ್ರ ಪ್ರಭುವಿನ ಕಣ್ಣಿನ ಬದಿಯಲ್ಲಿ ಹಾದು ಹೋಗಿತ್ತು. ಇದರಿಂದಾಗಿ ಸುಧೀಂದ್ರ ಪ್ರಭು ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಗುಂಡೇಟಿನಿಂದಾಗಿ ಮೆದುಳು ನಿಷ್ಕ್ರೀಯವಾಗಿತ್ತು. ಈಗ ವೈದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ಮರಣೋತ್ತರ ಕಾರ್ಯವನ್ನು ನಡೆಸಲಾಗಿದೆ. ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಉದ್ಯಮಿ ಹಾಗೂ ತಂದೆ ರಾಜೇಶ್ ಪ್ರಭುವನ್ನು ಪೊಲೀಸರು ಬಂಧಿಸಿದ್ದಾರೆ.
.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ