ಕಾಂಗೋದಲ್ಲಿ ನಿಗೂಢ ಕಾಯಿಲೆಯಿಂದ 165ಕ್ಕೂ ಹೆಚ್ಚು ಮಕ್ಕಳು ಸಾವು

ಕಾಂಗೋ: ಈಗಾಗಲೇ ಕೊವಿಡ್ ಮಹಾಮಾರಿಯಿಂದ ಜಗತ್ತಿನಾದ್ಯಂತ 49 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಈದರ ಮಧ್ಯೆಯೇ ಕಾಂಗೋದಲ್ಲಿ ಮಕ್ಕಳಲ್ಲಿ ನಿಗೂಢ ಕಾಯಿಲೆಯೊಂದು ಕಂಡುಬಂದಿದ್ದು, ಆಗಸ್ಟ್​ನಿಂದ ಇಲ್ಲಿಯ ವರೆಗೆ 165ಕ್ಕೂ ಹೆಚ್ಚು ಮಕ್ಕಳು ಿದರಿಂದ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಆಗಸ್ಟ್‌ನಲ್ಲಿ ಕ್ವಿಲು ಪ್ರಾಂತ್ಯದ ಗುಂಗು ಪಟ್ಟಣದಲ್ಲಿ ಈ ನಿಗೂಢ ರೋಗ ಮೊದಲು ಕಾಣಿಸಿಕೊಂಡಿತ್ತು. ಈ ಕಾಯಿಲೆ 5 ವರ್ಷದವರೆಗಿನ ಮಕ್ಕಳನ್ನು ಹೆಚ್ಚಾಗಿ ಭಾಧಿಸುತ್ತಿದೆ ಎಂದು ಪ್ರಾದೇಶಿಕ ಆರೋಗ್ಯ ಮುಖ್ಯಸ್ಥ ಜೀನ್-ಪಿಯರ್ ಬಸಾಕೆ ಹೇಳಿದ್ದು, ಕೆಲವು ಸೋಂಕಿತ ಮಕ್ಕಳಲ್ಲಿ ಮಲೇರಿಯಾದಂತಹ ರೋಗಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಈ ರೋಗವು ಮಲೇರಿಯಾದ ರೀತಿಯ ರೋಗಲಕ್ಷಣಗಳನ್ನು ಹೊಂದಿದೆ. ಈ ಕಾಯಿಲೆಯ ಕುರಿತು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಈ ರೋಗದಿಂದ ಅನೀಮಿಯಾ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಕಾರಣವೇನೆಂಬುದು ಪತ್ತೆಯಾಗಿಲ್ಲ ಎಂದು ಬಸಾಕೆ ತಿಳಿಸಿದ್ದಾರೆ.
ಕಳೆದ ಆಗಸ್ಟ್ ಅಂತ್ಯದಲ್ಲಿ ಮೊದಲು ಕಾಣಿಸಿಕೊಂಡ ಈ ರೋಗವು ವಿಶೇಷವಾಗಿ ಐದು ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಮಲೇರಿಯಾದ ಹೊರತಾದ ನಮಗೆ ತಿಳಿದಿಲ್ಲದ ಬೇರೆ ರೋಗವಾಗಿರಬಹುದು. ಈ ಕಾಯಿಲೆ ಬಂದ ರೋಗಗಳು ಅನೀಮಿಯಾ ಅಥವಾ ರಕ್ತಹೀನತೆಯಿಂದ ಬಳಲುತ್ತಾರೆ. ಇದಕ್ಕೆ ಯಾವ ಬಗೆಯ ಔಷಧಿ ನೀಡಬೇಕೆಂಬುದು ತಿಳಿಯುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ನಿಗೂಢ ಕಾಯಿಲೆ ಈಗ ಹೆಚ್ಚು ಆತಂಕಕ್ಕೆ ಕಾರಣವಾಗಿದೆ.
ಸೋಂಕಿನ ಮೂಲವನ್ನು ಗುರುತಿಸಲು ಮತ್ತು ರೋಗದ ವಿರುದ್ಧ ರಕ್ಷಣಾತ್ಮಕ ಕ್ರಮಗಳನ್ನು ಅಭಿವೃದ್ಧಿಪಡಿಸಲು ಆರೋಗ್ಯ ಸಚಿವಾಲಯದ ತಜ್ಞರ ತಂಡವನ್ನು ಪ್ರದೇಶಕ್ಕೆ ಕಳುಹಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement