ರೈತರಿಗೆ ಮತ್ತೆ ಬೆಂಬಲಿಸಿ ವಾಜಪೇಯಿ ಭಾಷಣದ ವಿಡಿಯೊ ತುಣುಕು ಹಂಚಿಕೊಂಡ ಬಿಜೆಪಿಯ ವರುಣ್ ಗಾಂಧಿ..!

ನವದೆಹಲಿ: ಸಂಸದ ವರುಣ್‍ಗಾಂಧಿ ಮತ್ತೆ ಬಿಜೆಪಿ ಪಕ್ಷಕ್ಕೆ ರೈತರ ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ. ಆದರೆ ಈ ಸಲ ಮಾಝಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿಯವರು ರೈತರನ್ನು ಬಂಬಲಿಸಿ ಮಾತನಾಡಿದ ವಿಡೊಯೊವೊಂದನ್ನು ಹಂಚಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 1980ರಭಾಷಣದ ಸಂಕ್ಷಿಪ್ತ ತುಣುಕನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಗುರುವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಅವರು ರೈತರ ಮೇಲೆ ದಬ್ಬಾಳಿಕೆ ನಡೆಸದಂತೆ ಅಂದಿನ ಇಂದಿರಾಗಾಂಧಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು ಮತ್ತು ರೈತರಿಗೆ ತಮ್ಮ ಬೆಂಬಲವನ್ನು ವಿಸ್ತರಿಸಿದರು.

“ಹೃದಯವಂತ ನಾಯಕನ ಬುದ್ಧಿವಂತ ಮಾತುಗಳು …” ಎಂದು ಹ್ಯಾಷ್‌ ಟ್ಯಾಗ್‌ ಮಾಡಿ ವರುಣ್‌  ಗಾಂಧಿ ಟ್ವೀಟ್ ಮಾಡಿದ್ದಾರೆ.

ಮೋದಿ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಆಂದೋಲನ ನಡೆಸುತ್ತಿರುವ ಬಗ್ಗೆ ಮತ್ತು ವಾಜಪೇಯಿ ಅವರ ಭಾಷಣವನ್ನು ಹಂಚಿಕೊಳ್ಳುವುದು ಕೇಂದ್ರ ಸರ್ಕಾರಕ್ಕೆ ತಮ್ಮ ಸಂದೇಶವೆಂದು ಬಿಜೆಪಿ ಸಂಸದರು ಧ್ವನಿ ಎತ್ತಿದ್ದಾರೆ.
ವಿಡಿಯೊ ತುಣುಕಿನಲ್ಲಿ, “ಸರ್ಕಾರವು (ರೈತರನ್ನು) ದಮನ ಮಾಡಿದರೆ, ಕಾನೂನುಗಳನ್ನು ದುರುಪಯೋಗಪಡಿಸಿಕೊಂಡು ಶಾಂತಿಯುತ ಆಂದೋಲನವನ್ನು ನಿಗ್ರಹಿಸಿದರೆ, ನಾವು ರೈತರ ಹೋರಾಟಕ್ಕೆ ಸೇರಲು ಮತ್ತು ಅವರೊಂದಿಗೆ ನಿಲ್ಲಲು ಹಿಂಜರಿಯುವುದಿಲ್ಲ” ಎಂದು ವಾಜಪೇಯಿ ಅವರು ಹೇಳುತ್ತಾರೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಬಿಜೆಪಿ ನಾಯಕರ ವಾಹನಗಳು ನಾಲ್ಕು ರೈತರ ಸಾವಿಗೆ ಕಾರಣರಾದ ನಂತರ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಗಾಂಧಿ ಕೋರಿದ್ದಾರೆ. ಪಿಲಿಭಿತ್ ಸಂಸದರ ಜೊತೆ ಪಕ್ಷದ ನಾಯಕತ್ವದ ಅಸಮಾಧಾನದ ಸೂಚನೆಯಂತೆ ಅವರನ್ನು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಯಿತು.

ಈ ವಿಡಿಯೊ ತುಣುಕನ್ನು ಟ್ವೀಟ್‌ ಮಾಡುವ ಮೂಲಕ ಬಿಜೆಪಿ ಸಂಸದ ವರುಣ್‍ಗಾಂಧಿ ಬಿಜೆಪಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯಿದೆ ತಿದ್ದುಪಡಿ ವಿರೋಧೀಸಿ ರೈತರು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ವರುಣ್‍ಗಾಂಧಿ ಅವರು ವಾಜಪೇಯಿ ಅವರ ಹೇಳಿಕೆಯ ತುಣುಕು ಪೋಸ್ಟ್ ಮಾಡುವುದರ ಜೊತೆಗೆ
ಈ ಹಿಂದೆ ಲಖಿಂಪುರ ಹಿಂಸಾಚಾರದ ಬಗ್ಗೆ ಅವರು ರೈತರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ ನಂತರ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಅವರನ್ನು ಕೈಬಿಡಲಾಐಇತು. ಆದರೂ ಅವರು ಕೃಷಿ ಕಾನೂನು ವಿರೋಧಿಸಿ ರೈತರು ಮಾಡುತ್ತಿರುವ ಹೋರಾಟಕ್ಕೆ ಬಂಬಲ ಸೂಚಿಸುವುದನ್ನು ಮುಂದುವರಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ