ಭಾರತದ ಭೂ ಸಾರಿಗೆ ಇತಿಹಾಸದಲ್ಲಿ ಹೊಸ ದಾಖಲೆ: ಪುಣೆ-ಮುಂಬೈ ಮಾರ್ಗದಲ್ಲಿ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ

ಹೈದರಾಬಾದ್: ದೇಶದ ಮುಂಚೂಣಿ ಇಲೆಕ್ಟ್ರಿಕ್‌ ಬಸ್​ ಕಾರ್ಯಾಚರಣೆ ಸಂಸ್ಥೆ ಇವಿ ಟ್ರಾನ್ಸ್​ ಪ್ರೈವೇಟ್ ಲಿಮಿಟೆಡ್​ ‘ಪುರಿಬಸ್’ (PuriBus) ಬ್ರಾಂಡ್​ ಅಡಿಯಲ್ಲಿ ಪುಣೆ-ಮುಂಬೈ ಮಾರ್ಗದಲ್ಲಿ ಬುಧವಾರ ಇಲೆಕ್ಟ್ರಿಕ್‌ ಬಸ್​ ಸೇವೆ ಆರಂಭಿಸಿದೆ.
ಮೇಘಾ ಎಂಜಿನಿಯರಿಂಗ್ ಲಿಮಿಟೆಡ್ (MEIL) ಗ್ರೂಪ್​ನ ಭಾಗವಾಗಿರುವ ಈ ಕಂಪನಿಯು ಇದೇ ಮೊದಲ ಬಾರಿಗೆ ದೇಶದಲ್ಲಿ ಎರಡು ಮುಖ್ಯ ನಗರಗಳ ನಡುವೆ ಇಲೆಕ್ಟ್ರಿಕ್‌ ಬಸ್​ ಸೇವೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದೆ. ವಿಜಯದಶಮಿಯಿಂದ (ಅಕ್ಟೋಬರ್ 15ರಿಂದ) ಈ ಸೇವೆ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.
ಫೇಮ್-1 ಮತ್ತು ಫೇಮ್-2 ಉಪಕ್ರಮಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕ ಸಾರಿಗೆಯಲ್ಲಿ ಇಲೆಕ್ಟ್ರಿಕ್‌ ಬಸ್​ಗಳ ಬಳಕೆಯನ್ನು ಉತ್ತೇಜಿಸುತ್ತಿವೆ. ಪುರಿಬಸ್ ಸೇವೆಯ ಸೌಲಭ್ಯಗಳ ಬಗ್ಗೆ ವಿವರಿಸಿದ ಇವಿ ಟ್ರಾನ್ಸ್​​ನ ಪ್ರಧಾನ ವ್ಯವಸ್ಥಾಪಕ ಸಂದೀಪ್ ರೈಜಾದಾ, ‘ಭಾರತದಲ್ಲಿ ಎರಡು ನಗರಗಳ ನಡುವೆ ಇ-ಬಸ್ ಸೇವೆ ಆರಂಭಿಸಿದ ಬಗ್ಗೆ ನಮಗೆ ಹೆಮ್ಮೆಇದೆ. ಒಮ್ಮೆ ಚಾರ್ಜ್ ಮಾಡಿದ ನಂತರ ಪುರಿಬಸ್ 350 ಕಿಮೀ ಅಂತರ ಕ್ರಮಿಸಬಲ್ಲದು. ಹೊಗೆ ಉಗುಳದ ಈ ವಾಹನವು ವಿವಿಧ ನಗರಗಳ ನಡುವೆ ಬಸ್ ಸೇವೆ ಒದಗಿಸುವವರಿಗೆ ಉತ್ತಮ ಆಯ್ಕೆ ಆಗಬಲ್ಲದು. ಸಾಕಷ್ಟು ಉಳಿತಾಯದ ಲಾಭಗಳೂ ಇವೆ’ ಎಂದು ಹೇಳಿದರು.

ಪ್ರಮುಖ ಸುದ್ದಿ :-   2 ಕ್ಷೇತ್ರಗಳಲ್ಲಿ ಒಂದೇ ಪಕ್ಷದ ತಲಾ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ;ತಾವೇ ಅಧಿಕೃತ ಅಭ್ಯರ್ಥಿಗಳೆಂದು ಹಕ್ಕು ಮಂಡನೆ...!

ಬಸ್‌ ಉದ್ದ 12 ಮೀಟರ್

Olectra Buses

ಇಂಟರ್​ಸಿಟಿ ಎಲೆಕ್ಟ್ರಿಕ್ ಕೋಚ್ ಬಸ್​ನಲ್ಲಿ 45 ಪ್ರಯಾಣಿಕರು, ಚಾಲಕ, ಸಹಚಾಲಕರಿಗೆ ಕೂರುವಷ್ಟು ಸ್ಥಳಾವಕಾಶವಿದೆ. ದೂರ ಪ್ರಯಾಣಕ್ಕಾಗಿಯೇ ವಿನ್ಯಾಸ ಮಾಡಿರುವ ಈ ಹವಾನಿಯಂತ್ರಿತ ಬಸ್​ನಲ್ಲಿ ಆರಾಮದಾಯಕ ಮತ್ತು ಐಷಾರಾಮಿ ಪುಶ್​ಬ್ಯಾಕ್​ ಸೀಟ್​ಗಳಿವೆ. ಟಿವಿ ಮತ್ತು ಇನ್​ಫೋಟೈನ್​ಮೆಂಟ್ ವ್ಯವಸ್ಥೆಯ ಜೊತೆಗೆ ವೈ-ಫೈ ಸಹ ಇದೆ. ಪ್ರತಿ ಸೀಟ್​ ಸಮೀಪ ಯುಎಸ್​ಬಿ ಚಾರ್ಜರ್ ಇರುತ್ತದೆ. ಲಗೇಜ್ ಇರಿಸಲೆಂದು ಐದು ಕ್ಯೂಬಿಕ್ ಮೀಟರ್​ನಷ್ಟು ಜಾಗವಿದೆ.
ವಿವಿಧ ನಗರಗಳ ನಡುವೆ ಬಸ್​ಗಳನ್ನು ಓಡಿಸುತ್ತಿರುವ ಬಸ್ ಆಪರೇಟರ್​ಗಳಿಗೆ ಹಲವು ಆರ್ಥಿಕ ಅನುಕೂಲಗಳನ್ನೂ ಈ ಬಸ್ ಒದಗಿಸುತ್ತದೆ. ಅಭಾರತದಲ್ಲಿ ಈ ಬಸ್​ಗಳನ್ನು ಒಲೆಕ್ಟ್ರಾ ಗ್ರೀನ್​ಟೆಕ್ ಲಿಮಿಟೆಡ್​ ನಿರ್ಮಿಸುತ್ತಿದೆ. ಲಿಯಾನ್ ಫಾಸ್ಪೇಟ್​ ಬ್ಯಾಟರಿಗಳಿಂದ ಈ ಬಸ್​ಗಳು ಸಂಚರಿಸುತ್ತವೆ.
ಬಸ್​ನಲ್ಲಿ ಹಲವು ಸುರಕ್ಷಾ ವ್ಯವಸ್ಥೆಗಳು ಇವೆ. ಐರೋಪ್ಯ ಒಕ್ಕೂಟ ಮಾನದಂಡಕ್ಕೆ ಅನುಗುಣವಾದ ಟಿಯುವಿ ಪ್ರಮಾಣಪತ್ರದ ಎಫ್​ಡಿಎಸ್​ಎಸ್ ವ್ಯವಸ್ಥೆ, ಎಡಿಎಎಸ್ ವ್ಯವಸ್ಥೆ (Advanced Driver Assistance System – ADAS) ಮತ್ತು ಭಾರತೀಯ ನಿಯಂತ್ರಣ ಪ್ರಾಧಿಕಾರ ರೂಪಿಸಿರುವ ನಿಯಮಗಳಿಗೆ ಅನುಗುಣವಾದ ಐಟಿಎಸ್​​ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸಂಕಷ್ಟ ಪರಿಸ್ಥಿತಿಯಲ್ಲಿ ಅಲಾರಾಂ ಮೊಳಗಿಸುವ ಮತ್ತು ಬೆಳಕು ಹೊತ್ತಿಕೊಳ್ಳುವ ವ್ಯವಸ್ಥೆಗಳು ಬಸ್​ನಲ್ಲಿ ಇವೆ. ಸೂರತ್, ಸಿಲ್​ವಾಸಾ, ಗೋವಾ, ಹೈದರಾಬಾದ್, ಡೆಹ್ರಾಡೂನ್ ಸೇರಿದಂತೆ ಹಲವು ನಗರಗಳಲ್ಲಿ ಈಗಾಗಲೇ ಇ-ಬಸ್​ಗಳನ್ನು ಕಂಪನಿ ಓಡಿಸುತ್ತಿದೆ. ನಮ್ಮ ಕಂಪನಿಗೆ ಪುರಿಬಸ್​ ಸೇರಿಸಿಕೊಳ್ಳುವ ಮೂಲಕ ಮತ್ತೊಮ್ಮೆ ನಮ್ಮ ಕಾರ್ಯಾಚರಣೆ ಸಾಮರ್ಥ್ಯವನ್ನು ನಿರೂಪಿಸಿದ್ದೇವೆ ಎಂದು ಕಂಪನಿ ಹೇಳಿದೆ.

ಪ್ರಮುಖ ಸುದ್ದಿ :-   ಎಎಪಿಗೆ ಆಘಾತ: ಪಕ್ಷದ ಏಕೈಕ ಲೋಕಸಭಾ ಸದಸ್ಯ ಬಿಜೆಪಿಗೆ ಸೇರ್ಪಡೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement