ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ Gmail ಸೇವೆಗಳಲ್ಲಿ ವ್ಯತ್ಯಯ..! ಇಮೇಲ್‌ ಕಳುಹಿಸಲು ಪರದಾಟ

ನವದೆಹಲಿ : ಸಾಮಾಜಿಕ ಜಾಲತಾಣಗಳ ಸರ್ವರ್‌ ಡೌನ್‌ ಆಗಿರುವ ಬೆನ್ನಲ್ಲೇ ಈಗ ಭಾರತದ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಜಿಮೇಲ್‌ ಡೌನ್‌ ಾದ ವರದಿಗಳು ಬಂದಿವೆ.
ಮಧ್ಯಾಹ್ನ 3 ಗಂಟೆಯಿಂದ ಈ ಸಮಸ್ಯೆ ಎದುರಾಗಿದ್ದು, ಲಕ್ಷಾಂತರ ಗ್ರಾಹಕರು ಜಿಮೇಲ್‌ ಮೂಲಕ ಇಮೇಲ್‌ ಕಳುಹಿಸಲಾಗದೆ ಪರದಾಡುತ್ತಿದ್ದಾರೆ.
ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿನ ಜನರು ಹೆಚ್ಚಾಗಿ ಗೂಗಲ್ಲಿನ ಇಮೇಲ್‌ ಆದ ಜಿಮೇಲ್‌ ಬಳಕೆ ಮಾಡುತ್ತಿದ್ದಾರೆ. ಆದರೆ ದೇಶದ ಕೆಲವು ಭಾಗಗಳಲ್ಲಿ ಉಚಿತ ಇಮೇಲ್‌ ಸೇವೆ ಸ್ಥಗಿತಗೊಂಡಿದೆ. ಶೇ. 68 ರಷ್ಟು ಬಳಕೆದಾರರಿಗೆ ಇಮೇಲ್‌ ಕಳುಹಿಸಲು ಹಾಗೂ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.
ಶೇ. 18 ರಷ್ಟು ಜನರು Gmail ಸರ್ವರ್‌ ಸಮಸ್ಯೆ ಎದುರಿಸುತ್ತಿದ್ದಾರೆ. ಶೇ. 14 ರಷ್ಟು ಗ್ರಾಹಕರು ಜಿಮೇಲ್‌ ಲಾಗಿನ್‌ ಮಾಡಲು ಸಾಧ್ಯವಾಗದೆ ಪರದಾಡಿದ್ದಾರೆ ಎಂದು ಡೌನ್‌ ಡಿಟಕ್ಟರ್‌ ವೆಬ್‌ಸೈಟ್‌ ವರದಿ ಮಾಡಿದೆ.
ಜಿ ಮೇಲ್‌ ಸ್ಥಗಿತದ ಕುರಿತು ಗೂಗಲ್ ಯಾವುದೇ ಅಧಿಕೃತ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಟೆಕ್ ದೈತ್ಯರು ಸಮಸ್ಯೆಯನ್ನು ಒಪ್ಪಿಕೊಳ್ಳುತ್ತಾರೆ. #GmailDown ನಂತಹ ಹ್ಯಾಶ್‌ಟ್ಯಾಗ್‌ಗಳು ಟ್ವಿಟರಿನಲ್ಲಿ ಟ್ರೆಂಡ್ ಆಗುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಜಿಮೇಲ್ ಬಳಕೆದಾರರು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ಗೆ ವೇದಿಕೆಯನ್ನು ಪ್ರವೇಶಿಸುವಾಗ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬರೆಯುತ್ತಿದ್ದಾರೆ. ಭಾರತದ ಜೊತೆಗೆ, ಇತರ ಕೆಲವು ದೇಶಗಳಲ್ಲಿಯೂ Gmail ಸ್ಥಗಿತಗೊಂಡಿದೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement