ಆಸಕ್ತಿದಾಯಕ: ಕೇರಳದಲ್ಲಿ ಪ್ರವಾಹದ ನಡುವೆ ದೊಡ್ಡ ಪಾತ್ರೆಯನ್ನೇ ದೋಣಿ ಮಾಡಿಕೊಂಡು ಮದುವೆ ಮಂಟಪಕ್ಕೆ ಬಂದ ವಧುವರರು…! ವೀಕ್ಷಿಸಿ

ತಿರುವನಂತಪುರಂ: ಪ್ರವಾಹದಸಿಲುಕಿ ನಲುಗುತ್ತಿರುವ ಕೇರಳದಲ್ಲಿ ವಧ-ವರರಿಬ್ಬರು ದೊಡ್ಡ ಅಡುಗೆ ಪಾತ್ರೆಯಲ್ಲಿ ಕುಳಿತು ಮದುವೆ ಮಂಟಪಕ್ಕೆ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈಗ ದೊಡ್ಡ ಸುದ್ದಿಯಾಗಿದೆ.
ಕೇರಳದಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ಯಾರಿಗೂ ಮದುವೆಗೆ ಬರಲು ಸಾಧ್ಯವಾಗಲಿಲ್ಲ. ವಧು-ವರರಿಗೂ ಬರಲು ಸಾಧ್ಯವಾಗಿರಲಿಲ್ಲ. ಕೊನೆಗೆ ಅವರು ಕಂಡುಕೊಂಡಿದ್ದು ಈ ಉಪಾಯ. ದೊಡ್ಡ ಅಡುಗೆ ಪಾತ್ರೆಯನ್ನೇ ದೋಣಿ ಮಾಡಿಕೊಂಡು ಅವರಿಬ್ಬರು ಮದುವೆ ಮಂಟಪ ತಲುಪಿಸಿದ್ದಾರೆ..!

ಅಲಫುಜದಲ್ಲಿ ಈ ವಿದ್ಯಮಾನ ನಡೆದಿದೆ.ಆರೋಗ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಧು ಐಶ್ವರ್ಯ, ವರ ರಾಹುಲ್ ಇಬ್ಬರು ಮದುವೆ ಮಂಟಪಕ್ಕೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದರು. ಕೊನೆಗೆ ದೊಡ್ಡ ಗಾತ್ರದ ಅಲ್ಯುಮಿನಿಯಂ ಅಡುಗೆ ಪಾತ್ರೆಯಲ್ಲಿ ಅವರಿಬ್ಬರನ್ನು ಕೂರಿಸಿಕೊಂಡು ನೀರಿನಲ್ಲಿ ತಳ್ಳಿಕೊಂಡು ಮದುವೆ ಮಂಟಪಕ್ಕೆ ಅವರನ್ನು ಕರೆದೊಯ್ಯಲಾಯಿತು.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಹತ್ತಿರದ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಕೇರಳದ ತಲವಾಡಿಯಲ್ಲಿರುವ ಸಭಾಂಗಣವೊಂದರಲ್ಲಿ ಅವರಿಬ್ಬರ ಮದುವೆ ನಡೆಯಬೇಕಿತ್ತು.
ಆದರೆ ಕೇರಳದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಪ್ರವಾಹ ಉಂಟಾಗಿ ಮದುವೆಗೆ ಅಚಾನಕ್ಕಾಗಿ ತೊಂದರೆ ಎದುರಾಗಿತ್ತು. ಮದುವೆ ಮಂಟಪಕ್ಕೆ ನೀರಿನಲ್ಲಿ ನಡೆದುಕೊಂಡು ಹೋಗುವುದು ಅಸಾಧ್ಯವಾದ ಕಾರಣ ಮದುಮಕ್ಕಳಾಗಿ ತಯಾರಾಗಿದ್ದ ವಧು, ವರರನ್ನು ಅಡುಗೆ ಮಾಡಲು ದೊಡ್ಡ ತಪ್ಪಲೆಯಲ್ಲಿ ಕೂರಿಸಿಕೊಂಡು ಅವರ ಸಂಬಂಧಿಕರು ಪ್ರವಾಹದ ನೀರಿನಲ್ಲಿ ಅವರನ್ನು ಕರೆದೊಯ್ದಿದಿರುವುದನ್ನು ನಾವು ವಿಡಿಯೊದಲ್ಲಿ ನೋಡಬಹುದಾಗಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ಎಫ್ -16 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement