ಮನೆಯ ಅಟ್ಟದಲ್ಲಿ ಅಡಗಿದ್ದ ಬೃಹತ್‌ ಕಾಳಿಂಗ ಸರ್ಪ ಹಿಡಿದ ಉರಗ ತಜ್ಞ ಪವನ್, ವಿಡಿಯೋದಲ್ಲಿ ಸೆರೆ..

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಾಣದಲ್ಲಿ ಮನೆಯೊಂದರ ಅಟ್ಟದ ಮೇಲೆ ಸೇರಿಕೊಂಡಿದ್ದ ಕಾಳಿಂಗ ಹಾವನ್ನು ಸೆರೆ ಹಿಡಿಯಲಾಗಿದೆ. ಉರಗ ತಜ್ಞ ಪವನ್ ನಾಯ್ಕ ಮನೆಯೊಳಗೆ ಸೇರಿಕೊಂಡಿದ್ದ ಬೃಹತ್‌ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ. ಇದು ಸುಮಾರು 8ರಿಂದ 10 ಅಡಿಗಳಷ್ಟು ಉದ್ದವಿರಬಹುದು. ಮನೆ ಮೂಲೆಯಲ್ಲಿ ಸಾಮಾನು ಸರಂಜಾಮುಗಳ ಮಧ್ಯೆ ಸೇರಿಕೊಂಡಿದ್ದ ಹಾವನ್ನು ಅವರು ಚಾಕಚಕ್ಯತೆಯಿಂದ ಹಿಡಿದಿದ್ದಾರೆ.

ಹಾವಿನ ಬಗ್ಗೆ ಜಾಗೃತಿ ಮೂಡಿಸುವ ಅವರು ನಂತರ ಅದನ್ನು ಕಾಡಿಗೆ ಕೊಂಡೊಯ್ದು ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ. ಸುರಕ್ಷಿತ ಸ್ಥಳಕ್ಕೆ ಬಿಟ್ಟುಬಂದಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು ಅದು ವೈರಲ್‌ ಆಗಿದೆ.
ಈ ಬಗ್ಗೆ ಪವನ ನಾಯ್ಕ ಮಾತನಾಡಿ, ಶನಿವಾರ ಬೆಳಿಗ್ಗೆ 8 ಗಂಟೆಗೆ ಯಾಣ ಸೆಕ್ಷನ್ ಡೆಪ್ಯೂಟಿ ಆರ್.ಎಫ್.ಒ ವಸಂತ್ ಹಾಗೂ ಫೊರೆಸ್ಟ್ ಗಾರ್ಡ್ ಸದಾಶಿವರವರ ಕರೆಯ ಮೇರೆಗೆ ಯಾಣದ ಬೆಟ್ಟದಮೇಲೆ ಇರುವ ಮನೆಯೊಂದರ ಅಟ್ಟಕ್ಕೆ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟಿರುವುದಾಗಿ ಹೇಳಿದ್ದಾರೆ. ಕಾಳಿಂಗ ಸರ್ಪದ ಬಗ್ಗೆ ಮಾಹಿತಿ ನೀಡಿದ ಹಾಗೂ ರಕ್ಷಿಸಲು ಸಹಕರಿಸಿದ ಆ ಮನೆಯವರು ಹಾಗೂ ಅರಣ್ಯ ಇಲಾಖೆಗೆ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮೇ 7ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ?

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement