ಎಂಥ ಕಾಲವಯ್ಯ…ಸ್ಮಾರ್ಟ್​ಫೋನ್ ಖರೀದಿಸಲು ಮದುವೆಯಾಗಿ ಒಂದೇ ತಿಂಗಳಿಗೆ ಹೆಂಡತಿಯನ್ನೇ ಮಾರಿದ ಪತಿರಾಯ..!

ಭುವನೇಶ್ವರ: ಒರಿಸ್ಸಾದಲ್ಲೊಂದು ವಿಚಿತ್ರ ಮತ್ತು ಅಮಾನವೀಯ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಸ್ಮಾರ್ಟ್‌ ಫೋನ್‌ ಖರೀದಿಗಾಗಿ ತನ್ನ ಪತ್ನಿಯನ್ನೇ ಮಾರಿದ್ದಾನೆ…!
ಒರಿಸ್ಸಾದ 17 ವರ್ಷದ ವ್ಯಕ್ತಿ 26 ವರ್ಷದ ತನ್ನ ಹೆಂಡತಿಯನ್ನು ರಾಜಸ್ಥಾನದ 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ತಾನು ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಇಟ್ಟಿಗೆ ಫ್ಯಾಕ್ಟರಿಯಲ್ಲಿದ್ದ ವ್ಯಕ್ತಿಗೆ ತನ್ನ ಹೆಂಡತಿಯನ್ನು ಮಾರಿದ್ದಾನೆ…!! ಆದರೆ ಒರಿಸ್ಸಾದ ಪೊಲೀಸರು ಆ ಮಹಿಳೆಯನ್ನು ಬಹಳ ಕಷ್ಟಪಟ್ಟು ರಕ್ಷಿಸಿದ್ದಾರೆ.
ಆಆತ ತನ್ನ ಅಪ್ಪ-ಅಮ್ಮನ ಹಣದಿಂದ ಜೀವನ ನಡೆಸುತ್ತಿದ್ದ. ಜವಾಬ್ದಾರಿಗಳು ಏನೆಂದೇ ಗೊತ್ತಿರಲಿಲ್ಲ. ಇದೇ ವರ್ಷ ಜುಲೈನಲ್ಲಿ ತ 17 ವರ್ಷಕ್ಕೇ ಈತ ತನಗಿಂತ 9 ವರ್ಷ ದೊಡ್ಡ ಹುಡುಗಿಯನ್ನು ಮದುವೆಯಾಗಿದ್ದ. ಆಗಸ್ಟ್‌ನಲ್ಲಿ ಈ 17 ವರ್ಷದ ಈತ ತನ್ನ ಹೆಂಡತಿಯೊಂದಿಗೆ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ರಾಯ್‌ಪುರ ಮತ್ತು ಝಾನ್ಸಿ ಮೂಲಕ ರಾಜಸ್ಥಾನಕ್ಕೆ ಹೋಗಿದ್ದ.
ಆದರೆ, ಕೆಲಸಕ್ಕೆ ಸೇರಿ ಕೆಲವು ದಿನಗಳ ನಂತರ 17 ವರ್ಷದ ಆ ವ್ಯಕ್ತಿ ಸ್ಮಾರ್ಟ್‌ ಫೋನ್‌ ಖರೀದಿಗೆ ತನ್ನ ಪತ್ನಿಯನ್ನು ಬರಾನ್ ಜಿಲ್ಲೆಯ 55 ವರ್ಷದ ವ್ಯಕ್ತಿಗೆ 1.8 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದ…!
ಹೆಂಡತಿಯನ್ನು ಮಾರಿದ ಹಣದಿಂದ ಆತ ಚೆನ್ನಾಗಿ ಊಟ-ತಿಂಡಿಗಳನ್ನು ಮಾಡಿ, ತನಗಾಗಿ ಒಂದು ಸ್ಮಾರ್ಟ್​ಫೋನ್ ಖರೀದಿಸಿದ. ಬಳಿಕ ಅವನು ತನ್ನ ಹಳ್ಳಿಗೆ ವಾಪಾಸ್ ಹೋಗಿದ್ದಾನೆ. ಅಲ್ಲಿ ಹೆಂಡತಿ ಎಲ್ಲೆಂದು ಮನೆಯವರು ಕೇಳಿದಾಗ ಅವಳು ನನ್ನನ್ನು ಬಿಟ್ಟು ಹೋದಳು ಎಂದು ಸುಳ್ಳು ಹೇಳಿ ಅವರನ್ನು ನಂಬಿಸಿದ್ದ. ಆದರೆ, ಆ ಮಹಿಳೆಯ ತವರು ಮನೆಯವರು ಮಾತ್ರ ಆತ ಹೇಳಿದ ಕಟ್ಟುಕತೆಯನ್ನು ನಂಬಲಿಲ್ಲ. ಅಳಿಯನ ಮೇಲೆ ಸಂಶಯಗೊಂಡ ಅವರು ಅಳಿಯನ ಮೇಲೆ ಪೋಲಿಸರಿಗೆ ದೂರು ನೀಡಿದರು.
ಆ ದೂರನ್ನು ಆಧರಿಸಿ ಆ ಪೊಲೀಸರು ಆ ವ್ಯಕ್ತಿಯ ಫೋನ್ ಕರೆಗಳನ್ನು ಪರಿಶೀಲಿಸಿದರು. ಆಗ ಆತ ತನ್ನ ಹೆಂಡತಿಯನ್ನು ಮಾರಿದ್ದು ಗೊತ್ತಾಯಿತು. “ನಾವು ಅವನನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಅವನು ಹಣಕ್ಕಾಗಿ ತನ್ನ ಹೆಂಡತಿಯನ್ನು ಮಾರಾಟ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮಹಿಳೆಯನ್ನು ಪತ್ತೆಹಚ್ಚಲು ಬಾಲಂಗೀರ್ ತಂಡವು ರಾಜಸ್ಥಾನಕ್ಕೆ ಹೋಗಿದೆ. ಆದರೆ, ಆ ಮಹಿಳೆಯನ್ನು 1.8 ಲಕ್ಷಕ್ಕೆ ಖರೀದಿಸಲಾಗಿದೆ, ಹೀಗಾಗಿ ಆಕೆಯನ್ನು ವಾಪಾಸ್ ಕಳುಹಿಸುವುದಿಲ್ಲ ಎಂದು ಆ 55 ವರ್ಷದ ವ್ಯಕ್ತಿ ಮತ್ತು ಸ್ಥಳೀಯರು ಆಕೆಯನ್ನು ವಾಪಾಸ್ ಕಳುಹಿಸಲು ಒಪ್ಪಲಿಲ್ಲ. ನಂತರ ಅವರ ಮನವೊಲಿಸಿ ಆಕೆಯನ್ನು ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಬಾಲಾಪರಾಧ ನ್ಯಾಯಾಲಯದ ಮುಂದೆ ಆ 17 ವರ್ಷದ ವ್ಯಕ್ತಿಯನ್ನು ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಜಮ್ಮು-ಕಾಶ್ಮೀರದಲ್ಲಿ ನಿರ್ಮಾಣವಾದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಈಗ ಉದ್ಘಾಟನೆಗೆ ಸಜ್ಜು: ಇದರ ವಿಶೇಷತೆ ಬಗ್ಗೆ ಗೊತ್ತಾ..?

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement