ಮುಂಬೈ: 60 ಅಂತಸ್ತಿನ ಅಪಾರ್ಟ್‌ಮೆಂಟಿನಲ್ಲಿ ಬೆಂಕಿ, ತಪ್ಪಿಸಿಕೊಳ್ಳುವ ಯತ್ನದಲ್ಲಿ 19ನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು, ವಿಡಿಯೊದಲ್ಲಿ ಸೆರೆ

ಮುಂಬೈ: ಮುಂಬೈನ ಲಾಲ್‌ಬಾಗ್‌ನಲ್ಲಿರುವ ಬಹುಮಹಡಿ ವಸತಿ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಓರ್ವ ಮೃತಪಟ್ಟಿದ್ದಾನೆ. ಮುಂಬೈ ಅಗ್ನಿಶಾಮಕ ದಳವು ಶೋಧ ಮತ್ತು ಬೆಮಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದೆ ಮತ್ತು ಬೆಂಕಿಯ ಕಾರಣ ಕಂಡುಹಿಡಿಯಲು ಪ್ರಯತ್ನಿಸುತ್ತಿದೆ.
ವರದಿಗಳ ಪ್ರಕಾರ,11.50 ಕ್ಕೆ ಮಹಾದೇವ್ ಪಲವ್ ಮಾರ್ಗ, ಅವಿ ರಸ್ತೆಯಲ್ಲಿರುವ ಅವಿಘ್ನ ಪಾರ್ಕ್ 60 ಅಂತಸ್ತಿನ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ, 60 ಅಂತಸ್ತಿನ ವಸತಿ ಕಟ್ಟಡದ ನಿವಾಸಿಗಳನ್ನು ತ್ವರಿತವಾಗಿ ಸ್ಥಳಾಂತರಿಸಲಾಯಿತು. ಬೆಂಕಿಯನ್ನು ಆರಂಭದಲ್ಲಿ 3 ನೇ ಹಂತ ಎಂದು ವರದಿ ಮಾಡಲಾಗಿತ್ತು ಆದರೆ ತ್ವರಿತವಾಗಿ 4 ನೇ ಹಂತಕ್ಕೆ ಅದು ತಲುಪಿತು.
ವರದಿಯ ಪ್ರಕಾರ, ವ್ಯಕ್ತಿಯೊಬ್ಬ ಕಟ್ಟಡದ 19 ನೇ ಮಹಡಿಯಿಂದ ಬಿದ್ದಿದ್ದಾನೆ.ಆತನನ್ನು ತಕ್ಷಣವೇ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ.ಮೃತನನ್ನು ಅರುಣ್ ತಿವಾರಿ (30 ವರ್ಷ) ಎಂದು ಗುರುತಿಸಲಾಗಿದೆ.

ಬೆಂಕಿ ಕಾಣಿಸಿಕೊಂಡ ನಂತರ, ಭದ್ರತಾ ಸಿಬ್ಬಂದಿ ಅರುಣ್ ತಿವಾರಿ 19ನೇ ಮಹಡಿಗೆ ಧಾವಿಸಿದ. ಆದರೆ ತಕ್ಷಣವೇ ಅವರಿಗೆ ತಾನು ಸಿಕ್ಕಿಬಿದ್ದನೆಂದು ಅರಿವಾಯಿತು. ಹೀಗಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಬಾಲ್ಕನಿಗೆ ಬಂದು ತಪ್ಪಿಕೊಳ್ಳುವ ಪ್ರಯತ್ನ ಮಾಡಿದ್ದಾನೆ, ಈ ಪ್ರಯತ್ನದಲ್ಲಿ ಬಾಲ್ಕನಿಯಲ್ಲಿ ನೇತಾಡಿದ್ದಾನೆ. ಹಲವು ನಿಮಿಷಗಳ ಕಾಲ ರೇಲಿಂಗ್‌ಗೆ ಅಂಟಿಕೊಂಡಿದ್ದ ಆತನ ನಂತರ ತನ್ನ ಹಿಡಿತವನ್ನು ಕಳೆದುಕೊಂಡು 19ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದರು. ಆತ ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕನಿಷ್ಠ 15 ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿವೆ. ಜ್ವಾಲೆಯು ಹೆಚ್ಚಿನ ಮಹಡಿಗಳಿಗೆ ಹರಡುವುದನ್ನು ತಡೆಯಲು ಪ್ರಯತ್ನಿಸಿತು, ಆದರೆ ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಹೋಗಿ ರಕ್ಷಣಾ ಕಾರ್ಯಗಳನ್ನು ನೋಡಿಕೊಂಡರು.
ಅಗ್ನಿ ಅವಘಡಕ್ಕೆ ಕಾರಣ, ಶಾರ್ಟ್ ಸರ್ಕ್ಯೂಟ್ ಎಂದು ತಾತ್ಕಾಲಿಕವಾಗಿ ನಂಬಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಕಟ್ಟಡದಲ್ಲಿ ಎಲ್ಲಾ ಅಗ್ನಿ ಸುರಕ್ಷತಾ ಕ್ರಮಗಳನ್ನು ಮಾಡಲಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.
“ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಮತ್ತು ಇತರ ಎಲ್ಲ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಕಟ್ಟಡದಲ್ಲಿ 400 ಫ್ಲಾಟ್‌ಗಳಿವೆ. ನಮ್ಮಲ್ಲಿ ಸಾಕಷ್ಟು ಅಗ್ನಿಶಾಮಕ ವ್ಯವಸ್ಥೆಗಳಿವೆ, ಬೆಂಕಿಗೆ ಶಾರ್ಟ್ ಸರ್ಕ್ಯೂಟ್‌ ಕಾರಣವಾಗಿದೆ ಎಂದು ಬಿಲ್ಡರ್ ಕೈಲಾಶ್ ಅಗರ್ವಾಲ್ ಹೇಳಿದರು.
ಸ್ಥಳದಲ್ಲಿದ್ದ, ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಮಾಧ್ಯಮಗಳಿಗೆ ಮಾತನಾಡಿ, 19 ನೇ ಮಹಡಿಯ ಅಪಾರ್ಟ್ಮೆಂಟ್ ಒಂದರಲ್ಲಿ ದುರಸ್ತಿ ಕೆಲಸ ನಡೆಯುತ್ತಿದೆ ಮತ್ತು ಆರಂಭಿಕ ಸಂಶೋಧನೆಯಲ್ಲಿ, ಆ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಎಂದು ನಾವು ಹೇಳಬಹುದು ಎಂದು ತಿಳಿಸಿದರು.ಮಹಾರಾಷ್ಟ್ರದ ಮಂತ್ರಿ ಆದಿತ್ಯ ಠಾಕ್ರೆ ಕರಿ ರಸ್ತೆಯ ಅವಿಘ್ನ ಪಾರ್ಕ್ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ