ಬಾಡ :ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ಸಂಪನ್ನ

ಕುಮಟಾ : ತಾಲೂಕಿನ ಪ್ರಸಿದ್ಧ ಶಕ್ತಿ ಸ್ಥಳ ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ಸಂಪನ್ನವಾಯಿತು.
ವಿಜಯ ದಶಮಿ ದಿನವಾದ ಶುಕ್ರವಾರ ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳ ಮೂಲಕ ನವರಾತ್ರಿ ಉತ್ಸವ ವೈಭವಯುತವಾಗಿ ನಡೆಯಿತು.
ಮುಂಜಾನೆ ಪಲ್ಲಕಿ ಉತ್ಸವ ನಡೆಯಿತು. ಶ್ರೀ ಕಾಂಚಿಕಾ ಪರಮೇಶ್ವರಿ ಪಲ್ಲಕಿ ಮೂಲಕ ಭತ್ತದ ಗದ್ದೆಗೆ ಸಾಗಿ ಕದಿರು ತರುವ ಸಂಪ್ರದಾಯ ನಡೆಯಿತು. ನಂತರ ದೇವಾಲಯದ ಸುತ್ತಲೂ ಕದಿರು ಚೆಲ್ಲುವ ಶಾಸ್ತ್ರ ನಡೆಯಿತು. ಭಕ್ತರು ತಮ್ಮ ಹರಕೆ ಪೂರೈಸಿಕೊಂಡರು.
ದೇವಾಲಯದಲ್ಲಿ ತುಲಾ ಭಾರ ಸೇವೆ ವೈಶಿಷ್ಟ್ಯವಾಗಿತ್ತು. ಇಂದು ದೇವಿ ಸನ್ನಿಧಿಯಲ್ಲಿ ಹೊಸ ಧಾನ್ಯದ ಕದಿರು ಪೂಜೆ ನಡೆಯಿತು.

advertisement

ಶ್ರೀ ಕಾಂಚಿಕಾ ಪರಮೇಶ್ವರಿ ಗ್ರಾಮ ದೇವತೆಯಾಗಿದ್ದು ಇಂದು ಕದಿರಿನ ಪೂಜೆ ನಡೆಯುತ್ತಿದ್ದಂತೆ ಊರ ಎಲ್ಲರ ಮನೆಯಲ್ಲಿ ಹೊಸಧಾನ್ಯದ ಮೂಲಕ ಹೊಸ್ತು ತೆಗೆದುಕೊಳ್ಳುವ ಸಂಪ್ರದಾಯ ನೆರವೇರುವುದು.. ಕಳೆದ ವರ್ಷ ಕೊರೊನಾದಿಂದ ನವರಾತ್ರಿ ಪೂಜೆಗೆ ವ್ಯತ್ಯಯವಾಗಿತ್ತು… ಈ ವರ್ಷ ಭಕ್ತ ಸಾಗರವೇ ಹರಿದು ಬಂದು ಹೂವಿನ ಅಲಂಕಾರ ದೊಂದಿಗೆ ಶ್ರೀ ದೇವಿಯ ನವರಾತ್ರಿ ಪೂಜೆ ಸಂಪನ್ನವಾಯಿತು.

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

advertisement