ಡ್ರಗ್ಸ್‌ ಪ್ರಕರಣ: ಆರ್ಯನ್‌ ಖಾನ್‌ ಪುತ್ರ ಸೇರಿ 8 ಜನರಿಗೆ ನ್ಯಾಯಾಂಗ ಬಂಧನ ಅಕ್ಟೋಬರ್ 30ರ ವರೆಗೆ ವಿಸ್ತರಣೆ

ಮುಂಬೈ: ಡ್ರಗ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುv ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಆರೋಪಿಗಳಿಗೆ ನೀಡಲಾಗಿದ್ದ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್ 30ರ ವರೆಗೆ ವಿಸ್ತರಿಸಲಾಗಿದೆ.
ನಿನ್ನೆಯಷ್ಟೇ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅರ್ಜಿಯನ್ನು ಮುಂಬೈನ ಎನ್ ಡಿಪಿಎಸ್ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಇಂದು (ಗುರುವಾರ) ನಟ ಶಾರುಖ್ ಖಾನ್ ಅರ್ಥರ್ ರಸ್ತೆಯಲ್ಲಿನ ಜೈಲಿಗೆ ತೆರಳಿ ಪುತ್ರನನ್ನು ಭೇಟಿಯಾಗಿದ್ದರು .ನಂತರ ಶಾರುಖ್ ಖಾನ್ ನಿವಾಸಕ್ಕೆ ಬಂದ ಎನ್ ಸಿ ಬಿ ಅಧಿಕಾರಿಗಳು ಶೋಧ ನಡೆಸಿದ್ದರು.
ಎನ್ ಡಿ ಪಿ ಎಸ್ ವಿಶೇಷ ನ್ಯಾಯಾಲಯವು ಆರ್ಯನ್ ಖಾನ್ ಸೇರಿದಂತೆ 8 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು, ಮತ್ತೆ ಅಕ್ಟೋಬರ್ 30ರ ವರೆಗೆ ವಿಸ್ತರಿಸಿ, ಆದೇಶಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ