ಮಡಿಕೇರಿ: ಎಲ್‌ಇಡಿ ಬಲ್ಬ್ ನುಂಗಿದ 8 ತಿಂಗಳ ಮಗು

ಮಡಿಕೇರಿ: ಎಂಟು ತಿಂಗಳ ಮಗುವೊಂದು ಎಲ್‌ಇಡಿ ಬಲ್ಬ್ ನುಂಗಿದ ಆತಂಕಕಾರಿ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ನಡೆದಿದ್ದು, ವೈದ್ಯರ ಸೂಕ್ತ ಚಿಕಿತ್ಸೆಯಿಂದ ಮಗುವಿನ ಪ್ರಾಣ ಉಳಿದಿದೆ. ಮಗು ಏಕಾಏಕಿ ವಿಪರೀತವಾಗಿ ಅಳಲು ಆರಂಭಿಸಿದೆ. ಏನೇ ಮಡಿದರೂ ಮಗು ಅಳುವನ್ನು ನಿಲ್ಲಿಸದ ಕಾರಣ ಗಾಬರಿಗೊಂಡ ಪೋಷಕರು ತಕ್ಷಣವೇ ಮಗುವನ್ನು ನಗರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು … Continued

ಮಡಿಕೇರಿ ; ಸಾಕಾನೆಗಳ ನಡುವೆ ಭೀಕರ ಕಾದಾಟ; ಕೆಳಗೆ ಬಿದ್ದ ಆನೆಯಡಿ ಸಿಲುಕಿ ಮಹಿಳೆ ಸಾವು

ಮಡಿಕೇರಿ: ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ದಿಢೀರ್‌ ಸಂಭವಿಸಿದ ಸಾಕಾನೆಗಳ ನಡುವಿನ ಕಾಳಗದ ಮಧ್ಯೆ ಸಿಲುಕಿದ ತಮಿಳುನಾಡಿನ ಮಹಿಳಾ ಪ್ರವಾಸಿಗರೊಬ್ಬರು ಆನೆಯಡಿ ಸಿಲುಕಿ ಅತ್ಯಂತ ದಾರುಣವಾಗಿ ಮೃತಪಟ್ಟಿದ್ದಾರೆ. ಚೆನ್ನೈ ಮೂಲದ ಜ್ಯುನೇಶ್ (33) ಮೃತಪಟ್ಟ ದುರ್ದೈವಿ ಮಹಿಳಾ ಪ್ರವಾಸಿ ಎಂದು ಗುರುತಿಸಲಾಗಿದೆ. ಮೃತ ಜ್ಯುನೇಶ್ … Continued

ಮಡಿಕೇರಿ: ತಲೆಗೆ ಗುಂಡು ಹಾರಿಸಿಕೊಂಡು ಶಿಕ್ಷಕಿ ಆತ್ಮಹತ್ಯೆ

ಮಡಿಕೇರಿ: ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ತಮ್ಮ ಪ್ರೀತಿಯ ವಿದ್ಯಾರ್ಥಿಗಳಿಗೆ ಅಂತಿಮ ವಿದಾಯ ಹೇಳಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಶಿಕ್ಷಕಿಯನ್ನು ಚೇರಂಬಾಣೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಎ. ರೋಹಿಣಿ(51) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿದ್ದ ಕೋವಿಯಿಂದಲೇ … Continued

ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು : ಅಪಘಾತಕ್ಕೆ ನಾನೇ ಕಾರಣವೆಂದು ಮನನೊಂದು ಮತ್ತೊಬ್ಬ ಬೈಕ್‌ ಸವಾರ ಆತ್ಮಹತ್ಯೆ..

ಮಡಿಕೇರಿ : ಮಡಿಕೇರಿಯಲ್ಲಿ ಶುಕ್ರವಾರ ನಡೆದ ಎರಡು ಬೈಕ್‌ಗಳ ನಡುವಿನ ಅಪಘಾತದಲ್ಲಿ ಪದವೀಧರ ವಿದ್ಯಾರ್ಥಿ ಮೃತಪಟ್ಟ ನಂತರ ಈ ಅಪಘಾತಕ್ಕೆ ತಾನೇ ಕಾರಣ, ನನ್ನಿಂದಾಗಿ ಒಂದು ಜೀವ ಹೋಯಿತು ಎಂದು ಮನನೊಂದ ಮತ್ತೊಬ್ಬ ಬೈಕ್ ಸವಾರ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಮಮನೊಂದು ಆತ್ಮಹತ್ಯೆ ಮಾಡಿಕೊಂಡ ಬೈಕ್‌ ಸವಾರನನ್ನು ಹೆರವನಾಡಿನ ತಮ್ಮಯ್ಯ (57) ಎಂದು ಗುರುತಿಸಲಾಗಿದೆ. … Continued

ಮಡಿಕೇರಿ : ರೆಸಾರ್ಟ್‌ನಲ್ಲಿ ಮಗು ಸೇರಿ ಮೂವರು ಶವವಾಗಿ ಪತ್ತೆ

ಮಡಿಕೇರಿ: ಕೇರಳದಿಂದ ಪ್ರವಾಸಕ್ಕೆ ಬಂದಿದ್ದ ದಂಪತಿ, ಮಗಳ ಮೃತದೇಹ ಮಡಿಕೇರಿ ತಾಲೂಕಿನ ಕಡಗದಾಳು ಹೋಮ್‌ಸ್ಟೇನಲ್ಲಿ ಶನಿವಾರ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ಸಾವಿಗೆ ನಿಖರ ಕಾರಣ ತಿದುಬಂದಿಲ್ಲ. ಮೃತರನ್ನು ಕೇರಳದ ಕೊಲ್ಲಂ ನಿವಾಸಿ ವಿನೋದ್ (41), ಝುಬಿ ಅಬ್ರಹಾಂ (37), ಜೋಹನ್ (11) ಎಂದು ಹೇಳಲಾಗಿದೆ. ತಮ್ಮ ಮಗಳು ಜೋಹನ್‌ ಅವಳನ್ನು ಮೊದಲು … Continued

ಮಡಿಕೇರಿ : ಮಣ್ಣು ಕುಸಿದು ಮೂವರು ಕಾರ್ಮಿಕರು ಸಾವು

ಮಡಿಕೇರಿ: ಮಣ್ಣಿನ ದಿಬ್ಬ ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಮಂಗಳವಾರ ನಡೆದಿದೆ. ಮಡಿಕೇರಿಯ ರೆಡ್ ಕ್ರಾಸ್ ಬಳಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯ ಬರೆ ಕುಸಿತದಿಂದ ಒಟ್ಟು ಐವರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಅವರಲ್ಲಿ ಮೂವರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಬೆಳಗಾವಿ ಜಿಲ್ಲೆಯ … Continued

ಸಾರಿಗೆ ಬಸ್- ಕಾರು ನಡುವೆ ಭೀಕರ ಅಪಘಾತ: ಇಬ್ಬರು ಮಕ್ಕಳು ಸೇರಿ ಆರು ಮಂದಿ ಸಾವು

ಮಡಿಕೇರಿ: ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಮಾರುತಿ ಸ್ವಿಫ್ಟ್ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಜನರು ಮೃತಪಟ್ಟ ಘಟನೆ ಗಡಿ ಗ್ರಾಮವಾದ ಸಂಪಾಜೆಯಲ್ಲಿ ನಡೆದಿದೆ. ಮಡಿಕೇರಿ ತಾಲೂಕಿನ ಸಂಪಾಜೆ ಪೆಟ್ರೋಲ್ ಬಂಕ್ ಬಳಿ ಈ ದುರ್ಘಟನೆ ನಡೆದಿದ್ದು, ಸುಳ್ಯದಿಂದ ವಿರಾಜಪೇಟೆಗೆ ತೆರಳುತ್ತಿದ್ದ ಬಸ್ ಹಾಗೂ ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಮಾರುತಿ … Continued

ಮಡಿಕೇರಿ: ಕೋಟೆ ಅಬ್ಬಿ ಜಲಪಾತದ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಪ್ರವಾಸಿಗರ ಸಾವು

ಮಡಿಕೇರಿ: ಪ್ರವಾಸಕ್ಕೆಂದು ಬಂದಿದ್ದ ತೆಲಂಗಾಣ ಮೂಲದ ಮೂವರು ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಪ್ರವಾಸಿ ತಾಣ ಮುಕ್ಕೋಡ್ಲುವಿನ ಕೋಟೆ ಅಬ್ಬಿ ಜಲಪಾತದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ತೆಲಂಗಾಣದಿಂದ ಕೊಡಗಿಗೆ ಆಗಮಿಸಿದ್ದ 13 ಮಂದಿ ಪ್ರವಾಸಿಗರು ಕುಶಾಲನಗರ ಸಮೀಪದ ಹೋಂಸ್ಟೇನಲ್ಲಿ ವಾಸ್ತವ್ಯ ಮಾಡಿದ್ದರು. ಇಂದು, ಭಾನುವಾರ ಬೆಳಿಗ್ಗೆ ಪ್ರವಾಸಕ್ಕೆ ಮಾಂದಲ್‌ಪಟ್ಟಿ ಸಮೀಪದ ಮುಕ್ಕೋಡ್ಲು … Continued

ತಂದೆ ನೇಣಿಗೆ ಶರಣಾದ ಸುದ್ದಿ ಕೇಳಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಗ..

ಮಡಿಕೇರಿ : ತಂದೆ ಹಾಗೂ ಮಗ ಇಬ್ಬರೂ ಆತ್ಮಹತ್ಯೆಗೆ ಶರಣಾದ ಘಟನೆ ವಿರಾಜಪೇಟೆಯ ಬಿಳುಗುಂದ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಗ್ರಾಮದ ನಿವಾಸಿಗಳಾದ ತಂದೆ ಸುಬ್ಬಯ್ಯ (76) ಹಾಗೂ ಪುತ್ರ ಗಿರೀಶ್ (39) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಮಾ.7ರಂದು ಸಂಜೆ ಮಂಡಲ ಕಚೇರಿಗೆ ಹೋಗಿ ಬರುವುದಾಗಿ ತೆರಳಿದ್ದ ಸುಬ್ಬಯ್ಯ ತೋಟದ ಮಧ್ಯೆ ನೇಣು ಬಿಗಿದುಕೊಂಡು … Continued

ಮಹಿಳೆಯ ಹೊಟ್ಟೆಯಲ್ಲಿತ್ತು 1.5 ಕೆಜಿ ಕೂದಲಿನ ಉಂಡೆ..!

ಮಡಿಕೇರಿ : ಮಹಿಳೆಯ ಹೊಟ್ಟೆಯಲ್ಲಿದ್ದ 1.5 ಕೆಜಿ ತೂಕದ ಕೂದಲಿನ ಉಂಡೆಯನ್ನು ವೈದ್ಯರು ಹೊರತೆಗೆದಿದ್ದಾರೆ. ಹೊಟ್ಟೆ ನೋವೆಂದು ಕೊಡಗಿನ ಮಡಿಕೇರಿಯಲ್ಲಿರುವ ಆಸ್ಪತ್ರೆಗೆ ಬಂದಿದ್ದ ಮಹಿಳೆಯನ್ನು ಪರಿಶೀಲಿಸಿದ ವೈದ್ಯರು ನಂತರ ಸ್ಕ್ಯಾನಿಂಗ್ ಮಾಡಿದ್ದಾರೆ. ಸ್ಕ್ಯಾನಿಂಗ್‌ನಲ್ಲಿ ಆಕೆಯ ಹೊಟ್ಟೆಯಲ್ಲಿ ದೊಡ್ಡ ಗಂಟೊಂದು ಇದೆ ಎಂಬುದು ಪತ್ತೆಯಾಯಿತು. ಹೊಟ್ಟೆಯಲ್ಲಿ ಯಾವುದೋ ಗಡ್ಡೆ ಬೆಳೆದಿರಬಹುದು ಎಂದು ವೈದ್ಯರು ಭಾವಿಸಿದ್ದರು. ಹೀಗಾಗಿ ಮಹಿಳೆಗೆ … Continued