ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಎಂಎನ್‌ಎಸ್‌ ಮುಖ್ಯಸ್ಥ ರಾಜ್ ಠಾಕ್ರೆ, ಅವರ ತಾಯಿಗೆ ಕೋವಿಡ್‌-19 ಪಾಸಿಟಿವ್

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮತ್ತು ಅವರ ತಾಯಿ ಕುಂದಾ ಠಾಕ್ರೆ ಅವರಿಗೆ ಶನಿವಾರ ಕೊನಾ ವೈರಸ್ ಸೋಂಕು ದೃಢಪಟ್ಟಿದೆ ಎಂದು ನಾಗರಿಕ ಅಧಿಕಾರಿಯೊಬ್ಬರು ಇಲ್ಲಿ ತಿಳಿಸಿದ್ದಾರೆ.
ಇಬ್ಬರಿಗೂ ಕೊರೊನಾ ಸೋಂಕಿನ ಸೌಮ್ಯ ಲಕ್ಷಣಗಳಿವೆ. ದಾದರ್ ಪ್ರದೇಶದಲ್ಲಿ ಅವರ ನಿವಾಸದಲ್ಲಿ ಪ್ರತ್ಯೇಕವಾಗಿರಲು ಅವರನ್ನು ಕೇಳಲಾಯಿತು ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಯ ಅಧಿಕಾರಿಯೊಬ್ಬರು ಹೇಳಿದರು,
ರಾಜ್‌ ಠಾಕ್ರೆಯವರ ಹಿರಿಯ ಸಹಾಯಕರು ಸಹ ಅವರಿಗೆ ಸೋಂಕು ಇರುವುದನ್ನು ದೃಢಪಡಿಸಿದರು. ಠಾಕ್ರೆ (53) ಅವರು ಇತ್ತೀಚೆಗೆ ನಾಸಿಕ್, ಪುಣೆ ಮತ್ತು ಥಾಣೆಗೆ ಭೇಟಿ ನೀಡಿದ್ದರು ಮತ್ತು ಮುಂದಿನ ವರ್ಷದ ನಾಗರಿಕ ಚುನಾವಣೆಗೆ ಮುಂಚಿತವಾಗಿ ಮುಂಬೈನಲ್ಲಿ ಪಕ್ಷದ ನಾಯಕರನ್ನು ಭೇಟಿಯಾಗಿದ್ದರು.

0 / 5. 0

ಪ್ರಮುಖ ಸುದ್ದಿ :-   ಕೈಗೂಡದ ಸಂಖ್ಯಾಬಲದ ಲೆಕ್ಕಾಚಾರ, ಬೆಂಬಲದ ಭರವಸೆ ಹುಸಿ, ʼಅಪ್ರಾಮಾಣಿಕ' ನಾಯಕ: 1999ರ ಸರ್ಕಾರ ರಚನೆ ಪ್ರಯತ್ನದ ಕುರಿತು ಸೋನಿಯಾ

ನಿಮ್ಮ ಕಾಮೆಂಟ್ ಬರೆಯಿರಿ

advertisement