ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ; ವಿಮಾನದಲ್ಲಿ ಬಳಸುವ ಇಂಧನಕ್ಕಿಂತ 30%ಕ್ಕಿಂತ ಹೆಚ್ಚು ದುಬಾರಿ..!

ನವದೆಹಲಿ: ಜನಸಾಮಾನ್ಯರು ತಮ್ಮ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಬಳಸುವ ಪೆಟ್ರೋಲ್‍ನ ಬೆಲೆ ವಿಮಾನಗಳಿಗೆ ಬಳಸುವ ಇಂಧನಕ್ಕಿಂತಲೂ ಈಗ ದುಬಾರಿಯಾಗಿದೆ…!
ನಾಔಉ ವಾಹನಗಳಿಎ ಬಳಸುವ ಪೆಟ್ರೋಲ್‌ ದರವು ವಿಮಾನಗಳಲ್ಲಿ ಬಳಸುವ ಒಂದು ಲೀಟರ್ ಟರ್ಬೈನ್ ಇಂಧನ(ಎಟಿಎಫ್)ಕ್ಕಿಂತ .ಶೇ.33ರಷ್ಟು ಹೆಚ್ಚಳವಅಗುವ ಮೂಲಕ ದೇಶದಲ್ಲೇ ಐತಿಹಾಸಿಕ ದಾಖಲೆ ನಿರ್ಮಿಸಿದೆ.
ಭಾನುವಾರ ಕೂಡ ಪೆಟ್ರೋಲ್, ಡೀಸೆಲ್ ಬೆಲೆ 35 ಪೈಸೆ ಹೆಚ್ಚಳವಾಗಿದ್ದು , ಸತತ 4ನೆ ದಿನ ಕೂಡ ತೈಲ ಬೆಲೆ ಜನಸಾಮಾನ್ಯರನ್ನು ಕಂಗೆಡುವಂತೆ ಮಾಡಿದೆ.
ದೇಶದ 12 ರಾಜ್ಯಗಳಲ್ಲಿ ಸರಕು ಸಾಗಾಣಿಕೆಗೆ ಬಳಸುವ ಡೀಸೆಲ್ ದರ 100 ರೂ. ಗಡಿ ದಾಟಿದೆ. ರಾಜಸ್ತಾನದ ಗಡಿ ಭಾಗವಾಗಿರುವ ಗಂಗಾ ನಗರದಲ್ಲಿ ಪೆಟ್ರೋಲ್ ಬೆಲೆ 117.86 ರೂ. ಡೀಸೆಲ್ 105.95 ರೂ. ಗಳಷ್ಟಾಗಿದೆ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಸೇರಿದಂತೆ ಅನೇಕ ಮಹಾ ನಗರಗಳಲ್ಲಿ ಪೆಟ್ರೋಲ್ ಬೆಲೆ ದಾಖಲಾರ್ಹ ಮಟ್ಟದಲ್ಲಿ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಈ ಮೊದಲು ವಿಜಯಪುರ ಹಾಗೂ ಕೆಲವು ಜಿಲ್ಲೆಗಳಲ್ಲಿ ಡೀಸೆಲ್ ದರ 100 ರೂ. ಗಡಿ ದಾಟಿತ್ತು. ಆದರೆ ಇಂದು (ಭಾನುವಾರ) ರಾಜಧಾನಿ ಬೆಂಗಳೂರಿನಲ್ಲೂ ಶತಕದ ಗಡಿ ದಾಟಿದೆ…!ಬೆಂಗಳರಿನಲ್ಲಿ ಪೆಟ್ರೋಲ್‌ ದರ 108 ರೂ.ಗಳಿಗಿಂತ ಹೆಚ್ಚಿದೆ.
ವಿಮಾನಗಳಿಗೆ ಬಳಸುವ ಏವಿಯೇಷನ್ ಟ್ರುಬೈನ್ ಫ್ಯುಯಲ್ (ಎಟಿಎಫ್) ದರ ಕಿಲೋ ಲೀಟರಿಗೆ 79,020. 16 ರೂ.ಗಳು ಅಂದರೆ ಪ್ರತಿ ಲೀಟರಿಗೆ 79 ರೂ.ಗಳಷ್ಟಾಗುತ್ತದೆ. ಆದರೆ ಜನಸಾಮಾನ್ಯರು ಬಳಸುವ ಪೆಟ್ರೋಲ್‍ ಬೆಲೆ ಕನಿಷ್ಠ 105 ರಿಂದ 118 ರೂ.ಗಳ ವರೆಗೂ ಇದ್ದು, ಇದು ಎಟಿಎಫ್ ಇಂಧನಕ್ಕಿಂತಲೂ ಶೇ.33ರಷ್ಟು ದುಬಾರಿ ಎಂದು ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.
ಸೆಪ್ಟೆಂಬರ್ ತಿಂಗಳ ಕೊನೆ ವಾರದಿಂದ ಪೆಟ್ರೋಲ್ ಬೆಲೆ 16 ಬಾರಿ ಹೆಚ್ಚಳವಾಗಿದೆ. ಡೀಸೆಲ್ ಸೆಪ್ಟೆಂಬರಿನಿಂದ ಈಚೆಗೆ 19 ಬಾರಿ ಏರಿಕೆ ಕಂಡಿದೆ.
ಕರ್ನಾಟಕ, ಮಧ್ಯಪ್ರದೇಶ, ರಾಜಸ್ತಾನ, ಒಡಿಸಾ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ , ಛತ್ತೀಸ್‍ಗಢ, ಬಿಹಾರ್, ಕೇರಳ ಮತ್ತು ಲಡಾಕ್‍ನಲ್ಲಿ ಪೆಟ್ರೋಲ್ 100 ರೂ. ಗಡಿ ದಾಟಿದೆ.
ಆದಾಗ್ಯೂ ಕೂಡ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡದೆ ಇರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದುಬಾರಿಯಾಗಿರುವುದನ್ನೇ ನೆಪವಾಗಿಟ್ಟುಕೊಂಡು ಸೆ.28ರ ಬಳಿಕ ಇಂಧನದ ಬೆಲೆಯನ್ನು ಏರಿಕೆ ಮಾಡಲಾಗಿದ್ದು, ಪೆಟ್ರೋಲ್ ಬೆಲೆ 5.95 ರೂ., ಡೀಸೆಲ್ 4.65 ರೂ.ಗಳಷ್ಟು ಹೆಚ್ಚಿಸಲಾಗಿದೆ.
ಕಳೆದ ಮೇ 4 ರಿಂದ ಜು.19ರ ನಡುವೆ ಪೆಟ್ರೋಲ್ 11.44 ರೂ. ಡೀಸೆಲ್ 9.14 ಪೈಸೆ ಹೆಚ್ಚಳವಾಗಿತ್ತು. ಸತತವಾಗಿ ಏರಿಕೆಯಾಗುತ್ತಿರುವ ಇಂಧನ ಬೆಲೆಯಿಂದ ಸರಕು ಸಾಗಣಿಕೆಯ ಮೇಲೂ ಪರಿಣಾಮ ಬೀರಿದ್ದು ದಿನನಿತ್ಯದ ವಸ್ತುಗಳ ಬೆಲೆ ಕೂಡ ಹೆಚ್ಚಾಗಿದೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement