14 ವರ್ಷಗಳ ನಂತರ ಏರಿಕೆಯಗಲಿದೆ ಬೆಂಕಿಪೊಟ್ಟಣದ ದರ..!

ಹೊಸದಿಲ್ಲಿ : ಹೆಚ್ಚುತ್ತಿರುವ ಹಣ ದುಬ್ಬರ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳವಾಗಿರುವುದರಿಂದ 14 ವರ್ಷಗಳ ನಂತರ ಬೆಂಕಿಪೊಟ್ಟಣದ ಬೆಲೆ ಏರಿಕೆಗೆ ಸಜ್ಜಾಗಿದೆ.
ಪ್ರಸ್ತುತ ಬೆಲೆ 1ರೂ.ಗಳಿಂದ ಮುಂಬರುವ ಡಿಸೆಂಬರ್ 1, 2021ಕ್ಕೆ ಜಾರಿಗೆ ಬರುವಂತೆ 2ರೂ.ಗಳಿಗೆ ಬೆಂಕಿ ಪೊಟ್ಟಣದ ಬೆಲೆ ಏರಿಕೆಯಾಗಲಿದೆ
2007ರಲ್ಲಿ ಒಂದೇ ಪೆಟ್ಟಿಗೆಯ ದರವನ್ನು 50 ಪೈಸೆಯಿಂದ 1 ರೂ.ಗೆ ಹೆಚ್ಚಿಲಾಗಿತ್ತು. ಮ್ಯಾಚ್ ಬೆಂಕಿಪೊಟ್ಟಣದ ದರವನ್ನು 2 ರೂ.ಗಳಿಗೆ ಹೆಚ್ಚಿಸಲು, ಇತ್ತೀಚೆಗೆ ಎಲ್ಲ ಮ್ಯಾಚ್ಬಾಕ್ಸ್ ತಯಾರಕ ಕಂಪನಿಗಳು ನಿರ್ಧಾರ ತೆಗೆದುಕೊಂಡಿವೆ. ದರ ಹೆಚ್ಚಿಸುವ ನಿರ್ಧಾರ 14 ವರ್ಷಗಳ ನಂತರ ಬಂದಿದೆ ಎಂದು ಅಖಿಲ ಭಾರತ ಚೇಂಬರ್ ಆಫ್ ಮ್ಯಾಚಸ್‌ ( All India Chamber of Matches ) ಪ್ರಕಟಿಸಿದೆ. ಹೆಚ್ಚುತ್ತಿರುವ ಹಣದುಬ್ಬರವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.
ಬೆಂಕಿಪೊಟ್ಟಣ ತಯಾರಕರ ( match box manufacturers ) ಪ್ರಕಾರ, ಬೆಂಕಿಪೊಟ್ಟಣವನ್ನು ತಯಾರಿಸಲು 14 ವಿವಿಧ ರೀತಿಯ ಕಚ್ಚಾ ವಸ್ತುಗಳ ಅಗತ್ಯವಿದೆ. ಕಳೆದ 14 ವರ್ಷಗಳಲ್ಲಿ ಅಂತಹ ಅನೇಕ ವಸ್ತುಗಳ ಬೆಲೆಗಳು ದುಪ್ಪಟ್ಟಾಗಿವೆ. ಇದು ಉತ್ಪಾದನಾ ವೆಚ್ಚಗಳ ಹೆಚ್ಚಳಕ್ಕೆ ಕಾರಣವಾಗಿದೆ.
ಕೆಂಪು ರಂಜಕದ ಬೆಲೆ 425 ರೂ.ಗಳಿಂದ 810 ರೂ.ಗೆ ಏರಿದೆ. ಮೇಣದ ದರಗಳು 58 ರಿಂದ 80 ರೂ.ಗೆ ಏರಿಕೆಯಾಗಿವೆ. ಔಟರ್ ಬಾಕ್ಸ್ ಬೋರ್ಡ್ ವೆಚ್ಚವು 26 ರೂ.ಗಳಿಂದ 55 ರೂ.ಗಳಿಗೆ ಏರಿದೆ. ಇನ್ನರ್ ಬಾಕ್ಸ್ ಬೋರ್ಡ್ ನ ದರವು 32 ರಿಂದ 58 ರೂ.ಗಳಿಗೆ ಏರಿದೆ. ಬೆಂಕಿಪೊಟ್ಟಣವನ್ನು ತಯಾರಿಸಲು ಅಗತ್ಯವಿರುವ ಕಾಗದ, ಸ್ಪ್ಲಿಂಟ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಸಲ್ಫರ್ ನಂತಹ ಇತರ ವಸ್ತುಗಳ ಬೆಲೆಗಳು ಅಕ್ಟೋಬರ್ 2021 ರಲ್ಲಿ ಹೆಚ್ಚಿವೆ. ಈ ಎಲ್ಲ ಕಾರಣದಿಂದ ಡಿಸೆಂಬರ್ 1, 2021ರಿಂದ ಬೆಂಕಿ ಪೊಟ್ಟಣ ಬೆಲೆ 1 ರೂಪಾಯಿಂದ 2 ರೂಪಾಯಿಗೆ ಏರಿಕೆಯಾಗಲಿದೆ ಎಂದು ಅದು ತಿಳಿಸಿದೆ.

ಪ್ರಮುಖ ಸುದ್ದಿ :-   ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ ಆರೋಪ : ಯುವಕನನ್ನು ಬಡಿದುಕೊಂದ ಭಕ್ತರು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement