5792.63 ಕೋಟಿ ರೂ.ಗಳಿಗೆ ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್ ಖರೀಸಿದ ರಿಲಯನ್ಸ್ ಇಂಡಸ್ಟ್ರೀಸ್

ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಭಾನುವಾರ ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್ ಅನ್ನು ಚೀನಾ ನ್ಯಾಷನಲ್ ಬ್ಲೂಸ್ಟಾರ್‌ನಿಂದ 771 ಮಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿತು.
ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (RNESL), ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಸಂಪೂರ್ಣ ಒಡೆತನದ ಅಂಗಸಂಸ್ಥೆಯಾಗಿದೆ, ಚೀನಾ ನ್ಯಾಷನಲ್ ಬ್ಲೂಸ್ಟಾರ್ (ಗ್ರೂಪ್) ಕೋ ಲಿಮಿಟೆಡ್ ನಿಂದ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಹೋಲ್ಡಿಂಗ್ಸ್ AS (REC ಗ್ರೂಪ್) ನ 100 ಪ್ರತಿಶತದಷ್ಟು ಷೇರುಗಳನ್ನು $ 771 ಮಿಲಿಯನ್ ಎಂಟರ್‌ಪ್ರೈಸ್ ಮೌಲ್ಯಕ್ಕೆ, ಸ್ವಾಧೀನಪಡಿಸಿಕೊಳ್ಳುವುದಾಗಿ “ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಬಿಎಸ್‌ಇ ಫೈಲಿಂಗ್‌ನಲ್ಲಿ ಹೇಳಿದೆ.
ಜಾಗತಿಕ ಮಟ್ಟದ ದ್ಯುತಿವಿದ್ಯುಜ್ಜನಕ (ಪಿವಿ) ಉತ್ಪಾದಕ ಆರ್‌ಐಎಲ್‌ನ ಹೊಸ-ಶಕ್ತಿಯ ವಿಸ್ತರಣೆಗೆ ಈ ಸ್ವಾಧೀನವು ಪ್ರಮುಖವಾಗಿದೆ, ಇದು 2030 ರ ವೇಳೆಗೆ ಕನಿಷ್ಠ 100 ಗಿಗಾವಾಟ್‌ಗಳನ್ನು (ಜಿಡಬ್ಲ್ಯೂ) ಸೌರ ವಿದ್ಯುತ್‌ ಉತ್ಪಾದಿಸುವ ಯೋಜನೆಗಳನ್ನು ಒಳಗೊಂಡಿದೆ.
ಸೌರ ಕೋಶಗಳು ಮತ್ತು ಮಾಡ್ಯೂಲ್‌ಗಳು, ವಿದ್ಯುತ್‌ ಶೇಖರಣಾ ಬ್ಯಾಟರಿಗಳು, ಇಂಧನ ಕೋಶಗಳು ಮತ್ತು ಹಸಿರು ಹೈಡ್ರೋಜನ್ ಉತ್ಪಾದಿಸಲು ಈ ರಿಲಯನ್ಸ್‌ ಸಮೂಹ ನಾಲ್ಕು “ಗಿಗಾ ವಾಟ್‌ಗಳ ವಿದ್ಯುತ್‌ ಉತ್ಪಾದನೆ ಫ್ಯಾಕ್ಟರಿಗಳನ್ನು” ನಿರ್ಮಿಸುವ ಗುರಿ ಹೊಂದಿದೆ.
ಭಾರತ ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಕೈಗೆಟುಕುವ ದರದಲ್ಲಿ ಶಕ್ತಿಯನ್ನು ಒದಗಿಸಲು ತಮ್ಮ ಸಂಸ್ಥೆಯು ಜಾಗತಿಕ ಕಂಪನಿಗಳೊಂದಿಗೆ ಹೂಡಿಕೆ ಮತ್ತು ಸಹಯೋಗವನ್ನು ಮುಂದುವರಿಸಲಿದೆ ಎಂದು ಆರ್‌ಐಎಲ್ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ.
1996 ರಲ್ಲಿ ಸ್ಥಾಪನೆಯಾದ ನಾರ್ವೆ-ಪ್ರಧಾನ ಕಚೇರಿ ಆರ್‌ಇಸಿ (REC) ಸಿಂಗಾಪುರದಲ್ಲಿ ತನ್ನ ಕಾರ್ಯಕಾರಿ ಕೇಂದ್ರವನ್ನು ಹೊಂದಿದೆ ಮತ್ತು ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಏಷ್ಯಾ ಪೆಸಿಫಿಕ್ ನಲ್ಲಿ ಪ್ರಾದೇಶಿಕ ಶಾಖೆಗಳನ್ನು ಹೊಂದಿದೆ. ಕಂಪನಿಯು 600ಕ್ಕೂ ಹೆಚ್ಚು ಉಪಯುಕ್ತತೆ ಮತ್ತು ವಿನ್ಯಾಸದ ಪೇಟೆಂಟ್‌ಗಳನ್ನು ಹೊಂದಿದೆ. ಅದರಲ್ಲಿ 446 ಮಂಜೂರು ಮಾಡಲಾಗಿದೆ ಮತ್ತು ಉಳಿದವು ಮೌಲ್ಯಮಾಪನದಲ್ಲಿದೆ, ಯಾವಾಗಲೂ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ.
ಆರ್‌ಐಎಲ್ ತನ್ನ ಸಿಲಿಕಾನ್-ಟು-ಪಿವಿ-ಪ್ಯಾನಲ್ ಗಿಗಾಫ್ಯಾಕ್ಟರಿಯಲ್ಲಿ ಆರ್‌ಇಸಿ ಸೋಲಾರ್‌ನ ಉದ್ಯಮದ ಮುಂಚೂಣಿಯ ತಂತ್ರಜ್ಞಾನವನ್ನು ಜಾಮ್‌ನಗರದ ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್‌ನಲ್ಲಿ ಬಳಸಲು ಯೋಜಿಸಿದೆ.
ಇದು ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಏಷ್ಯಾದ ಇತರೆಡೆ ಸೇರಿದಂತೆ ಜಾಗತಿಕವಾಗಿ ಪ್ರಮುಖ ಹಸಿರು ಇಂಧನ ಮಾರುಕಟ್ಟೆಯಲ್ಲಿ ಸಮೂಹವು ಬೆಳೆಯಲು ಸಹಾಯಕವಾಗುತ್ತದೆ ಎಂದು ನಿರೀಕ್ಷಸಿಲಾಗಿದೆ. ಇದು ಸಿಂಗಾಪುರ, ಫ್ರಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ಆರ್‌ ಇಸಿ (REC) ಯ ಯೋಜಿತ ವಿಸ್ತರಣೆಯನ್ನು ಬೆಂಬಲಿಸುತ್ತದೆ ಎಂದು ಅದು ಹೇಳಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ