ಅಯೋಧ್ಯೆಗೆ ಉಚಿತ ವಿಮಾನ ಪ್ರಯಾಣ ಬೇಕೇ? ಮಧ್ಯಪ್ರದೇಶ ಸರ್ಕಾರದ ರಾಮಾಯಣ ರಸಪ್ರಶ್ನೆಯಲ್ಲಿ ಭಾಗವಹಿಸಿ

ಭೋಪಾಲ್​: ರಾಮ ಜನ್ಮ ಭೂಮಿ ಅಯೋಧ್ಯೆಗೆ ಹೋಗಬೇಕು ಜೀವನದಲ್ಲಿ ಒಮ್ಮೆಯಾದರೂ ಎಂಬ ಮನದಾಸೆ ಹಲವರಿಗೆ ಇರುತ್ತದೆ. ಇದಕ್ಕೆ ಅವಕಾಶ ನೀಡಲು ಈಗ ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಮುಂದಾಗಿದೆ. ಅಯೋಧ್ಯೆಗೆ ವಿಮಾನದಲ್ಲಿ ಉಚಿತ ಪ್ರಯಾಣ ಮಾಡಲು ಅದು ಅವಕಾಶ ನೀಡಿದೆ. ಹೀಗೆ ಹೋಗಲು ಅದು ಏಪಡಿಸಿರುವ ‘ರಾಮಾಯಣ’ ಕುರಿತು ಸಾಮಾನ್ಯ ಜ್ಞಾನ ರಸಪ್ರಶ್ನೆ ಸ್ಫರ್ಧೆಯಲ್ಲಿ ವಿಜೇತರಾಗಬೇಕು. ಗೆದ್ದವರಿಗೆ ಬಹುಮಾನವೆಂದರೆ ಅಯೋಧ್ಯೆಗೆ ವಿಮಾನದಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ.
ರಾಮಾಯಣ ಕುರಿತು ರಸಪ್ರಶ್ನೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ ಎಂದು ಮಧ್ಯಪ್ರದೇಶದ ಸಂಸ್ಖೃತಿ ಮತ್ತು ಆಧ್ಯಾತ್ಮಿಕ ಇಲಾಖೆ ಸಚಿವೆ ಉಷಾ ಠಾಕೂರ್​ ಹೇಳಿದ್ದಾರೆ.
ಇಂದೋರ್ ಜಿಲ್ಲೆಯ ಮಹೋ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮಾಜ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಭಾನುವಾರ ‘ರಾಮಚರಿತ ಮಾನಸ್’ ಮಹಾಕಾವ್ಯದ ಅಧ್ಯಾಯಗಳಲ್ಲಿ ಒಂದಾದ ‘ಅಯೋಧ್ಯಾ ಕಂಡ್’ ನಲ್ಲಿ ಚಿತ್ರಿಸಲಾದ ಮೌಲ್ಯ ಸೃಷ್ಟಿಯ ಉದಾಹರಣೆಗಳ ಆಧಾರದ ಮೇಲೆ ನಡೆದ ಮತ್ತೊಂದು ಸಾಮಾನ್ಯ ಜ್ಞಾನ ಸ್ಪರ್ಧೆ ಉದ್ಘಾಟಿಸಿದ ನಂತರ ಠಾಕೂರ್ ಘೋಷಣೆ ಮಾಡಿದ್ದಾರೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ರಾಮಾಯಣ’ ಆಧಾರಿತ ಸಾಮಾನ್ಯ ಜ್ಞಾನ ಸ್ಪರ್ಧೆಯನ್ನು ಆಯೋಜಿಸಲಾಗುವುದು ಎಂದು ಭಾನುವಾರ ಸಚಿವರನ್ನು ಉಲ್ಲೇಖಿಸಿ ಅಧಿಕೃತ ಹೇಳಿಕೆ ಬಂದಿದೆ.ಸ್ಪರ್ಧೆಯಲ್ಲಿ ವಿಜೇತರಾದವರು ವಿಮಾನದಲ್ಲಿ ಅಯೋಧ್ಯೆಗೆ ಪ್ರಯಾಣಿಸಲು ಅವಕಾಶವನ್ನು ಪಡೆಯುತ್ತಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸ್ಪರ್ಧೆಯು ಯಾವಾಗ ನಡೆಯಲಿದೆ ಮತ್ತು ಎಷ್ಟು ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement