ತತ್ಕಾಲ್ ಟ್ರಾಕ್ಟರ್ ಸಾಲ: ರೈತರಿಗೆ ಒಳ್ಳೆಯ ಸುದ್ದಿ ನೀಡಿದ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ

ನವದೆಹಲಿ : ರೈತರ ಸಂಕಷ್ಟ ಬಗೆಹರಿಹಾರಕ್ಕೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ಮುಂದಾಗಿದೆ.‌
ಕೃಷಿ ಕಾರ್ಯಕ್ಕಾಗಿ ಬಾಡಿಗೆ ಟ್ರ್ಯಾಕ್ಟರ್ ಪಡೆದು ಬೇಸತ್ತು ಹೊಸ ಟ್ರ್ಯಾಕ್ಟರ್ ಖರೀದಿಗೆ ಯೋಜಿಸುತ್ತಿರುವ ರೈತರಿಗೆ ಬ್ಯಾಂಕ್‌ ಸಿಹಿ ಸುದ್ದಿ ನೀಡಿದೆ.
ಟ್ರ್ಯಾಕ್ಟರ್‌ ಖರೀದಿ ಆಸೆಯಿದ್ದು, ಹಣದ ಕೊರತೆಯಾದರೆ ದೇಶದ ಅತಿದೊಡ್ಡ ಬ್ಯಾಂಕ್‌ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ರೈತರಿಗಾಗಿ ವಿಶೇಷ ಸಾಲ ಯೋಜನೆ ‘ತತ್ಕಾಲ್ ಟ್ರಾಕ್ಟರ್ ಸಾಲ'(Tatkal Tractor Loan) ಯೋಜನೆ ತಂದಿದೆ. ಇದರ ಅಡಿಯಲ್ಲಿ, ಟ್ರಾಕ್ಟರ್ ಇನ್ಶೂರೆನ್ಸ್(Tractor Insurance) ಮತ್ತು ನೋಂದಣಿ ಶುಲ್ಕ (Registration Fee) ಸೇರಿದಂತೆ ಟ್ರ್ಯಾಕ್ಟರ್ ವೆಚ್ಚದ 100% ವರೆಗೆ ಎಸ್ ಬಿಐ ಸಾಲ ನೀಡುತ್ತದೆ.
ಎಸ್‌ಬಿಐ ತತ್ಕಾಲ್ ಟ್ರಾಕ್ಟರ್ ಸಾಲವು ಕೃಷಿ ಅವಧಿಯ ಸಾಲವಾಗಿದ್ದು, ಟ್ರ್ಯಾಕ್ಟರ್ ಪರಿಕರಗಳ ವೆಚ್ಚವನ್ನು ಬ್ಯಾಂಕ್ ನೀಡುವ ಸಾಲದಲ್ಲಿ ಸೇರಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ರೈತರು 4 ರಿಂದ 5 ವರ್ಷಗಳಲ್ಲಿ ಟ್ರಾಕ್ಟರ್ ಸಾಲದಲ್ಲಿ ತೆಗೆದುಕೊಂಡ ಮೊತ್ತವನ್ನ ಬ್ಯಾಂಕಿಗೆ ಪಾವತಿಸಬಹುದಾಗಿದೆ. ಅಲ್ಲದೆ, ಬ್ಯಾಂಕಿನಿಂದ ಹಣಕಾಸು ಸಾಲದ ಟ್ರ್ಯಾಕ್ಟರ್ ಸಮಗ್ರ ವಿಮೆ ಸಹ ಹೊಂದಿರುತ್ತದೆ. 25/40/50 ಶೇಕಡಾ ( Invoice + Insurance + Registration ) ಮೊತ್ತವನ್ನು ಟ್ರ್ಯಾಕ್ಟರ್ ವೆಚ್ಚವನ್ನ ಟಿಡಿಆರ್‌(TDR)ನಲ್ಲಿ ಶೂನ್ಯ ದರದ ಠೇವಣಿ ಮಾಡಬೇಕಾಗುತ್ತದೆ.
ಇದು ಬ್ಯಾಂಕಿನಿಂದ ಹಣಕಾಸು ಒದಗಿಸಿದ ಟ್ರ್ಯಾಕ್ಟರ್ ಸಾಲವನ್ನು ಮರುಪಾವತಿಸುವ ವರೆಗೆ ಬ್ಯಾಂಕಿನೊಂದಿಗೆ ಇರುತ್ತದೆ. ಅಂದರೆ, ಅದು ಒಂದು ರೀತಿಯಲ್ಲಿ ಅಡಮಾನವಾಗಿರುತ್ತದೆ.
ಅಲ್ಲದೆ, ಮಾರ್ಜಿನ್ ಮನಿ ಎಂದು ಸ್ವೀಕರಿಸಿದ ಟಿಡಿಆರ್ ಮೇಲೆ ಬ್ಯಾಂಕ್ ಹಕ್ಕನ್ನ ಹೊಂದಿರುತ್ತದೆ. ಎಸ್‌ಬಿಐ ತತ್ಕಾಲ್ ಟ್ರ್ಯಾಕ್ಟರ್ ಸಾಲವನ್ನು ಪಡೆಯಲು ಇರುವ ಷರತ್ತುಗಳೆಂದರೆ ಕನಿಷ್ಠ 2 ಎಕರೆ ಭೂಮಿ ಹೊಂದಿರಬೇಕು. ಈ ಯೋಜನೆಯಡಿ ಎಲ್ಲ ರೈತರು ಬ್ಯಾಂಕಿನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಸಾಲದಲ್ಲಿ ಎಸ್‌ಬಿಐ ಉಲ್ಲೇಖಿಸಿದ ಸಂಬಂಧಿಗಳು ಮಾತ್ರ ಸಹ ಅರ್ಜಿದಾರರಾಗಬಹುದು.
ಅರ್ಜಿಯೊಂದಿಗೆ ಅಗತ್ಯವಿರುವ ದಾಖಲೆಗಳು ;
ಸಾಲಕ್ಕಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಇದರಲ್ಲಿ ಯಾವುದೇ ಡೀಲರ್‌ನಿಂದ ಟ್ರ್ಯಾಕ್ಟರ್‌ನ ಉಲ್ಲೇಖವನ್ನು ಸಹ ಹಾಕಬೇಕು. ಗುರುತಿನ ಪುರಾವೆಯಾಗಿ ವೋಟರ್ ಐಡಿ, ಪ್ಯಾನ್, ಪಾಸ್‌ಪೋರ್ಟ್, ಆಧಾರ್ ಅಥವಾ ಚಾಲನಾ ಪರವಾನಗಿ ಯಾವುದಾದರೂ ಒಂದು. ವಿಳಾಸ ದೃಢೀಕರಣಕ್ಕಾಗಿ ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಅಥವಾ ಚಾಲನಾ ಪರವಾನಗಿಯಲ್ಲಿ ಒಂದು. ಇದಲ್ಲದೇ, ಸಾಗುವಳಿ ಮಾಡಬಹುದಾದ ಭೂಮಿಯ ಪುರಾವೆಗಳನ್ನು ಹಾಜರುಪಡಿಸಬೇಕು. ಇನ್ನಷ್ಟು ಮಾಹಿತಿಗೆ ಬ್ಯಾಂಕನ್ನು ಸಂಪರ್ಕಿಸಬಹುದು.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement