ಅಮೆರಿಕದಲ್ಲಿ ಹಸಿ ಈರುಳ್ಳಿ ತಿಂದು 650 ಮಂದಿ ಅಸ್ವಸ್ಥ: ಮನೆಯಲ್ಲಿರುವ ಈರುಳ್ಳಿ ಎಸೆಯಲು ಸರ್ಕಾರದಿಂದ ಸೂಚನೆ

ಅಮೆರಿಕ: ಕೋವಿಡ್‌ ಬಳಿಕ ಅಮೆರಿಕದಲ್ಲಿ ಮತ್ತೊಂದು ವಿಚಿತ್ರ ಸೋಂಕು ಕಾಣಿಸಿಕೊಂಡಿದೆ. ಸಾಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಈ ಸೋಂಕು ಹರಡುತ್ತಿದ್ದು, ಇದು ಅಮೆರಿಕದ ವಿಜ್ಞಾನಿಗಳಿಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿ ಪರಿಗಣಮಿಸಿದೆ.
ಹೊಸದಾಗಿ ಕಾಣಿಸಿಕೊಂಡ ಈ ಸೋಂಕು ಈರುಳ್ಳಿ ತಿಂದದವರಿಂದ ಹರಡುತ್ತಿದೆ ಎನ್ನಲಾಗಿದೆ. ಹಸಿ ಈರುಳ್ಳಿ ಸೇವಿಸಿದ ಸುಮಾರು 650 ಮಂದಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ.
ಚಿವಾವಾದಿಂದ ಆಮದಾದ ಈರುಳ್ಳಿಯಿಂದ ಸಮಸ್ಯೆ
ಮೆಕ್ಸಿಕೋದ(Mexico) ಚಿವಾವಾ ಎಂಬಲ್ಲಿಂದ ಆಮದು ಮಾಡಿಕೊಂಡ ಈರುಳ್ಳಿಯನ್ನು ಹಸಿಯಾಗಿ ಸೇವಿಸಿದ ಜನರಿಗೆ ಈ ಸೋಂಕು ಹರಡಿದೆ. ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಿಂದಲೇ ದೇಶದಲ್ಲಿ ರೋಗ ಹರಡುತ್ತಿದ್ದು, ಟೆಕ್ಸಾಸ್‌ ಮತ್ತು ಓಕ್ಲಹಾಮಾದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಸ್ವಸ್ಥರಾಗಿದ್ದಾರೆ. 129 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯಪೀಡಿತರಲ್ಲಿ ಶೇ.75ರಷ್ಟು ಜನ ತಾವು ಹಸಿ ಈರುಳ್ಳಿ ಸೇವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈರುಳ್ಳಿಯನ್ನು ತಿಂಗಳುಗಟ್ಟಲೆ ಇಡುತ್ತಾರೆ. ಹೀಗಾಗಿ ಜನರ ಬಳಿ ಈಗಲೂ ಸೋಂಕಿತ ಈರುಳ್ಳಿ ಇರಬಹುದು. ಹೀಗಾಗಿ ಕೆಂಪು, ಹಳದಿ ಮತ್ತು ಬಿಳಿ ಈರುಳ್ಳಿಗಳು ಮನೆಯಲ್ಲಿದ್ದರೆ ಎಸೆದುಬಿಡಿ ಎಂದು ಆರೋಗ್ಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲ್ಲಿನ ಜನ ಭಯಗೊಂಡು ಮನೆಯಲ್ಲಿರುವ ಈರುಳ್ಳಿಯನ್ನು ಎಸೆಯುತ್ತಿದ್ದಾರೆ.
ಸಾಲ್ಮೊನೆಲ್ಲಾ  ಏನಿದು..?
ಸಾಲ್ಮೊನೆಲ್ಲಾ ಎಂದರೇ ಒಂದು ವಿಧದ ಬ್ಯಾಕ್ಟೀರಿಯಾ, ಇದರ ಸೋಂಕು ಮನುಷ್ಯನ ದೇಹ ಹೊಕ್ಕರೆ ಹೊಟ್ಟೆಯಲ್ಲಿ ಅನಾರೋಗ್ಯ ಉಂಟಾಗುತ್ತದೆ. ಕೆಲವರಿಗೆ ಟೈಫಾಯ್ಡ್​ನಂತಹ ರೋಗಗಳು ಕಾಣಿಸಿಕೊಳ್ಳಬಹುದು. ಮತ್ತೆ ಕೆಲವರಿಗೆ ಭೇದಿ, ಜ್ವರ ಹಾಗೂ ಹೊಟ್ಟೆನೋವು ಸೇರಿದಂತೆ ಬೇರೆ ಬೇರೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಇರುವ ಆಹಾರ ಸೇವಿದ 6 ಗಂಟೆಗಳಿಂದ 6 ದಿನದೊಳಗೆ ಅನಾರೋಗ್ಯ ಉಂಟಾಗುತ್ತದೆ ಎಂದು ಹೇಳಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದಿದದರೇ ರಕ್ತ, ಮೂತ್ರ, ಮೂಳೆ, ನರ, ಮೆದುಳಿಗೂ ಈ ಸೋಂಕು ಹರಡಬಹುದು. ಹೀಗಾಗಿ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement