ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಸತ್ಯಜಿತ್ ನಿಧನ..ಬಸ್​ ಡ್ರೈವರ್​ ನಿಂದ ಸಿನೆಮಾ ರಂಗದ ವರೆಗೆ ಅವರ ಬದುಕಿನ ಪಯಣವೇ ರೋಚಕ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ‌ ಬಳಲುತ್ತಿದ್ದ ಕನ್ನಡದ ಖ್ಯಾತ ನಟ ಸತ್ಯಜಿತ್ ಇಂದು (ಭಾನುವಾರ) ನಿಧನರಾದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಪುತ್ರ ಆಕಾಶ್ ಮಾಹಿತಿ ನೀಡಿದ್ದಾರೆ. ಹೆಗಡೆ ನಗರದ ಶಬರಿ ನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1.30ರ ನಂತರ ಸತ್ಯಜಿತ್ ಅಂತ್ಯಕ್ರಿಯೆ ನಡೆಯಲಿದೆ.
ಸೈಯ್ಯದ್ ನಿಜಾಮುದ್ದೀನ್ ಮೂಲ ಹೆಸರಿನ ಇವರು ಚಿತ್ರರಂಗದಲ್ಲಿ ಸತ್ಯಜಿತ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. 1986ರಿಂದಲೂ​ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಜನಪ್ರಿಯತೆ ಪಡೆದಿದ್ದರು. ಹಲವು ಬಗೆಯ ಪೋಷಕ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದರು.
ಸತ್ಯಜಿತ್​ ಅವರಿಗೆ ಗ್ಯಾಂಗ್ರಿನ್​ ಕಾಣಿಸಿಕೊಂಡ ಬಳಿಕ ಬೇಡಿಕೆ ಕಡಿಮೆಯಾಗಿತ್ತು. 2018ರಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ನಟನೆ ‘ಸೆಕೆಂಡ್​ ಹಾಫ್​’ ಚಿತ್ರದಲ್ಲಿ ವೀಲ್​ಚೇರ್​ನಲ್ಲಿ ಕುಳಿತುಕೊಂಡೇ ಅವರು ನಟಿಸಿದ್ದರು. ಆ ಬಳಿಕ ಬೇರೆ ಯಾವುದೇ ಸಿನಿಮಾದಲ್ಲಿ ಸತ್ಯಜಿತ್​ ಕಾಣಿಸಿಕೊಂಡಿರಲಿಲ್ಲ. ನಟ ಸತ್ಯಜಿತ್, ವಿಲನ್, ಪೋಷಕ ನಟನಾಗಿ ಗುರುತಿಸಿಕೊಂಡಿದ್ದರು. ಪುಟ್ನಂಜ, ಆಪ್ತಮಿತ್ರ, ಚೈತ್ರದ ಪ್ರೇಮಾಂಜಲಿ, ಅರುಣ ರಾಗ, ಶಿವ ಮೆಚ್ಚಿದ ಕಣ್ಣಪ್ಪ, ಯುದ್ಧಕಾಂಡ, ಮಂಡ್ಯದ ಗಂಡು, ಪೊಲೀಸ್ ಸ್ಟೋರಿ, ಅಪ್ಪು, ಹೀಗೆ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಕೈಕೊಟ್ಟಿದ್ದರಿಂದ ಅವರು ನಟನೆಯಿಂದ ದೂರ ಉಳಿಯಬೇಕಾಯಿತು. ಇಹಲೋಕ ತ್ಯಜಿಸಿರುವ ಹಿರಿಯ ನಟನಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಕೆಎಸ್​ಆರ್​ಟಿಸಿ ಚಾಲಕನಿಗೆ ಬಾಲಿವುಡ್ ಅವಕಾಶ
ಸತ್ಯಜಿತ್​ ಸಿನೆಮಾ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ಸಿನೆಮಾಕ್ಕೆ ಬರುವುದಕ್ಕಿಂತ ಮೊದಲು ಹುಬ್ಬಳ್ಳಿಯಲ್ಲಿ ಬಸ್​ ಚಾಲಕರಾಗಿದ್ದರು.  ಅದಕ್ಕೂ ಮೊದಲು ಹುಬ್ಬಳ್ಳಿ ಲಕ್ಕಿ ಅಸೊಸಿಯೇಟ್ಸ್‌ ನಲ್ಲಿ ಅವರು ಚಾಲಕರಾಗಿದ್ದರು. ಇದನ್ನು ಅದರ ಮಾಲೀಕ ಭವರಲಾಲ್‌ ಜೈನ್‌ ನೆನಪಿಸಿಕೊಂಡಿದ್ದಾರೆ.  ಇದು 1980ರ ದಶಕದ ಆರಂಭದಲ್ಲಿ ಅವರು ನಮ್ಮ ಚಿಕ್ಕಪ್ಪನ ಜೊತೆ ಕೆಲಸ ಮಾಡುತ್ತಿದ್ದರು.ನಾವಾಗ ಹುಡುಗರಾಗಿದ್ದೆವು. ಅವರು ಹಿಂದಿನ ನಟರಾದ ಶತುಘ್ನ ಸಿಂಹ, ರಾಜಕುಮಾರ ಹೀಗೆ ಹಲವಾರು ಕಲಾವಿದರ ಧ್ವನಿಗಳನ್ನು ಮಿಮಿಕ್ರಿ ಮಾಡುತ್ತಿದ್ದರು. ಹವರಿಗೆ ಸಿನೆಮಾದ ಹುಚ್ಚು ಬಹಳ ಇತ್ತು ಎಂದು ಭವರಲಾಲ್‌ ಜೈನ್‌ ಅವರು ನೆನಪಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ಚಾಲಕನಾಗಿ ಕೆಲಸ ಮಾಡುತ್ತಿದ್ದಾಗಲೇ ಅವರಿಗೆ ನಟನೆ ಬಗ್ಗೆ ಅಪಾರ ಪ್ರೀತಿ ಇತ್ತು. ಹಾಗಾಗಿ ಹವ್ಯಾಸಿ ನಾಟಕ ತಂಡಗಳ ಜೊತೆ ಗುರುತಿಸಿಕೊಂಡಿದ್ದರು. ಬೇರೆಬೇರೆ ಊರುಗಳಿಗೆ ತೆರಳಿ ಹಲವು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಅದು ಅವರನ್ನು ಬಾಲಿವುಡ್​ವರೆಗೆ ಕರೆದುಕೊಂಡು ಹೋಯಿತು ಎಂಬುದೇ ಅಚ್ಚರಿ.
ಬಾಲಿವುಡ್​ನಲ್ಲಿ ಮೊದಲ ಚಿತ್ರ
ಒಮ್ಮೆ ಅವರು ಮುಂಬೈನಲ್ಲಿ ನಾಟಕ ಪ್ರದರ್ಶನ ನೀಡಿದಾಗ ಅವರಿಗೆ ಬಾಲಿವುಡ್​ ನಟ ನಾನಾ ಪಾಟೇಕರ್​ ಪರಿಚಯ ಆಯಿತು. ಆ ಪರಿಚಯದಿಂದಾಗಿ ಹಿಂದಿಯ ‘ಅಂಕುಶ್​’ ಸಿನಿಮಾದಲ್ಲಿ ನಟಿಸಲು ಸತ್ಯಜಿತ್​ ಅವರಿಗೆ ಅವಕಾಶ ಸಿಕ್ಕಿತು. ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹಿಟ್​ ಕೂಡ ಆಯಿತು. ಅದರಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದ ಸತ್ಯಜಿತ್​ ಜೀವನದ ದಿಕ್ಕು ಬದಲಾಯಿತು.
ಪೋಷಕ ನಟನಾಘಿಯೇ ಖ್ಯಾಥಿ ಪಡೆದರು..
ಅಂಕುಶ್​’ ನಂತರ ಸತ್ಯಜಿತ್​ ಅವರಿಗೆ ಕನ್ನಡ ಚಿತ್ರರಂಗದ ಬಾಗಿಲು ತೆರೆಯಿತು. 1986ರಲ್ಲಿ ತೆರೆಕಂಡ ಅನಂತ್​ ನಾಗ್​ ಅಭಿನಯದ ‘ಅರುಣರಾಗ’ ಚಿತ್ರದಲ್ಲಿ ಸತ್ಯಜಿತ್​ ನಟಿಸಿದರು. ಬಳಿಕ ಸಾಲು ಸಾಲು ಆಫರ್​ಗಳು ಅವರಿಗೆ ಸಿಕ್ಕವು. ವಿಲನ್ ಆಗಿ, ಪೊಲೀಸ್​ ಆಗಿ, ತಂದೆಯಾಗಿ ಎಲ್ಲ ಪಾತ್ರಗಳಿಗೆ ಜೀವ ತುಂಬಿದ್ದ ಅವರು ಬೇಡಿಕೆಯ ಪೋಷಕ ನಟನಾಗಿ ಗುರುತಿಸಿಕೊಂಡರು. ಕಾಮಿಡಿ ಪಾತ್ರಗಳನ್ನೂ ಮಾಡಿದರು.
ಮೂಲ ಹೆಸರು ಸಯ್ಯದ್​ ನಿಜಾಮುದ್ದೀನ್​:
ಸತ್ಯಜಿತ್​ ಅವರ ಮೂಲ ಹೆಸರು ಸಯ್ಯದ್​ ನಿಜಾಮುದ್ದೀನ್​. ಆದರೆ ಚಿತ್ರರಂಗಕ್ಕೆ ಕಾಲಿಟ್ಟಾಗ ಅವರು ಹೆಸರು ಬದಲಾಯಿಸಿಕೊಂಡರು. ಸತ್ಯಜಿತ್​ ಎಂಬ ಹೆಸರಿನಿಂದಲೇ ಅವರು ಖ್ಯಾತಿ ಪಡೆದರು. ಬಹುತೇಕರಿಗೆ ಅವರ ಮೂಲ ಹೆಸರೇ ಗೊತ್ತಿಲ್ಲ. ಡಯಾಬಿಟಿಸ್‌ನಿಂದ ಬಳಲುತ್ತಿದ್ದ ಸತ್ಯಜಿತ್​ ಕಾಲಿಗೆ ಗ್ಯಾಂಗ್ರಿನ್​ ಆದ ನಂತರ ಕಷ್ಟಗಳು ಎದುರಾದವು. ಒಂದು ಕಾಲನ್ನು ಕತ್ತರಿಸಬೇಕಾಯಿತು. ನಂತರ ಅವರಿಗೆ ಅವಕಾಶ ಇಲ್ಲದೆ, ಚಿಕಿತ್ಸೆಗೆ ಹಣದ ಕೂರತೆ ಕೂಡ ಉಂಟಾಯಿತು. ಕುಟುಂಬದವರ ಜೊತೆಗೆ ಸತ್ಯಜಿತ್​ ಜಗಳ ಮಾಡಿಕೊಂಡು ಸುದ್ದಿಯಾದರು.
ಸತ್ಯಜಿತ್​ ಅವರು ಕೊನೆಯದಾಗಿ ನಟಿಸಿದ್ದು ‘ಸೆಕೆಂಡ್​ ಹಾಫ್​’ ಚಿತ್ರದಲ್ಲಿ. ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆ ನಿಭಾಯಿಸಿದ್ದ ಈ ಸಿನಿಮಾ 2018ರಲ್ಲಿ ತೆರೆ ಕಂಡಿತು. ಒಂದು ಕಾಲು ಕಳೆದುಕೊಂಡಿದ್ದ ಅವರು ವ್ಹೀಲ್​ ಚೇರ್​ ಮೇಲೆ ಕುಳಿತುಕೊಂಡೇ ನಟಿಸಿದ್ದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement