ಮಗ ಡ್ರಗ್ಸ್‌ ಕೇಸ್‌ನಲ್ಲಿ ಅರೆಸ್ಟ್‌ ಆದ ನಂತ್ರ ಜಗತ್ತಿನ ಕ್ಷಮೆ ಕೋರಿ, ಕೋಟ್ಯಂತರ ಆಸ್ತಿ ಚಾರಿಟಿಗೆ ದಾನ ಮಾಡಿದ್ದ ಹಾಲಿವುಡ್‌ ನಟನ ಸುದ್ದಿ ಆರ್ಯನ ಖಾನ್‌ ಬಂಧನದ ನಂತರ ಟ್ರೆಂಡಿಂಗ್‌ಗೆ

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಡ್ರಗ್ಸ್‌ ಕೇಸ್‌ನಲ್ಲಿ ಸಿಲುಕಿದ್ದಾರೆ. ಸದ್ಯಕ್ಕೆ ಕೋರ್ಟ್‌ ಅವರಿಗೆ ಜಾಮೀನು ನಿರಾಕರಿಸಿದೆ. ಆದರೂ ಆತನ ಪರವಾಗಿ ಹಲವಾರು ಮಂದಿ ಬಾಲಿವುಡ್‌ ನಟರು ನಿಂತಿದ್ದಾರೆ.
ಆದರೆ ಈ ನಡುವೆಯೇ ಇದೇ ರೀತಿ ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿರುವ ಹಾಲಿವುಡ್‌ ನಟನ ಪುತ್ರನ ವಿಚಾರ ಜಾಲತಾಣದಲ್ಲಿ ಮತ್ತೆ ಸುದ್ದಿಯಾಗುತ್ತಿದೆ. ಅದೇ ರೀತಿ ಆ ನಟನೆ ವರ್ತನೆ ಕೂಡ ಸಾಕಷ್ಟು ಪ್ರಶಂಸೆಗೆ ಪಾತ್ರವಾಘುತ್ತಿದೆ.
ಆ ಹಾಲಿವುಡ್‌ನ ಸುಪ್ರಸಿದ್ಧ ನಟನೇ ಜಾಕಿ ಚಾನ್.‌ ಇವರು ಫೈಟರ್‌ ಜಾಕಿ ಎಂದೇ ಇವರು ಸುಪ್ರಸಿದ್ಧರು. ಇವರ ಹೆಸರನ್ನು ಶಾರುಖ್‌ ಖಾನ್‌ಗೆ ಹೋಲಿಸುತ್ತಿರುವ ನೆಟ್ಟಿಗರು, ಜಾಕಿ ಅವರಿಂದ ಶಾರುಖ್‌ ಖಾನ್‌ ಪಾಠ ಕಲಿಯಲಿ ಎಂದು ಟಾಂಗ್‌ ನೀಡುತ್ತಿದ್ದಾರೆ.
ಅಷ್ಟಕ್ಕೂ ಜಾಕಿ ಚಾನ್‌ ಸುದ್ದಿ ಮತ್ತೆ ಈಗೇಕೆ ಟ್ರೆಂಡ್‌ ಆಗುತ್ತಿದೆ. ಯಾಕೆಂದರೆ 2014ರಲ್ಲಿ ಇವರ ಮಗನನ್ನೂ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿಸಲಾಗಿತ್ತು. ತನ್ನ ಮಗ ಜೇಸಿ ಡ್ರಗ್ಸ್‌ ಸೇವನೆ ಮಾಡುತ್ತಿರುವ ಕುರಿತು ಸಾಕ್ಷ್ಯಾಧಾರಗಳು ಸಿಗುತ್ತಿದ್ದಂತೆಯೇ ನಟ ಜಾಕಿ ಚಾನ್‌ ಜಗತ್ತಿನ ಕ್ಷಮೆ ಕೋರಿದ್ದರು. ಅಲ್ಲದೆ, ಶತಕೋಟಿ ಡಾಲರ್‌ಗಳ ಒಡೆಯನಾಗಿದ್ದ ಇವರು, ಮಗನ ವಿಷಯ ತಿಳಿಯುತ್ತಿದ್ದಂತೆಯೇ, 2,603 ಕೋಟಿ ರೂಪಾಯಿ ಆಸ್ತಿಯನ್ನು ಮಗನ ಹೆಸರಿಗೆ ಬರೆಯದೆ ಚಾರಿಟಿಗೆ ಬರೆದಿದ್ದರು..! ತನ್ನ ಮಗ ಜೇಸಿಗೆ ನಯಾಪೈಸೆ ನೀಡುವುದಿಲ್ಲ ಎಂದು ಘೋಷಿಸಿದರು. ‘ಡ್ರಗ್​ ಪ್ರಕರಣದಲ್ಲಿ ಜೈಸಿ ಜೈಲು ಸೇರಿದ್ದಾನೆ. ನನ್ನ ಮಗನನ್ನು ಡ್ರಗ್ಸ್​ನಿಂದ ರಕ್ಷಣೆ ಮಾಡಲು ಹಾಗೂ ಉತ್ತಮವಾಗಿ ಬೆಳೆಸಲು ನನ್ನಿಂದ ಸಾಧ್ಯವಾಗಿಲ್ಲ’ ಎಂದು ಜಾಕಿ ಚಾನ್ ಬೇಸರ ವ್ಯಕ್ತಪಡಿಸಿದ್ದರು.
ಜಾಕಿ ಮತ್ತು ಜೋನ್ ಲಿನ್ ದಂಪತಿ ಏಕೈಕ ಪುತ್ರ ಜೇಸಿ. 2014 ರಲ್ಲಿ, ಜೇಸಿಯನ್ನು ಡ್ರಗ್ಸ್ ಇಟ್ಟುಕೊಂಡಿದ್ದಕ್ಕಾಗಿ ಬಂಧಿಸಲಾಗಿತ್ತು.
ಇಲ್ಲಿ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಬಂಧನವಾಗಿದೆ. ಈಗ ಶಾರುಖ್‌ ಖಾನ್‌ ಹಾಗೂ ಜಾಕಿ ಚಾನ್‌ ಅವರ ಹೋಲಿಕೆ ಸುದ್ದಿ ಮತ್ತೆ ಟ್ರೆಂಡ್‌ ಆಗುತ್ತಿದೆ. ಎಲ್ಲರೂ ಜಾಕಿ ಚಾನ್‌ ಅವರನ್ನು ಹೊಗಳುತ್ತಿದ್ದಾರೆ. ಅಲ್ಲದೆ, ಶಾರುಖ್​ಗೆ ಜಾಖಿ ಚಹಾನ್‌ ಅವರನ್ನು ನೋಡಿ ನೀವು ಕಲಿಯಬೇಕಿದೆ’ ಎಂದು ಹೇಳುತ್ತಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ