ಗೋಕರ್ಣ: ಈಜಲು ಸಮುದ್ರಕ್ಕೆ ಇಳಿದ ಬೆಂಗಳೂರಿನ ಯುವಕ ನಾಪತ್ತೆ

ಕುಮಟಾ: ಸಮುದ್ರದಲ್ಲಿ ಈಜಲು ಹೋಗಿದ್ದ ಪ್ರವಾಸಿಗನೊಬ್ಬ ಸಮುದ್ರದಲ್ಲಿ ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ನಾಪತ್ತೆಯಾದ ಯುವಕನನ್ನು ಬೆಂಗಳೂರು ಮೂಲದ ರವಿ ನಂದನ್ (23) ಎಂದು ಗುರುತಿಸಲಾಗಿದೆ. ಆತನ ಪತ್ತೆಗಾಗಿ ಹುಡುಕಾಟ ನಡೆದಿದೆ.
ಭಾನುವಾರ ಬೆಂಗಳೂರಿನಿಂದ ಐದು ಜನ ಯುವಕರು ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದಾರೆ. ಇವರಲ್ಲಿ ರವಿ ನಂದನ್ ಸಮುದ್ರದಲ್ಲಿ ಈಜಾಡಲು ಇಳಿದಿದ್ದಾನೆ‌. ಈ ವೇಳೆ ಅಲೆಗಳ ರಭಸಕ್ಕೆ ಈತ ಸಮುದ್ರದಲ್ಲಿ ತೇಲಿಹೋಗಿದ್ದಾನೆ ಎಂದು ಹೇಳಲಾಗಿದೆ.
ಗೋಕರ್ಣದ ಪೊಲೀಸರು ಹಾಗೂ ಕೋಸ್ಟಲ್‌ ಗಾರ್ಡ್‌ ಈತನಿಗಾಗಿ ಸಮುದ್ರದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಗೋಕರ್ಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 / 5. 1

ಪ್ರಮುಖ ಸುದ್ದಿ :-   ಶಾಸಕ ಸ್ಥಾನದಿಂದ ಅನರ್ಹಗೊಂಡ ಜನಾರ್ದನ ರೆಡ್ಡಿ

ನಿಮ್ಮ ಕಾಮೆಂಟ್ ಬರೆಯಿರಿ

advertisement