
ಮುಂಬೈ: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಈಗ ಆರ್ಯನ್ ಖಾನ್ ಡ್ರಗ್ಸ್‌ಗೆ ಸಂಬಂಧಿಸಿದಂತೆ ಇತರರಿಗೆ ಮೊಬೈಲ್‌ನಲ್ಲಿ ಕಳುಹಿಸಿರುವ ಸಂದೇಶಗಳನ್ನು ಅಳಿಸಿಹಾಕಲು ಎಥಿಕಲ್ ಹ್ಯಾಕರ್ ಒಬ್ಬರಿಗೆ ಲಂಚ ನೀಡಿರುವುದಾಗಿ ಆರೋಪ ಕೇಳಿಬಂದಿದೆ.
ಅಕ್ಟೋಬರ್ 27 ರಂದು, ಶಾರುಖ್ ಖಾನ್ ಅವರ ಮ್ಯಾನೇಜರ್ ಮತ್ತು ಇತರರ ಕರೆ ದಾಖಲೆಗಳನ್ನು ಪಡೆಯಲು 5 ಲಕ್ಷ ರೂಪಾಯಿಗಳನ್ನು ಕೇಳಲಾಗಿದೆ ಎಂದು ಎಥಿಕಲ್ ಹ್ಯಾಕರ್ ಒಬ್ಬರು ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.
ದಿ ಫ್ರೀ ಪ್ರೆಸ್ ಜರ್ನಲ್‌ನ ವರದಿಯ ಪ್ರಕಾರ, ಎಥಿಕಲ್ ಹ್ಯಾಕರ್ ಆಗಿರುವ ಮನೀಶ್ ಭಂಗಲೆ ಮುಂಬೈ ಪೊಲೀಸ್ ಕಮಿಷನರೇಟ್‌ಗೆ ಪತ್ರ ಬರೆದಿದ್ದು, ಅಲೋಕ್ ಜೈನ್ ಮತ್ತು ಶೈಲೇಶ್ ಚೌಧರಿ ಎಂಬ ಇಬ್ಬರು ವ್ಯಕ್ತಿಗಳು ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಸೇರಿದಂತೆ ಕೆಲವರ ಕರೆ ದಾಖಲೆಗಳನ್ನು ಪಡೆಯಲು ಅಕ್ಟೋಬರ್ 6 ರಂದು ತನ್ನನ್ನು ಸಂಪರ್ಕಿಸಿದ್ದಾರೆ ಎಂದು ತಿಳಿಸಿದ್ದಾರೆ. .
ಆರ್ಯನ್ ಖಾನ್ ಚಾಟ್’ ಎಂದು ಹೆಸರಿಸಲಾದ ವಾಟ್ಸಾಪ್ ಚಾಟ್ ಬ್ಯಾಕಪ್ ಫೈಲ್ ಅನ್ನು ಸಹ ವ್ಯಕ್ತಿಗಳು ತೋರಿಸಿದರು ಮತ್ತು ಪ್ರಭಾಕರ್ ಸೈಲ್ ಹೆಸರಿನಲ್ಲಿ ಡಮ್ಮಿ ಸಿಮ್ ಕಾರ್ಡ್ ನೀಡುವಂತೆ ಕೇಳಿಕೊಂಡರು ಎಂದು ವರದಿ ಹೇಳಿದೆ.
ಆದರೆ, ಭಾಂಗಲೆ ಆ ಕೆಲಸವನ್ನು ಕೈಗೆತ್ತಿಕೊಳ್ಳಲಿಲ್ಲ. ಕೆಲವು ದಿನಗಳ ನಂತರ ಸೈಲ್ ಅವರ ಹೆಸರನ್ನು ಸುದ್ದಿಯಲ್ಲಿ ನೋಡಿದಾಗ, ಅವರು ತಮ್ಮ ಹೆಸರಿನಲ್ಲಿ ಡಮ್ಮಿ ಸಿಮ್ ಕಾರ್ಡ್ ಮಾಡಲು ಸಂಪರ್ಕಿಸಿದ್ದಾಗಿ ಮನೀಶ ಭಂಗಲೆ ಅಧಿಕಾರಿಗಳಿಗೆ ತಿಳಿಸಲು ಯೋಚಿಸಿದರು.
ಈ ತಿಂಗಳ ಆರಂಭದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಗೋವಾಗೆ ಐಷಾರಾಮಿ ಕ್ರೂಸ್ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಬಂಧಿಸಲಾದ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿದೆ. ಸದ್ಯ ಅವರ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.



ನಿಮ್ಮ ಕಾಮೆಂಟ್ ಬರೆಯಿರಿ