ದೈನಂದಿನ ಸೋಪ್ ಒಪೆರಾ :ಆಂತರಿಕ ಬಿಕ್ಕಟ್ಟಿನ ಬಗ್ಗೆ ಬಹಿರಂಗವಾಗಿ ಪಂಜಾಬ್ ಕಾಂಗ್ರೆಸ್ ಟೀಕಿಸಿದ ಅದೇ ಪಕ್ಷದ ನಾಯಕ ಮನೀಶ್ ತಿವಾರಿ

ಚಂಡೀಗಡ: ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಭಾನುವಾರ ತಮ್ಮ ಪಕ್ಷದ ಪಂಜಾಬ್ ಘಟಕವನ್ನು ಬಹಿರಂಗವಾಗಿ ಟೀಕಿಸಿದ್ದಾರೆ ಮತ್ತು ಅವರು “ಇಂತಹ ಅವ್ಯವಸ್ಥೆ ಮತ್ತು ಅರಾಜಕತೆಯನ್ನು” ನೋಡಿಲ್ಲ ಎಂದು ಹೇಳಿದ್ದಾರೆ.
.ಕಾಂಗ್ರೆಸ್ಸಿನ ಜಿ 23 ಸದಸ್ಯರಾದ ತಿವಾರಿ ಅವರು ನನ್ನ 40 ವರ್ಷಗಳ ಕಾಂಗ್ರೆಸ್‌ ಜೀವನದಲ್ಲಿ ಈಗ ಪಂಜಾಬ್ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವಂತಹ ಅವ್ಯವಸ್ಥೆ ಮತ್ತು ಅರಾಜಕತೆಯನ್ನು ನಾನು ನೋಡಿಲ್ಲ” ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
ಪಂಜಾಬ್ ಕಾಂಗ್ರೆಸ್ ನಾಯಕರು ಪರಸ್ಪರರ ವಿರುದ್ಧ ಗುಟುರ್ ಭಾಷೆ” ಬಳಸುತ್ತಿದ್ದಾರೆ ಎಂದು ಹೇಳಿರುವ ಅವರು ದೈನಂದಿನ ಸೋಪ್ ಒಪೆರಾ” ದಿಂದ ಜನರು ಅಸಹ್ಯಪಡುವುದಿಲ್ಲ ಎಂದು ಪಕ್ಷವು ಭಾವಿಸಿದೆಯೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ಸಿನ ಪಂಜಾಬ್‌ ಅಧ್ಯಕ್ಷರಿಂದ ಎಐಸಿಸಿ ಸಹೋದ್ಯೋಗಿಗಳು ಚಿಕ್ಕ ಮಕ್ಕಳಂತೆ ಸಾರ್ವಜನಿಕವಾಗಿ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ. ಕಳೆದ ಐದು ತಿಂಗಳಿನಿಂದ, ಇದು ನಡೆಯುತ್ತಿದೆ. ಪಂಜಾಬ್‌ನ ಜನರು ಈ ದೈನಂದಿನ ಸೋಪ್ ಒಪೆರಾದಿಂದ ಅಸಹ್ಯಪಡುವುದಿಲ್ಲವೇ? ಎಂದು ತಿವಾರಿ ಟ್ವೀಟ್ ಮಾಡಿದ್ದಾರೆ.
ಪಂಜಾಬ್ ಕಾಂಗ್ರೆಸ್ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸ್ನೇಹಿತೆ ಹಾಗೂ ಪಾಕಿಸ್ತಾನಿ ಪತ್ರಕರ್ತೆ ಆರೋಸಾ ಆಲಂ ಅವರು ಐಎಸ್‌ಐ ಏಜೆಂಟ್‌ ಎಂದು ಪಂಜಾಬ್‌ ಉಪಮುಖ್ಯಮಂತ್ರಿ ಆರೋಪ ಮಾಡಿದ ನಂತರ ಕಾಂಗ್ರೆಸ್ ನಾಯಕ ತಿವಾರಿ ಟ್ವೀಟ್‌ಗಳು ಬಂದಿವೆ.
ಪಂಜಾಬ್ ಘಟಕದಲ್ಲಿನ ಆಂತರಿಕ ಕಲಹವನ್ನು ಪರಿಹರಿಸಲು ಕಾಂಗ್ರೆಸ್ ಈ ಹಿಂದೆ ರಚಿಸಿದ್ದ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಮಿತಿಯನ್ನು ತಿವಾರಿ ಗಂಭೀರ ದೋಷ” ಎಂದು ಕರೆದಿದ್ದಾರೆ.
ಕಾಂಗ್ರೆಸ್ ಪಂಜಾಬ್ ಘಟಕವು ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ನೇಮಿಸಿದ ನಂತರ ಮತ್ತು ಆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ನಂತರವೂ ಆಂತರಿಕ ಕಚ್ಚಾಟವನ್ನು ಎದುರಿಸುತ್ತಿದೆ.

ಪ್ರಮುಖ ಸುದ್ದಿ :-   ಒಳ್ಳೆಯ ಸುದ್ದಿ...| ಈ ವರ್ಷ ವಾಡಿಕೆಗಿಂತ ಮೊದಲೇ ಆಗಮಿಸಲಿದೆ ಮುಂಗಾರು ಮಳೆ...

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement