ಟಿ 20 ವಿಶ್ವಕಪ್ :ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್: ಹೊಸ ದಾಖಲೆ ಬರೆದ ಐರ್ಲೆಂಡ್ ಬೌಲರ್..!

ಅಬುಧಾಬಿ: ಐಸಿಸಿ ಟಿ 20 ವಿಶ್ವಕಪ್ ಕೂಟದ ಎರಡನೇ ದಿನದಾಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಐರ್ಲೆಂಡ್ ಬೌಲರ್ ಕರ್ಟಿಸ್ ಕ್ಯಾಂಫರ್ ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಕಿತ್ತು ಈ ಹೊಸದಾಖಲೆ ಬರೆದಿದ್ದಾರೆ.
ಶೇಕ್ ಝಯೀದ್ ಮೈದಾನದಲ್ಲಿ ನೆದರ್ಲಾಂಡ್ ವಿರುದ್ಧದ ಪಂದ್ಯದಲ್ಲಿ ಕ್ಯಾಂಫರ್ ಈ ದಾಖಲೆ ಮಾಡಿದ್ದಾರೆ.ಹೀಗೆ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಮೂರನೇ ಬೌಲರ್ ಆಗಿ ಕರ್ಟಿಸ್ ಕ್ಯಾಂಫರ್ ಈ ಸಾಧನೆ ಮಾಡಿದರು.ಐರ್ಲೆಂಡ್‌ಗಾಗಿ ಚೊಚ್ಚಲ ಟಿ 20 ಪಂದ್ಯವನ್ನು ಆಡುವ ಮೂಲಕ, ಆಲ್‌ರೌಂಡರ್ ತನ್ನ ತಂಡವನ್ನು ಅದ್ಭುತ ಆರಂಭಕ್ಕೆ ತರಲು ಸತತವಾಗಿ ನಾಲ್ಕು ನೆದರ್‌ಲ್ಯಾಂಡ್ ಬ್ಯಾಟರ್‌ಗಳನ್ನು ಔಟ್‌ ಮಾಡಿದರು.

2019ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಲಸಿತ್ ಮಾಲಿಂಗ ಮತ್ತು ಅದೇ ವರ್ಷ ಐರ್ಲೆಂಡ್ ವಿರುದ್ಧ ರಶೀದ್ ಖಾನ್ ಈ ದಾಖಲೆ ಮಾಡಿದ್ದರು. ಈ ಸಾಲಿಗೆ ಇದೀಗ ಕರ್ಟಿಸ್ ಕ್ಯಾಂಫರ್ ಸೇರಿದ್ದಾರೆ.
10ನೇ ಓವರ್ ನ ಎರಡನೇ ಎಸೆತದಲ್ಲಿ ಏಕರ್ ಮನ್ ಅವರು ಕ್ಯಾಚಿತ್ತು ಔಟಾದರು. ಅಲ್ಲಿಂದ ವಿಕೆಟ್‌ ಪತನ ಆರಂಭವಾಯಿತು. ಮೂರನೇ ಎಸೆತದಲ್ಲಿ ಟೆನ್ ಡೆಷ್ಕೋಟ್ ಎಲ್ ಬಿಡಬ್ಲ್ಯೂ ಬಲೆ ಬಿದ್ದರು. ನಾಲ್ಕನೇ ಎಸೆತದಲ್ಲಿ ಬಲಗೈ ಆಟಗಾರ ಸ್ಕಾಟ್ ಎಡ್ವರ್ಡ್ಸ್ ಅವರನ್ನು ಕರ್ಟಿಸ್ ಕ್ಯಾಂಫರ್ ಎಲ್ ಬಿಡಬ್ಲ್ಯೂ ಬಲೆಗೆ ಕೆಡ ಹ್ಯಾಟ್ರಿಕ್ ಸಾಧನೆ ಮಾಡಿದರು. ಅವರ ವಿಕೆಟ್‌ ದಾಹ ಇಲ್ಲಿಗೇ ನಿಲ್ಲಲಿಲ್ಲ. ಮುಂದಿನ ಎಸೆತದಲ್ಲಿ ವಾನ್ ಡರ್ ಮರ್ವ್ ರನ್ನು ಕ್ಲೀನ್ ಬೌಲ್ಡ್ ಮಾಡಿದ ಕರ್ಟಿಸ್ ಕ್ಯಾಂಫರ್ ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಪಡೆದು ಟಿ 20 ವಿಶ್ವಕಪ್ ನಲ್ಲಿ ಹೊಸ ದಾಖಲೆ ಬರೆದರು.

ಪ್ರಮುಖ ಸುದ್ದಿ :-   ವೀಡಿಯೊ : ಸೇನಾ ಹೆಲಿಕಾಪ್ಟರ್‌ ಗಳ ಡಿಕ್ಕಿ ; 10 ಮಂದಿ ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement