ತಾಲಿಬಾನಿಗಳ ಹಸ್ತಕ್ಷೇಪ; ಕಾಬೂಲಿಗೆ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ ಪಾಕಿಸ್ತಾನ ಇಂಟರ್​ನ್ಯಾಶನಲ್​ ಏರ್​ಲೈನ್ಸ್​..!

ಕಾಬೂಲ್​​ನಿಂದ ಪಾಕಿಸ್ತಾನಕ್ಕೆ ಬರುತ್ತಿದ್ದ ಮತ್ತು ಪಾಕಿಸ್ತಾನದಿಂದ ಕಾಬೂಲ್​​ಗೆ ಹೋಗುತ್ತಿದ್ದ ಎಲ್ಲ ವಿಮಾನಗಳ ಹಾರಾಟವನ್ನೂ ಸ್ಥಗಿತಗೊಳಿಸುವುದಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ (PIA) ಹೇಳಿದೆ.
ತಾಲಿಬಾನಿಗಳ ಮಿತಿಮೀರಿದ ಹಸ್ತಕ್ಷೇಪ, ಅನಿಯಂತ್ರಿತ ನಿಯಮ ಬದಲಾವಣೆ, ಮತ್ತು ಅಲ್ಲಿನ ಸಿಬ್ಬಂದಿಯ ಬೆದರಿಕೆ, ವಿಪರೀತ ಎನ್ನಿಸುವಷ್ಟು ಕಟ್ಟುನಿಟ್ಟಿನ ನಿಯಮಗಳೇ ಇದಕ್ಕೆ ಕಾರಣ ಎಂದು ಪಾಕಿಸ್ತಾನ ತಿಳಿಸಿದೆ.
ಅಫ್ಘಾನಿಸ್ತಾನದ ಅತಿದೊಡ್ಡ ಖಾಸಗಿ ವಾಹಕವಾದ ಕಾಮ್​ ಏರ್​ ಮತ್ತು ಪಿಐಎ​ (ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನ ಸಂಸ್ಥೆ)ಗೆ ನೀವು ವಿಮಾನ ಪ್ರಯಾಣದ ಟಿಕೆಟ್​ ದರ ವಿಪರೀತವಾಗಿದೆ. ಈ ದರ ಅಫ್ಘಾನಿಸ್ತಾನದ ಬಹುತೇಕ ಜನರ ಕೈಗೆಟಕುತ್ತಿಲ್ಲ. ನೀವದನ್ನು ಕಡಿತಗೊಳಿಸಲು ಒಪ್ಪಿಕೊಳ್ಳದೆ ಹೋದರೆ, ನಿಮ್ಮ ಅಫ್ಘಾನ್​ ವಿಮಾನ ಕಾರ್ಯಾಚರಣೆಗೆ ನಿರ್ಬಂಧ ಹೇರುತ್ತೇವೆ’ ಎಂದು ಇತ್ತೀಚೆಗಷ್ಟೇ ತಾಲಿಬಾನ್​ ಎಚ್ಚರಿಕೆ ನೀಡಿತ್ತು.
ಕಾಬೂಲ್​ ಏರ್​ಪೋರ್ಟ್​​ನಿಂದ ಸದ್ಯ ನಿಯಮಿತವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಏಕೈಕ ಸಂಸ್ಥೆಯೆಂದರೆ ಪಿಐಎ ಮಾತ್ರ ಆಗಿತ್ತು.
ವೇಳಾಪಟ್ಟಿಗೆ ಅನುಸಾರವಾಗಿ ಯಾವುದೇ ವಿಮಾನಗಳೂ ಹಾರಾಟ ನಡೆಸುವುದಿಲ್ಲ. ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು, ಮಿಷನ್​​ಗಳ ಮನವಿಯ ಮೇರೆಗೆ ತಾವು ವಿಮಾನ ಹಾರಾಟ ನಡೆಸುತ್ತಿರುವುದಾಗಿಯೂ ಪಿಐಎ ಹೇಳಿಕೊಂಡಿತ್ತು. ತಾಲಿಬಾನಿಗಳು ಅಫ್ಘಾನಿಸ್ತಾವನ್ನು ವಶಪಡಿಸಿಕೊಂಡ ಬಳಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದ ನಂತರ ಸೆಪ್ಟೆಂಬರ್​ ಮೊದಲ ವಾರದಲ್ಲಿ ಪಾಕಿಸ್ತಾನ ಕಾಬೂಲ್​ಗೆ ವಾಣಿಜ್ಯ ವಿಮಾನಗಳ ಹಾರಾಟ ಶುರುಮಾಡಿತ್ತು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement