ಚೀನಾ ಮಾತ್ರವಲ್ಲ, ಭಾರತದಿಂದಲೂ ಅತ್ಯಂತ ವೇಗದ ಹೈಪರ್ಸಾನಿಕ್ ಕ್ಷಿಪಣಿ ಅಭಿವೃದ್ಧಿ: ಅಮೆರಿಕ ವರದಿ

ವಾಷಿಂಗ್ಟನ್‌: ಕ್ಷಿಪ್ರಗತಿಯಲ್ಲಿ ಚಲಿಸುವ ಹೈಪರ್‌ಸಾನಿಕ್‌ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುತ್ತಿರುವ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ ಎಂದು ಅಮೆರಿಕದ ಸ್ವತಂತ್ರ ಅಧ್ಯಯನ ವರದಿಯೊಂದು ತಿಳಿಸಿದೆ.
ಚೀನಾವು ಇತ್ತೀಚಿಗೆ ಅಣುಶಕ್ತಿ ಸಾಮರ್ಥ್ಯದ ಹೈಪರ್‌ಸಾನಿಕ್ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ನಡೆಸಿದೆ ಎಂದು ವರದಿಯಾಗಿತ್ತು. ಚೀನಾ ಇತ್ತೀಚೆಗೆ ಪರಮಾಣು ಸಾಮರ್ಥ್ಯದ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷಿಸಿತು, ಅದು ತನ್ನ ಗುರಿಯನ್ನು ಕಳೆದುಕೊಂಡಿತು ಎಂದು ವರದಿ ಹೇಳಿತ್ತು. ಆದರೆ ಚೀನಾ ತಾನು ಪರೀಕ್ಷೆ ಮಾಡಿರುವುದನ್ನು ನಿರಾಕರಿಸಿದೆ. ಚೀನಾ ತನ್ನ ಹೈಪರ್‌ಸಾನಿಕ್‌ ಕ್ಷಿಪಣಿಯನ್ನು ಪರೀಕ್ಷಾರ್ಥ ಪ್ರಯೋಗ ನಡೆಸಿದೆ ಎಂಬ ವರದಿಯನ್ನು ಚೀನಾ ನಿರಾಕರಿಸಿತ್ತು. ತಾನು ಹೈಪರ್‌ಸಾನಿಕ್‌ ವಾಹಕದ ಪರೀಕ್ಷೆ ನಡೆಸಿದ್ದು, ಅಣುಶಕ್ತಿ ಸಾಮರ್ಥ್ಯದ ಕ್ಷಿಪಣಿಯ ಪರೀಕ್ಷೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಈ ಕುರಿತು ವರದಿ ಮಾಡಿದ್ದ ಬ್ರಿಟೀಷ್‌ ದೈನಿಕವು ಚೀನಾ ಪರೀಕ್ಷೆ ನಡೆಸಿದ್ದ ಕ್ಷಿಪಣಿಯು 24 ಮೈಲುಗಳ ಅಂತರದಿಂದ ಗುರಿ ತಪ್ಪಿತ್ತು ಎಂದು ವರದಿ ಮಾಡಿತ್ತು. ಆದರೆ ಚೀನಾ ಪರೀಕ್ಷೆ ಅಮೆರಿಕ ಗುಪ್ತಚರಕ್ಕೂ ಅಚ್ಚರಿ ತಂದಿತ್ತು. ನಂತರ ಈ ಅಧ್ಯಯನ ವರದಿ ಬಂದಿದ್ದು, ಭಾರತವು ಹೈಪರ್‌ಸಾನಿಕ್‌ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದು ಹೇಳಿದೆ.
ಸ್ವತಂತ್ರ ಕಾಂಗ್ರೆಸ್ಸೆನಲ್‌ ರೀಸರ್ಚ್‌ ಸರ್ವೀಸ್‌ (ಸಿಆರ್‌ಎಸ್‌), ವರದಿ ಮಾಡಿದ್ದು, ಈ ವರದಿಯು ಅಮೆರಿಕ, ರಷ್ಯಾ, ಚೀನಾ ಅತ್ಯಾಧುನಿಕ ಹೈಪರ್‌ಸಾನಿಕ್‌ ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಅಂತೆಯೇ ಭಾರತ, ಫ್ರಾನ್ಸ್‌, ಆಸ್ಟ್ರೇಲಿಯಾ, ಜರ್ಮನಿ, ಜಪಾನ್‌ ಒಳಗೊಂಡಂತೆ ಅನೇಕ ದೇಶಗಳು ಇಂಥ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಹೇಳಿದೆ.
ಭಾರತವು ರಷ್ಯಾ ಜೊತೆಗೆ ಸಹಭಾಗಿತ್ವವನ್ನು ಹೊಂದಿದೆ. ಭಾರತವು ರಷ್ಯಾದ ಸಹಭಾಗಿತ್ವದಲ್ಲಿ ಬ್ರಹ್ಮೋಸ್‌ II ಹೆಸರಿನ ಹೈಪರ್‌ಸಾನಿಕ್‌ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿ ತಿಳಿಸಿದೆ. ಬ್ರಹ್ಮೋಸ್‌ II ಕ್ಷಿಪಣಿ 2017ರ ವೇಳೆಗೆ ಬಳಕೆಗೆ ಸಜ್ಜುಗೊಳ್ಳಬೇಕಿತ್ತು. ಆದರೆ, ವಿಳಂಬವಾಗಿದ್ದು, 2025 ಮತ್ತು 2028ರ ನಡುವೆ ಬಳಕೆಗೆ ಸಿದ್ಧವಾಗಲಿದೆ ಎಂದು ವರದಿ ತಿಳಿಸಿದೆ.
ಭಾರತವು ದೇಶೀಯವಾಗಿಯೂ ಹೈಪರ್‌ಸಾನಿಕ್‌ ತಂತ್ರಜ್ಞಾನದ ವಾಹಕ ಕಾರ್ಯಕ್ರಮದ ಭಾಗವಾಗಿ ದ್ವಿ ಸಾಮರ್ಥ್ಯದ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ.ಜೂನ್‌ 2019 ಮತ್ತು ಸೆಪ್ಟೆಂಬರ್ 2020ರಲ್ಲಿ ತನ್ನ ಮ್ಯಾಕ್‌ 6 ಸ್ಕ್ರ್ಯಾಮ್‌ಜೆಟ್‌ ಅನ್ನು ಪ್ರಯೋಗಾರ್ಥವಾಗಿ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ. ಭಾರತವು ಅಂದಾಜು 12 ಹೈಪರ್‌ಸಾನಿಕ್‌ ಪವನ ವಾಹಕಗಳನ್ನು ನಿರ್ವಹಣೆ ಮಾಡುತ್ತಿದ್ದು, ಇದರ ಪರೀಕ್ಷಾರ್ಥ ವೇಗವು ಮ್ಯಾಕ್ 13 ಆಗಿದೆ ಎಂದು ಅಮೆರಿಕದ ಸಂಸತ್ತಿನ ಸದಸ್ಯರು ಇರುವ ತಜ್ಞರ ಸಮಿತಿ ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement