ಒಂದಲ್ಲ, ಎರಡಲ್ಲ, ಬರೋಬ್ಬರಿ 7 ಮಕ್ಕಳಿಗೆ ಜನ್ಮಕೊಟ್ಟ ಮಹಾತಾಯಿ..!

ಅಬೋಟಾಬಾದ್‌: ಪಾಕಿಸ್ತಾನದಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಏಳು ಮಕ್ಕಳಿಗೆ ಮಹಿಳೆಯೊಬ್ಬಳು ಜನ್ಮ ನೀಡಿದ್ದಾಳೆ.
ಪಾಕಿಸ್ತಾನದ ಅಬೋಟಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಏಳು ಶಿಶುಗಳಿಗೆ ಜನ್ಮ ನೀಡಿದ್ದಾರೆ ಎಂದು ಅರಿ (ARY) ನ್ಯೂಸ್ ವರದಿ ಮಾಡಿದೆ.
ಇಲ್ಲಿನ ಖೈಬರ್ ಫಖ್ತಂಖ್ವಾ ಅಬೋಟಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಏಕಕಾಲದಲ್ಲಿ 7 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ವೈದ್ಯರು 5 ಮಕ್ಕಳು ಮಹಿಳೆಯ ಹೊಟ್ಟೆಯಲ್ಲಿದ್ದಾರೆ ಎಂದು ಹೇಳಿದ್ದರಂತೆ. ಆದರೆ ಹೆರಿಗೆ ವೇಳೆ 7 ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ ಹಾಗೂ 7 ಮಕ್ಕಳು ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಮಹಿಳೆ 8 ತಿಂಗಳ ಗರ್ಭಿಣಿಯಾಗಿದ್ದಾಗ ಮೊದಲ ಬಾರಿಗೆ ಈ ಆಸ್ಪತ್ರೆಗೆ ಬಂದಿದ್ದಳು. ಆ ಸಮಯದಲ್ಲಿ ಆಕೆಯ ಗರ್ಭದಲ್ಲಿ ಐದು ಮಕ್ಕಳಿದ್ದವು ಎಂದು ತಿಳಿದುಬಂತು. ಅವಳ ಹೊಟ್ಟೆ ತುಂಬಾ ದೊಡ್ಡದಾಗಿತ್ತು. ಹಾಗೂ ಮಹಿಳೆಯ ರಕ್ತದೊತ್ತಡ ತುಂಬಾ ಅಧಿಕವಾಗಿತ್ತು. ಆಪರೇಷನ್ ಮಾಡುವುದು ಸಹ ಅಪಾಯಕಾರಿಯಾಘಿತ್ತು. ಯಾಕೆಂದರೆ ಮಹಿಳೆ ಈ ಹಿಂದೆ ಎರಡು ಆಪರೇಷನ್‍ಗೆ ಒಳಗಾಗಿದ್ದಳು. ಹೀಗಾಗಿ ಆಪರೇಶನ್‌ ಮಾಡಿದರೆ ಅದರಿಂದ ಹಳೆಯ ಹೊಲಿಗೆಗಳು ಮತ್ತು ಗರ್ಭಾಶಯಕ್ಕೆ ಹಾನಿಯಾಗಬಹುದೆಂಬ ಭಯವಿತ್ತು. ಹೀಗಾಗಿ ವೈದ್ಯರ ತಂಡವು ಒಂದು ಗಂಟೆಗೂ ಹೆಚ್ಚು ಕಾಲ ಚಿಕಿತ್ಸೆ ನೀಡಿ ನಂತರ ಹೆರಿಗೆ ಮಾಡಿಸಿದ್ದಾರೆ. ಸದ್ಯ ಮಹಿಳೆಯ ತುರ್ತು ನಿಗಾ ಘಟದಲ್ಲಿದ್ದಾಳೆ.
ಯಾರ್ ಮೊಹಮ್ಮದ್ ಅವರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ತಕ್ಷಣ ಅಲ್ಲಿನ ಜಿನ್ನಾ ಅಂತರಾಷ್ಟ್ರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ 7 ಮಕ್ಕಳಲ್ಲಿ ನಾಲ್ಕು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳಿಗೆ ಮೊಹಮ್ಮದ್ ಪತ್ನಿ ಜನ್ಮ ನೀಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement