ಪಾಕಿಸ್ತಾನದ ಪಿಟಿವಿ ಶೋನಲ್ಲಿ ವೇಗದ ಬೌಲರ್‌ ಶೋಯಿಬ್ ಅಖ್ತರ್‌ಗೆ ಹೊರಹೋಗಬಹುದೆಂದು ಹೇಳಿ ಅವಮಾನಿಸಿದ ನಿರೂಪಕ..!

ಕರಾಚಿ: ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಅವರನ್ನು ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ನಿರೂಪಕ ಸ್ಟುಡಿಯೋದಿಂದ ಹೊರಹೋಗುವಂತೆ ಹೇಳಿ ಅವಮಾನ ಮಾಡಿದ ಘಟನೆ ನಡೆದಿದೆ.
ನ್ಯೂಜಿಲೆಂಡ್ ಹಾಗೂ ಪಾಕ್ ನಡುವಿನ ಟಿ20 ವಿಶ್ವಕಪ್ ಪಂದ್ಯದ ವಿಶ್ಲೇಷಣೆ ವೇಳೆ ಈ ಘಟನೆ ನಡೆದಿದ್ದು, ಜಗತ್ತಿನಲ್ಲಿ ಅತ್ಯಂತ ವೇಗದ ಬೌಲರ್ ಎನಿಸಿಕೊಂಡಿದ್ದ 46 ವರ್ಷದ ಶೋಯಿಬ್ ಅಖ್ತರ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡ ಬಗ್ಗೆ ಈಗ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ.

ವೆಸ್ಟ್‌ ಇಂಡೀಸ್‌ನ ವಿವಿಯನ್ ರಿಚರ್ಡ್ಸ್, ಇಂಗ್ಲೆಂಡಿನ ಡೇವಿಡ್ ಗೋವರ್, ಪಾಕ್‌ನ ರಶೀದ್ ಲತೀಫ್‌, ಉಮರ್ ಗುಲ್, ಅಕೀಬ್ ಜಾವೆದ್ ಹಾಗೂ ಪಾಕ್ ಮಹಿಳಾ ತಂಡದ ನಾಯಕಿ ಸನಾ ಮೀರ್ ಹಾಗೂ ಶೋಯಿಬ್ ಅಖ್ತರ್ ಒಳಗೊಂಡ ಕಾರ್ಯಕ್ರಮವನ್ನು ಪಿಟಿವಿಯ ಖ್ಯಾತ ಕ್ರಿಕೆಟ್ ತಜ್ಞ, ನೌಮಾನ್ ನೈಯಾಜ್ ನಡೆಸಿಕೊಡುತ್ತಿದ್ದರು. ಚರ್ಚೆ ವೇಳೆ ಅಖ್ತರ್ ಹಾಗೂ ನೌಮಾನ್ ನೈಯಾಜ್ ನಡುವೆ ವಾಗ್ವಾದವಾಯಿತು ಆಗ ನೈಯಾಜ್‌, ಸ್ಟುಡಿಯೋದರಿಂದ ನೀವು ಹೊರ ನಡೆಯಬಹುದು ಎಂದು ಸಿಟ್ಟಿನಿಂದ ಹೇಳಿದ್ದಾರೆ.
ನಿರೂಪಕ ನೌಮನ್ ನಿಯಾಜ್ ಅವರ ಪ್ರಶ್ನೆಯನ್ನು ಅಖ್ತರ್ ನಿರ್ಲಕ್ಷಿಸಿದಾಗ ಮತ್ತು ವೇಗದ ಬೌಲರ್ ಹ್ಯಾರಿಸ್ ರೌಫ್ ಬಗ್ಗೆ ಮಾತನಾಡಲು ನಿರ್ಧರಿಸಿದಾಗ ಸಮಸ್ಯೆ ಪ್ರಾರಂಭವಾಯಿತು, ಇದು ಅಖ್ತರ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ನಿರೂಪಕ ನೌಮನ್‌ ನಿಯಾಜ್‌ ಸಿಟ್ಟಾದರು.

ರೌಫ್‌ ಎಲ್ಲಾ ಶ್ರೇಯಸ್ಸಿಗೂ ಅರ್ಹ, ಲಾಹೋರ್ ಖಲಂದರ್‌ಗಳು ನಮಗೆ ಹ್ಯಾರಿಸ್ ರೌಫ್ ಅನ್ನು ನೀಡಿದರು, ”ಎಂದು ಅಖ್ತರ್ ಅವರು ಮಾಜಿ ಟೆಸ್ಟ್ ವೇಗಿ ಕಡೆಗೆ ತೋರಿಸಿದಾಗ ನೋಮನ್ ಅವರನ್ನು ಅಡ್ಡಿಪಡಿಸಲು ಪ್ರಯತ್ನಿಸಿದರು.
ನಿರೂಪಕ ನೌಮನ್‌, ಅಖ್ತರ್ ತಮ್ಮನ್ನುಅಲಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಟ್ಟಿಗೆದ್ದರು, ಅವರು ಶೋಯೆಬ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಮತ್ತು ತಾವು ಸಹಿಸುವುದಿಲ್ಲ ಎಂದು ಹೇಳಿದರು. ಇದು ವಾಗ್ವಾದಕ್ಕೆ ಕಾರಣವಾಗಿ ನೌಮನ್‌ ನಯಾಜ್‌ ಅವರು ಶೋಯೆಬ್‌ ಅಖ್ತರ್‌ ಅವರಿಗೆ ಹೊರನಡೆಯಬಹುದು ಎಂದು ಹೇಳಿದರು.
ಬಳಿಕ ಸ್ಟುಡಿಯೊದಿಂದ ಹೊರನಡೆದಿರುವ ಅಖ್ತರ್, ದೇಶದ ಎದುರಲ್ಲಿ ನೇರಪ್ರಸಾರದ ವೇಳೆ ನನಗೆ ಅವಮಾನವಾಗಿದೆ. ಇದಕ್ಕಾಗಿ ಪಿಟಿವಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನೀವು ನನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದೀರಾ, ಸ್ಟುಡಿಯೋದಿಂದ ಹೊರ ನಡೆಯಿರಿ ಎಂದು ನಿರೂಪಕರು ಹೇಳಿದರೆಂದು ಅಖ್ತರ್ ಅಸಮಾಧಾನ ಹೊರಹಾಕಿದ್ದಾರೆ. ಪಾಕ್ ಪರ ಅಖ್ತರ್ 46 ಟೆಸ್ಟ್ ಹಾಗೂ 163 ಏಕದಿನ ಪಂದ್ಯಗಳನ್ನಾಡಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement