ಅರ್ಜೆಂಟೀನಾ ಫುಟ್ಬಾಲ್‌ ಆಟಗಾರ ಮೆಸ್ಸಿ ದಾಖಲೆ ಸರಿಗಟ್ಟಿದ ಭಾರತ ತಂಡದ ನಾಯಕ ಸುನೀಲ್ ಛೇಟ್ರಿ

ಮಾಲೆ: ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಛೇಟ್ರಿ ಅವರು 80ನೇ ಗೋಲು ಸಿಡಿಸುವ ಮೂಲಕ ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ದಾಖಲೆಯನ್ನು ಸರಿಗಟ್ಟಿದ್ದಾರೆ.
ಶನಿವಾರ ನಡೆದ ಸ್ಯಾಫ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೋಲು ದಾಖಲಿಸುವ ಮೂಲಕ ಛೇಟ್ರಿ ಈ ಸಾಧನೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿಹೆಚ್ಚು ಗೋಲು ದಾಖಲಿಸಿದ ಆಟಗಾರರ ಪೈಕಿ ಅವರು ಮೆಸ್ಸಿ ಅವರೊಂದಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡರು. ಶನಿವಾರ ನಡೆದ ಸ್ಯಾಫ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೋಲು ದಾಖಲಿಸುವ ಮೂಲಕ ಸುನೀಲ ಛೇಟ್ರಿ ಈ ಸಾಧನೆ ಮಾಡಿದ್ದಲ್ಲದೆ ಭಾರತ ಫುಟ್‌ಬಾಲ್ ತಂಡವು 8ನೇ ಬಾರಿಗೆ ಸ್ಯಾಫ್ ಟ್ರೋಫಿ ಗೆದ್ದುಕೊಂಡಿದೆ.
ಫೈನಲ್ ಹಣಾಹಣಿಯಲ್ಲಿ ಸುನೀಲ್ ಛೇಟ್ರಿ ಬಳಗ 3-0 ಗೋಲುಗಳಿಂದ ನೇಪಾಳ ತಂಡವನ್ನು ಮಣಿಸಿತು. 13ನೇ ಆವೃತ್ತಿಯ ಟೂರ್ನಿಯಲ್ಲಿ 12ನೇ ಫೈನಲ್ ಪಂದ್ಯವಾಡಿದ ಭಾರತ ತಂಡ ದಕ್ಷಿಣ ಏಷ್ಯಾ ವಲಯದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿತು. ಈ ಮೂಲಕ ಇಗೊರ್ ಸ್ಟಿಮ್ಯಾಕ್ ಮಾರ್ಗದರ್ಶನದಲ್ಲಿ ಭಾರತ ತಂಡ ಜಯಿಸಿದ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಇದಾಗಿದೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement