ಕೇರಳದಲ್ಲಿ ಮಳೆಗೆ ಕೊಚ್ಚಿಹೋದ ಮೂರು ತಲೆಮಾರುಗಳ ಆರು ಜನರ ಕುಟುಂಬ..!

ತಿರುವನಂತಪುರಂ: ಕೇರಳದ ಕೂಟಕ್ಕಲ್‌ ನ ಕವಳಿಯಲ್ಲಿ  ಇಡೀ ಕುಟುಂಬ – ಅಜ್ಜಿ, ತಂದೆ, ತಾಯಿ ಮತ್ತು ಮೂವರು ಹೆಣ್ಣುಮಕ್ಕಳು – ಅಕ್ಟೋಬರ್ 16 ರ ಶನಿವಾರ ಮಳೆಗೆ ಕೊಚ್ಚಿ ಹೋಗಿದ್ದಾರೆ.
ಅಲ್ಲಿ ಶನಿವಾರ ಭೂಕುಸಿತ ಸಂಭವಿಸಿದೆ. ಒಟ್ಟಲಂಗಲ್ ಮಾರ್ಟಿನ್ ಅವರ ಮನೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ, ಮತ್ತು ಅದರೊಂದಿಗೆ ಕುಟುಂಬದ ಆರು ಮಂದಿ ಸಹ. ಅವರಲ್ಲಿ ಮೂವರ ಮೃತ ದೇಹಗಳು ಪತ್ತೆಯಾಗಿವೆ ಎಂದು ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.
ಕ್ಲಾರಮ್ಮ ಜೋಸೆಫ್ (65), ಅವರ ಮಗ ಮಾರ್ಟಿನ್ (48), ಅವರ ಪತ್ನಿ ಸಿನಿ (37), ಅವರ ಹೆಣ್ಣುಮಕ್ಕಳಾದ ಸೋನಾ (11), ಸ್ನೇಹಾ (13) ಮತ್ತು ಸಾಂಡ್ರಾ (9) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಮೃತರಲ್ಲಿ ಕ್ಲಾರಮ್ಮ, ಸಿನಿ ಮತ್ತು ಸೋನಾ ಅವರ ಮೃತದೇಹಗಳು ಪತ್ತೆಯಾಗಿದೆ. ಮಾರ್ಟಿನ್ ಕುಟುಂಬವನ್ನು ಹೊರತುಪಡಿಸಿ, ಇತರ ನಾಲ್ವರು ಸಹ ಮಳೆ ಮತ್ತು ಭೂಕುಸಿತದಲ್ಲಿ ಕೊತ್ತಿಕಲ್‌ನ ಕಾವಲಿ ಮತ್ತು ಪ್ಲಾಪಲ್ಲಿಯಲ್ಲಿ ಕೊಚ್ಚಿಹೋಗಿದ್ದಾರೆ ಎಂದು ವರದಿ ಹೇಳಿದೆ.
ಮಾರ್ಟಿನ್ ಪಕ್ಕದಲ್ಲಿದ್ದ ಮೂರು ಮನೆಗಳು ಕೊಚ್ಚಿ ಹೋಗಿದ್ದು, ಕಾಣೆಯಾದ ನಾಲ್ಕು ಜನರು ಮನೆಯೊಟ್ಟಿಗೆ ಕೊಚ್ಚಿ ಹೋಗಿದ್ದಾರೆ ಎಂದು ನಂಬಲಾಗಿದೆ. ಇಬ್ಬರು ಯುವಕರು ಮರದ ಕೊಂಬೆಗಳನ್ನು ಹಿಡಿದುಕೊಂಡು ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕೂಟ್ಟಿಕಲ್‌ಗೆ ಹೋಗುವ ಎಲ್ಲಾ ರಸ್ತೆಗಳು ಬಂದ್‌ ಆಗಿದ್ದರಿಂದ ಯಾವುದೇ ರಕ್ಷಣಾ ತಂಡವು ಆ ಸಮಯದಲ್ಲಿ ತಲುಪಲು ಸಾಧ್ಯವಾಗಲಿಲ್ಲ.
ಕೂಟ್ಟಿಕಲ್ ನಲ್ಲಿ ಭೂಕುಸಿತ..:
ಶನಿವಾರ ಮುಂಜಾನೆಯಿಂದ ಕೂಟಿಕಲ್‌ನಲ್ಲಿ ಭಾರೀ ಮಳೆ ಆರಂಭವಾಯಿತು. ಭೂಕುಸಿತದ ಸುದ್ದಿ ಬೆಳಿಗ್ಗೆ 10.30ಕ್ಕೆ ಮಾತ್ರ ಬಂತು. ಅಷ್ಟೊತ್ತಿಗಾಗಲೆ ಇಡೀ ಪಟ್ಟಣ ಮತ್ತು ಪಂಚಾಯಿತಿಯ ಹೆಚ್ಚಿನ ಭಾಗವು ಮುಳುಗಡೆಯಾಗಿತ್ತು. ಪಟ್ಟಣಕ್ಕೆ ಹೋಗುವ ಎಲ್ಲಾ ರಸ್ತೆಗಳು ಬಂದ್‌ ಆಗಿತ್ತು.
ಎರ್ನಾಕುಲಂ ಜಿಲ್ಲೆಯ ಮುವಾಟ್ಟುಪುಳದಲ್ಲಿ ಮಳೆಗೆ ಸಂಬಂಧಿಸಿದ ಇನ್ನೊಂದು ಘಟನೆಯಲ್ಲಿ, ಕೂತತುಕುಲಂ ಪಟ್ಟಣದಲ್ಲಿ ಕಾರು ಕೊಚ್ಚಿಕೊಂಡು ಹೋದಾಗ ಇಬ್ಬರು ಕಾರಿನೊಳಗೆ ಮೃತಪಟ್ಟಿದ್ದಾರೆ. ಮೃತರನ್ನು ನಿಖಿಲ್ ಉನ್ನಿಕೃಷ್ಣನ್ (30) ಮತ್ತು ನಿಮಾ ಕೆ ವಿಜಯನ್ (28) ಎಂದು ಗುರುತಿಸಲಾಗಿದ್ದು, ಇಬ್ಬರೂ ಕೂತತುಕುಲಂ ಆಯುರ್ವೇದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement