ಮಹಿಳೆಯ ಹೊಟ್ಟೆಯಲ್ಲಿತ್ತು 1.5 ಕೆಜಿ ಕೂದಲಿನ ಉಂಡೆ..!

ಮಡಿಕೇರಿ : ಮಹಿಳೆಯ ಹೊಟ್ಟೆಯಲ್ಲಿದ್ದ 1.5 ಕೆಜಿ ತೂಕದ ಕೂದಲಿನ ಉಂಡೆಯನ್ನು ವೈದ್ಯರು ಹೊರತೆಗೆದಿದ್ದಾರೆ.
ಹೊಟ್ಟೆ ನೋವೆಂದು ಕೊಡಗಿನ ಮಡಿಕೇರಿಯಲ್ಲಿರುವ ಆಸ್ಪತ್ರೆಗೆ ಬಂದಿದ್ದ ಮಹಿಳೆಯನ್ನು ಪರಿಶೀಲಿಸಿದ ವೈದ್ಯರು ನಂತರ ಸ್ಕ್ಯಾನಿಂಗ್ ಮಾಡಿದ್ದಾರೆ.
ಸ್ಕ್ಯಾನಿಂಗ್‌ನಲ್ಲಿ ಆಕೆಯ ಹೊಟ್ಟೆಯಲ್ಲಿ ದೊಡ್ಡ ಗಂಟೊಂದು ಇದೆ ಎಂಬುದು ಪತ್ತೆಯಾಯಿತು. ಹೊಟ್ಟೆಯಲ್ಲಿ ಯಾವುದೋ ಗಡ್ಡೆ ಬೆಳೆದಿರಬಹುದು ಎಂದು ವೈದ್ಯರು ಭಾವಿಸಿದ್ದರು. ಹೀಗಾಗಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದರು. ಆಪರೇಷನ್ ಮಾಡಿದ ವೈದ್ಯರೇ ಒಮ್ಮೆ ಹಃಹಾರಿದರು. ಆ ಮಹಿಳೆಯ ಹೊಟ್ಟೆಯಲ್ಲಿ ಯಾವುದೇ ಗಂಟು ಇರಲಿಲ್ಲ, ಬದಲಾಗಿ ಹೊಟ್ಟೆಯಲ್ಲಿ 1.5 ಕೆಜಿ ತೂಕದ ಕೂದಲಿನ ಉಂಡೆಯಿತ್ತು.
ಮಡಿಕೇರಿಯ ಕೊಡಗು ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ ನಲ್ಲಿ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಈ ಕೂದಲಿನ ಉಂಟೆ ಕಂಡುಬಂದಿದೆ. ಡಾ. ಅಜಿತ್ ಕುಮಾರ್ ನೇತೃತ್ವದ ವೈದ್ಯರ ತಂಡ ಮೂರೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ 1.5 ಕೆಜಿ ತೂಕದ ಕೂದಲಿನ ಉಂಟೆಯನ್ನು ಹೊರಗೆ ತೆಗೆದಿದ್ದಾರೆ.
ಈ ಮಹಿಳೆಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು ಎನ್ನಲಾಗಿದ್ದು, ಕೂದಲನ್ನು ಕಿತ್ತು ತಿನ್ನುತ್ತಿದ್ದಳು. ಪರಿಣಾಮ ಹೊಟ್ಟೆಯೊಳಗೆ ಕೂದಲು ಶೇಖರಣೆಗೊಂಡು ಗಡ್ಡೆಯಾಗಿ ಪರಿವರ್ತನೆಯಾಗಿತ್ತು.

ಪ್ರಮುಖ ಸುದ್ದಿ :-   ಬೆಳಗಾವಿ: ಹಾಡಹಗಲೇ ಸ್ಕ್ರೂ ಡ್ರೈವರ್​ನಿಂದ ಚುಚ್ಚಿ ಯುವಕನ ಕೊಲೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement